ಬೆಂಗಳೂರು: ಹಾಪ್‌ಕಾಮ್ಸ್ ರೈತರು ಹಾಗೂ ನೌಕರರ ಸಂಘ, ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಸಮ್ಮಿಲನ ವೇದಿಕೆ ಹಾಗೂ ರಾಜ್ಯ ಆರ್ಯ ವೈಶ್ಯ ಸಮುದಾಯದವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ಬೆಂಬಲ ಘೋಷಿಸಿದ್ದಾರೆ.
ಇಂದು ಹಾಪ್‌ಕಾಮ್ಸ್ ರೈತರು ಹಾಗೂ ನೌಕರರ ಸಂಘ ಸಭೆಯನ್ನು ನಡೆಸಿ, ಕಳೆದ 30 ವರ್ಷಗಳಿಂದಲೂ ಹಾಪ್‌ಕಾಮ್ಸ್ ಹಾಗೂ ನೌಕರರ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿ, ಹಾಫ್ ಕಾಮ್ಸ್ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಿರುವ ಏಕೈಕ ರಾಜಕಾರಣಿ ಅಂದರೆ ಅದು ರಾಮಲಿಂಗಾರೆಡ್ಡಿರವರು, ಅವರ ಕಾರ್ಯವನ್ನು ಸ್ಮರಿಸಿ ಅಖಂಡ ಹಾಪ್ ಕಾಮ್ಸ್ ನೌಕರರು ರಾಮಲಿಂಗಾರೆಡ್ಡಿ ರವರ ಮಗಳಾದ ಸೌಮ್ಯ ರೆಡ್ಡಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಘೋಷಿಸಿದರು.
ಅದರಂತೆ ರಾಜ್ಯ ನೇಕಾರರ ಸಮುದಾಯದ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣಪ್ಪ ರವರು ಮಾತನಾಡಿ ರಾಜ್ಯ ಸರ್ಕಾರವು ನೇಕಾರರಿಗೆ ಉಚಿತ ವಿದ್ಯುತ್, ರೂ.2 ಲಕ್ಷದವರೆಗೆ ಶೇ.1 ರೂ ಬಡ್ಡಿ ದರದಲ್ಲಿ ಸಾಲ, ರೂ. 2 ರಿಂದ ರೂ.5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಇತರೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿರುವ ಸರ್ಕಾರಕ್ಕೆ ನಮ್ಮ ಬೆಂಬಲ. ನೇಕಾರರ ಸಮುದಾಯದ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣಪ್ಪ, ಮುಖಂಡರುಗಳಾದ ಡಾ. ಪ್ರಕಾಶ್, ವೆಂಕಟೇಶ್, ಬಾಲರಾಜ್ ಹಾಗೂ ಪ್ರೊ. ರಾಧಾಕೃಷ್ಣ, ಕೆ.ಎಂ ನಾಗರಾಜ್, ಮಮತಾ ದೇವರಾಜ್, ಮಂಜುಳಾ ನಾಯ್ಡು, ಸದರಿ ಸಭೆಗಳಲ್ಲಿ ಉಪಸ್ಥಿತರಿದ್ದರು.
ಜಯನಗರದಲ್ಲಿ ಇಂದು ಸಭೆ ನಡೆಸಿದ ರಾಜ್ಯ ಆರ್ಯ ವೈಶ್ಯ ಸಮುದಾಯದ ಮುಖಂಡರುಗಳು ರಾಮಲಿಂಗಾ ರೆಡ್ಡಿರವರು ಸದಾ ವೈಶ್ಯ ಸಮಾಜದ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಹತ್ತು ಹಲವು ಕಾರ್ಯಗಳಿಗೆ ನಿರಂತರ ಸಹಕಾರ ನೀಡಿದ್ದಾರೆ. ಅವರ ಜನಪರ ಕಾರ್ಯಗಳನ್ನು ಅವರ ಮಗಳು ಕೂಡ ಮುಂದುವರೆಸುತ್ತಾರೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ಈಗಾಗಲೇ ಅವರು ಶಾಸಕರಾಗಿದ್ದಾಗ ಜನಾನುರಾಗಿ ಕೆಲಸಕಾರ್ಯಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಆದ್ದರಿಂದ ನಮ್ಮಸಮಾಜದ ಬೆಂಬಲ ಸೌಮ್ಯರೆಡ್ಡಿ ಅವರಿಗೆ ಎಂದು ತಿಳಿಸಿದರು.
ಸೌಮ್ಯ ರೆಡ್ಡಿಗೆ ಬೆಂಬಲ ಸೂಚಿಸಿದ ಎಲ್ಲಾ ಸಮುದಾಯದ ಮುಖಂಡರುಗಳಿಗೆ ಈ ಸಭೆಯಲ್ಲಿ ಉಪಸ್ಥಿತರಿದ್ದ ರಾಮಲಿಂಗಾರೆಡ್ಡಿ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಧನ್ಯವಾದ ಸಲ್ಲಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಮತಾಂಧ ಶಕ್ತಿಗಳು ಹಿಂದೂಗಳನ್ನು ಕೊಲ್ಲಿಸುವುದಕ್ಕಾ?- BJP ಪ್ರಶ್ನೆ
ಲೋಕಸಭಾ ಚುನಾವಣೆ : ಮೊಬೈಲ್ ನಲ್ಲೇ ‘ವೋಟರ್ ಸ್ಲಿಪ್’ ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ