ಕೋಲಾರ: ಮೋದಿಯವರು ಪ್ರಧಾನಿಯಾಗಿ ನಾಲಾಯಕ್ ಅಂತ ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಕೋಲಾರ (ಶಿಡ್ಳಘಟ್ಟ)ದ ರೋಡ್ ಶೋನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲುವಿನ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಯಾಚಿಸಿ ಈ ರೀತಿ ಪ್ರಶ್ನಿಸಿದರು.
ನಿರುದ್ಯೋಗಿ ಯುವಕ/ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿ ಪ್ರಧಾನಿಯೇ ಆಗಬೇಕಿತ್ತಾ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಇಡೀ ದೇಶದ ಯುವಕ, ಯುವತಿಯರಿಗೆ ನಂಬಿಸಿದರು. ಮೋದಿ ಮಾತನ್ನು ನಂಬಿ ಯುವ ಸಮೂಹ ಮೋದಿಯವರಿಗೆ ಮತ ಹಾಕಿದ್ರು. ಹೀಗೆ ಮತ ಹಾಕಿದವರೆಲ್ಲಾ ಡಿಗ್ರಿ ಮುಗಿಸಿದ ಮೇಲೆ ಕೆಲ್ಸ ಕೊಡಿ ಎಂದು ಕೇಳಿದರೆ, “ಹೋಗಿ ಪಕೋಡ ಮಾರಾಟ ಮಾಡಿ” ಅಂದ್ರು.
ಇದು ದೇಶದ ಯುವ ಸಮೂಹಕ್ಕೆ ಮಾಡಿದ ಮಹಾದ್ರೋಹ ಅಲ್ಲವೇ? ಮಹಾನ್ ನಂಬಿಕೆ ದ್ರೋಹ ಅಲ್ಲವೇ? ಪಕೋಡ ಮಾರೋದನ್ನು ಹೇಳಿಕೊಡೋಕೆ ಇವರು ಪ್ರಧಾನಿ ಆಗಬೇಕಿತ್ತಾ? ಎಂದು ಪ್ರಶ್ನಿಸಿದರು.
ಮೋದಿಯವರು ಪ್ರಧಾನಿಯಾಗಿ ನಾಲಾಯಕ್ ಅಂತ ವಿದ್ಯಾವಂತ ಯುವ ಸಮೂಹ ತೀರ್ಮಾನಿಸಿದೆ. ಇಂಥಾ ನಾಲಾಯಕ್ ಗೆ ಮತ ಹಾಕ್ತೀರಾ? ಹತ್ತತ್ತು ವರ್ಷ ಮತ ಹಾಕಿದ್ರಲ್ಲಾ ನಿಮಗೆ, ದೇಶಕ್ಕೆ ಏನಾದ್ರೂ ಸಿಕ್ಕಿತಾ ? ಈ ಹತ್ತು ವರ್ಷದಲ್ಲಿ ಏನೇನೂ ಕೊಡದವರು ಈ ಬಾರಿ ನಿಮ್ಮ ಮತ ಕೇಳುತ್ತಿದ್ದಾರೆ, ಹೀಗೆ ಮತ ಕೇಳುವ ಯೋಗ್ಯತೆಯಾಗಲೀ, ಅರ್ಹತೆಯಾಗಲೀ BJP ಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ನಾಲಾಯಕ್ ಮೋದಿಯವರು ಬರುವ ಮೊದಲು ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆಕಾಳು, ಅಡುಗೆ ಎಣ್ಣೆ ಬೆಲೆ ಎಷ್ಟಿತ್ತು?ಈಗ ಎಷ್ಟಾಗಿದೆ? ನಾವು ನುಡಿದಂತೆ ನಡೆದಿದ್ದೇವೆ. ಪ್ರತಿ ಕುಟುಂಬಗಳ ಜೇಬಿಗೆ ಪ್ರತಿ ತಿಂಗಳು 4 ರಿಂದ 6 ಸಾವಿರ ರೂಪಾಯಿ ಹಾಕುತ್ತಿದ್ದೇವೆ. ನಾವು ನುಡಿದಂತೆ ನಡೆದು ಬಂದು ಓಟು ಕೇಳುತ್ತಿದ್ದೇವೆ. ನಮಗೆ ಮತ ನೀಡಿ. ನಿಮ್ಮ ಮತಕ್ಕೆ ಗೌರವ ಕೊಟ್ಟು ಅಭಿವೃದ್ಧಿಯ ಲಾಭ ನಿಮ್ಮ ಜೇಬಿಗೆ, ನಿಮ್ಮ ಖಾತೆಗೆ ಹಾಕುವ ಕೆಲಸವನ್ಮು ನಾವು ಮಾಡ್ತೇವೆ ಎಂದು ಘೋಷಿಸಿದರು.
ವರ್ಷಕ್ಕೆ ಒಂದೂಕಾಲು ಲಕ್ಷ ಬಂದು ಬೀಳತ್ತೆ ನಿಮಗೆ
ಹತ್ತತ್ತು ವರ್ಷ ನಿಮಗೆ ಮೋದಿಯವರಿಂದ ಸಿಕ್ಕಿದ್ದು ರಾಶಿ ರಾಶಿ ಸುಳ್ಳುಗಳು ಮತ್ತು ನಂಬಿಕೆ ದ್ರೋಹ ಮಾತ್ರ. ಆದರೆ ಈ ಬಾರಿ ನಮಗೆ ಮತ ಕೊಟ್ಟು ನೋಡಿ. ವರ್ಷಕ್ಕೆ ಒಂದೂಕಾಲು ಲಕ್ಷ ರೂಪಾಯಿ ಮನೆ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದು ಬೀಳತ್ತೆ. ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತೆ. ನಿರುದ್ಯೋಗಿ ಯುವಕ/ ಯುವತಿಯರಿಗೆ ಒಂದು ಲಕ್ಷ ರೂಪಾಯಿ ಕೊಡ್ತೇವೆ. ರೈತರು ಬೆಳೆದ ಬೆಳೆಗಳಿಗೆ ಖಚಿತವಾದ ಬೆಂಬಲ ಬೆಲೆ ಕೊಡುತ್ತೇವೆ ಎಂದರು.
ಇಂಥಾ 25 ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಘೋಷಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಪತ್ರಗಳು ನಿಮಗೆ ಬರುತ್ತವೆ. ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ, ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದು ಕರೆ ನೀಡಿದರು.
BREAKING: ಏಪ್ರಿಲ್.23ರಂದು ಬೆಂಗಳೂರಿನ ಈ ‘ನಾಲ್ಕು ಪೊಲೀಸ್ ಠಾಣೆ’ ವ್ಯಾಪ್ತಿಯಲ್ಲಿ ‘ಮದ್ಯ ಮಾರಾಟ’ ನಿಷೇಧ
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!