ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಅಬ್ಬರ ಮುಂದುವರೆದಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ.
ಹಾವೇರಿ, ಕೊಪ್ಪಳ, ಗದಗ, ಬಳ್ಳಾರಿ ಸೇರಿದಂತೆ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಮೂವರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ವಿಜಯಕುಮಾರ ಮದುರೈ (32), ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಬಳಿ ಕುರಿ ಮೇಯಿಸುತ್ತಿದ್ದ ಶ್ರೀನಿವಾಸ ಗೊಲ್ಲರ (16), ಚಿಟಗುಪ್ಪದ ಬೆಳಕೇರಾದಲ್ಲಿ ಕಾರ್ಮಿಕ ಚಂದ್ರಕಾಂತ್ ಬಸವರಾಜ (25) ಎಂಬುವರು ಸಿಡಿಲು ಬಡಿದ ಸಾವನ್ನಪ್ಪಿದ್ದಾರೆ.