ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಮುಂಗಾರು ಮಳೆ ಕೈಕೊಟ್ಟ ನಂತ್ರ ನೀರಿಗೆ ಆಹಾಕಾರ ಎದ್ದಿದೆ. ಇಂತದ್ದರ ನಡುವೆ ಕುಡಿಯೋಕೆ ನೀರು ಕೇಳಿದಂತ ಯುವಕನ ಮೇಲೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರು ಹಲ್ಲೆ ಮಾಡಿರೋದಾಗಿ ಹೇಳಲಾಗುತ್ತಿದೆ.
ಹೌದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಯನ್ನ ಬಗೆಹರಿಸಿ. ಹಲವಾರು ಬಾರಿ ಕೇಳಿದರೂ ಯಾಕೆ ಬಗೆಹರಿಸಿಲ್ಲ ಎಂದು ತಮ್ಮನ್ನು ಪ್ರಶ್ನೆ ಮಾಡಿದ ಯುವಕನೊಬ್ಬನ ಮೇಲೆ ಚಿತ್ರದುರ್ಗದ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಕೈ ಮಾಡಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿದೆ.
ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಂತ ವೇಳೆಯಲ್ಲಿ ಈ ಘಟನೆ ನಡೆದಿದೆ.
ವೈರಲ್ ಆಗಿರೋ ವೀಡಿಯೋದಲ್ಲಿ ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸಬೇಕಿದ್ದಂತ ಶಾಸಕರೇ, ಏಕ ವಚನದಲ್ಲೇ ಕೂಗಾಡಿರೋದನ್ನು ಕಾಣಬಹುದು. ಶಾಸಕರು ರೇಗಾಡುತ್ತಿದ್ದಂತೆ ಅವರ ವಿರುದ್ಧವೇ ಗ್ರಾಮಸ್ಥರು ಕೂಡ ತಿರುಗಿ ಬಿದ್ದು, ಆಕ್ರೋಶ ವ್ಯಕ್ತ ಪಡಿಸಿರೋದನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ವೀಡಿಯೋದಲ್ಲಿ ಕಾಣಬಹುದಾಗಿದೆ.
ಮತದಾರರ ಗಮನಕ್ಕೆ : ಮೊಬೈಲ್ ನಲ್ಲೇ ‘ವೋಟರ್ ಸ್ಲಿಪ್’ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ