ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸೋ ವಾಹನ ಸವಾರರಿಗೆ ಸಂಚಾರ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೋಬ್ಬರಿ 19.55 ಕೋಟಿ ದಂಡವನ್ನು ವಸೂಲಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ರೂಲ್ಸ್ ಬ್ರೇಕ್ ಮಾಡೋರಿಗೆ, ಸಂಚಾರ ಪೊಲೀಸರು ಆಗಾಗ್ಗೆ ಶಾಕ್ ನೀಡ್ತಾ ಇದ್ದಾರೆ. ಈಗ 1 ಲಕ್ಷಕ್ಕೂ ಹೆಚ್ಚು ದಂಡದ ಮೊತ್ತವಿರುವ 123 ವಾಹನಗಳ ಪಟ್ಟಿ ಮಾಡಿ, ವಾಹನ ಮಾಲೀಕರ ಪತ್ತೆಗೆ ನೋಟಿಸ್ ನೀಡಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೇ ದಂಡ ಪಾವತಿಸದೇ ಇದ್ದಂತವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸೋದಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನೂ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘಿಸಿದಂತ 3,71,516 ವಾಹನ ಮಾಲೀಕರಿಂದ ಬರೋಬ್ಬರಿ 19,54,16,400 ದಂಡವನ್ನು ವಸೂಲಿ ಮಾಡಿದ್ದಾರೆ. ಇವುಗಳಲ್ಲಿ 2,742 ಬೈಕ್ ಸವಾರರಿಂದ 3,61,292 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಮಾರು 18,76,34,300 ರೂ ದಂಡವನ್ನು ವಸೂಲಿ ಮಾಡಿದ್ದು ಸೇರಿದೆ.
ಕನ್ನಡಿಗರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಎಂದಿಗೂ ಸಹಿಸುವುದಿಲ್ಲ: ರಣದೀಪ್ ಸುರ್ಜೇವಾಲ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ