ಬೆಂಗಳೂರು: ನಿನ್ನೆ ಬೆಂಗಳೂರಿನ ಬಿನ್ನಿಮಿಲ್ ಬಳಿಯಲ್ಲಿ 2 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದರು. ಅಲ್ಲದೇ ಐಟಿ ಇಲಾಖೆಗೂ ಮಾಹಿತಿ ನೀಡಲಾಗಿತ್ತು. ಇದು ತಮ್ಮ ಹಣವೆಂದು ಹೇಳಿಕೊಂಡಿದ್ದಂತ ಬಿಜೆಪಿಯೂ, ಅದಕ್ಕೆ ಪೂರಕ ದಾಖಲೆ ಒದಗಿಸಿದ ಕಾರಣ, ಕ್ಲೀನ್ ಚಿಟ್ ನೀಡಲಾಗಿದೆ. ಆದ್ರೇ ಕಾಂಗ್ರೆಸ್ ಮಾತ್ರ ಇದು ಪ್ರಜಾಪ್ರಭುತ್ವದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂಬುದಾಗಿ ವಾಗ್ಧಾಳಿ ನಡೆಸಿದೆ.
ಬೆಂಗಳೂರಿನ ಬಿನ್ನಿಮಿಲ್ ಬಳಿಯಲ್ಲಿ ಏಪ್ರಿಲ್.20ರ ಶನಿವಾರದ ನಿನ್ನೆಯ ದಿವಸ ಚುನಾವಣಾಧಿಕಾರಿಗಳಿಂದ 2 ಕೋಟಿ ಹಣವನ್ನು ಜಪ್ತಿ ಮಾಡಲಾಗಿತ್ತು. ಈ ಹಣ ತಮಗೆ ಸೇರಿದ್ದು ಎಂಬುದಾಗಿ ಬಿಜೆಪಿ ತಿಳಿಸಿತ್ತು.
ಇದಷ್ಟೇ ಅಲ್ಲದೇ ಮಾರ್ಚ್.27ರಂದು ಕೆನರಾ ಬ್ಯಾಂಕ್ ನಿಂದ ಡ್ರಾ ಮಾಡಿ, ಕಚೇರಿಯಲ್ಲಿ ಇರಿಸಲಾಗಿತ್ತು. ಈ ಹಣವನ್ನು ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳ ಚುನಾವಣಾ ಕಾರ್ಯಕ್ಕೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದಾಗ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿತ್ತು.
ಬಿಜೆಪಿಯ ಈ ಮಾಹಿತಿಯನ್ನು ಚುನಾವಣಾ ಆಯೋಗ ಪರಿಶೀಲಿಸಿ, ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿತ್ತು. ಬಿಜೆಪಿ ನೀಡಿದಂತ ಮಾಹಿತಿ ಸ್ಪಷ್ಟ, ನೈಜತೆಯಿಂದ ಕೂಡಿದ್ದು ಎಂಬುದಾಗಿ ತಿಳಿದು ಬಂದ ಕಾರಣ, ಜಪ್ತಿ ಮಾಡಿದ್ದಂತ 2 ಕೋಟಿ ಹಣವನ್ನು ಬಿಜೆಪಿಗೆ ಮರಳಿಸಿತ್ತು.
ಇದೀಗ ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಇಲಾಖೆಯ ಸೂಪರ್ ಫಾಸ್ಟ್ ಕಾರ್ಯವೈಖರಿ ಕೂಡ ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ. ಎಡ್ಮೂರು ಗಂಟೆಯಲ್ಲಿ ಬಿಜೆಪಿ ಹಣಕ್ಕೆ ಕ್ಲೀನ್ ಚಿಟ್ ಕೊಟ್ಟ ಐಟಿ, ಚುನಾವಣಾ ಇಲಾಖೆಯ ನಡೆ ಇದೊಂದು ಸರ್ಜಿಕಲ್ ಸ್ಟ್ರೈಕ್ ತರ ಎನಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದಲ್ಲಿ ನಿಸ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಉದ್ದೇಶ ಚುನಾವಣಾ ಆಯೋಗಕ್ಕೆ ಇದೆಯೇ? ಹಾಗಿದ್ದರೆ ಕೂಡಲೇ ₹ 2 ಕೋಟಿ ನಗದನ್ನು ಮತ್ತೆ ಸೀಜ್ ಮಾಡಬೇಕು. ಘಟನೆಗೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ತನಿಖೆ ನಡೆಸಬೇಕು ಎಂಬುದಾಗಿ ಸಚಿವ ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ನಿಸ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಉದ್ದೇಶ ಚುನಾವಣಾ ಆಯೋಗಕ್ಕೆ ಇದೆಯೇ?
ಹಾಗಿದ್ದರೆ ಕೂಡಲೇ ₹ 2 ಕೋಟಿ ನಗದನ್ನು ಮತ್ತೆ ಸೀಜ್ ಮಾಡಬೇಕು.
ಘಟನೆಗೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ತನಿಖೆ ನಡೆಸಬೇಕು.
– @krishnabgowda pic.twitter.com/w08Ce69SY0— Karnataka Congress (@INCKarnataka) April 21, 2024
₹50 ಸಾವಿರ ಮೇಲಿನ ಯಾವುದೇ ವರ್ಗಾವಣೆಯನ್ನು ಬ್ಯಾಂಕ್ ಖಾತೆ ಮೂಲಕವೇ ಮಾಡಬೇಕು ಎನ್ನುವ ಕಾನೂನು ಇದೆ. ಹಾಗಿದ್ದರೂ ಸೀಜ್ ಮಾಡಲಾಗಿದ್ದ ₹2 ಕೋಟಿ ನಗದು ಹಣವನ್ನು ಅಧಿಕಾರಿಗಳು ಬಿಜೆಪಿಯವರಿಗೆ ಹಿಂದಿರುಗಿಸುವ ಮೂಲಕ ದೇಶದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಎಂದು ವಾಗ್ಧಾಳಿ ನಡೆಸಿದ್ದಾರೆ.
₹50 ಸಾವಿರ ಮೇಲಿನ ಯಾವುದೇ ವರ್ಗಾವಣೆಯನ್ನು ಬ್ಯಾಂಕ್ ಖಾತೆ ಮೂಲಕವೇ ಮಾಡಬೇಕು ಎನ್ನುವ ಕಾನೂನು ಇದೆ.
ಹಾಗಿದ್ದರೂ ಸೀಜ್ ಮಾಡಲಾಗಿದ್ದ ₹2 ಕೋಟಿ ನಗದು ಹಣವನ್ನು ಅಧಿಕಾರಿಗಳು ಬಿಜೆಪಿಯವರಿಗೆ ಹಿಂದಿರುಗಿಸುವ ಮೂಲಕ ದೇಶದ ಕಾನೂನನ್ನು ಗಾಳಿಗೆ ತೂರಿದ್ದಾರೆ.
ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್.
– @krishnabgowda pic.twitter.com/obKNAJC9vW— Karnataka Congress (@INCKarnataka) April 21, 2024
ಬೆಂಗಳೂರಿನ ಕಾಟನ್ ಪೇಟೆ ಚೆಕ್ ಪೋಸ್ಟ್ ನಲ್ಲಿ ಬಿಜೆಪಿಯವರಿಂದ ಸೀಜ್ ಮಾಡಲಾದ 2 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ಅವರಿಗೆ ಹಿಂದಿರುಗಿಸಿದ್ದಾರೆ. ಅಧಿಕಾರಿಗಳು ಇಷ್ಟು ಶರವೇಗದಲ್ಲಿ ಹಣ ಹಿಂದಿರುಗಿಸಿದ್ದಾರೆ. ಅಂದರೆ ನಾವು ಎಲ್ಲಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕಾಟನ್ ಪೇಟೆ ಚೆಕ್ ಪೋಸ್ಟ್ ನಲ್ಲಿ ಬಿಜೆಪಿಯವರಿಂದ ಸೀಜ್ ಮಾಡಲಾದ 2 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ಅವರಿಗೆ ಹಿಂದಿರುಗಿಸಿದ್ದಾರೆ.
ಅಧಿಕಾರಿಗಳು ಇಷ್ಟು ಶರವೇಗದಲ್ಲಿ ಹಣ ಹಿಂದಿರುಗಿಸಿದ್ದಾರೆ. ಅಂದರೆ ನಾವು ಎಲ್ಲಿದ್ದೇವೆ?
– @krishnabgowda pic.twitter.com/H3Dey7AHR6— Karnataka Congress (@INCKarnataka) April 21, 2024
ಸಿದ್ಧರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಯನ್ನೇ ಕಳೆದುಕೊಂಡಿದ್ದಾರೆ- ಬಿಎಸ್ ಯಡಿಯೂರಪ್ಪ ವಾಗ್ಧಾಳಿ
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!