ಬೆಂಗಳೂರು: ಸಹೋದರನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಘಟನೆಯಲ್ಲಿ ಯುವತಿಯೊಬ್ಬಳು ಸಜೀವಾಗಿ ಸಾವನ್ನಪ್ಪಿರುವ ಬೆಂಗಳೂರಿನ ಮಾದಾವರ ಬಳಿ ಘಟನೆ ನಡೆದಿದೆ.
ಕಾರಿನಲ್ಲಿ ಒಟ್ಟು 8 ಜನ ಪ್ರಯಾಣ ಮಾಡ್ತಿದ್ರು. ಏಳು ಜನಕ್ಕೆ ಸುಟ್ಟ ಗಾಯಗಳಾಗಿದ್ರೇ 15 ವರ್ಷದ ಹುಡುಗಿಯೊಬ್ಬಳು ಸಜೀವ ದಹನವಾಗಿದ್ದಾಳೆ ಎನ್ನಲಾಗಿದೆ. ಸಾವನ್ನಪ್ಪಿರುವ ಯುವತಿಯನ್ನು ದಿವ್ಯಾ ಎನ್ನಲಾಗಿದೆ.
ಇನ್ನೂ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್ ಹಾಗೂ ಶಾಂತಿಲಾಲ್ ಗಾಯಗೊಂಡಿದ್ದಾರೆ. ಇದಲ್ಲದೇ ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ. ಮಾದಾವರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳುಗಳೆಲ್ಲರೂ ಗುಜರಾತಿ ಮೂಲದ ಕುಟುಂಬದವರು ಅಂಥ ತಿಳಿದು ಬಂದಿದೆ.