ಬೆಂಗಳೂರು: ನಿನ್ನೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿಗೆ ಬಂದಿದ್ದ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಪೈಪೋಟಿಗೆ ಬಿದ್ದವರಂತೆ ಸುಳ್ಳು ಹೇಳಿದ್ದಾರೆ. ಇವರಿಬ್ಬರ ಸುಳ್ಳುಗಳನ್ನು ಕೇಳುವ ಕರ್ಮ ಕರ್ನಾಟಕದ ಜನರಿಗೆ ಬಂದಿದೆ. ಮಾಧ್ಯಮಗಳೂ ಕೂಡ ಇವರು ಹೇಳಿದ್ದು ಸರಿಯೊ ತಪ್ಪೊ ಎಂದು ಪರಿಶೀಲನೆ ಮಾಡುವುದಿಲ್ಲ. ಈ ಇಬ್ಬರೂ ಎರಡೂ ಕಡೆ ಏನು ಹೇಳಿದ್ದಾರೆಂದರೆ,
1. ಮೋದಿ ಹೇಳಿದ ಒಂದನೇ ಸುಳ್ಳು 2014 ಕ್ಕೂ ಮೊದಲು ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹ ಮಾಡುತ್ತಿದ್ದರು. ವಿಪರೀತ ಪರೋಕ್ಷ ತೆರಿಗೆಗಳನ್ನು ನಿಮ್ಮಿಂದ ವಸೂಲಿ ಮಾಡಲಾಗುತ್ತಿತ್ತು. ಇದೀಗ ಜಿಎಸ್‌ಟಿ ಬಂದ ಬಳಿಕ ನಿಮ್ಮ[ ಜನರ] ಮೇಲಿದ್ದ ತೆರಿಗೆ ಹೊರೆ ಕಡಿಮೆಯಾಗಿದೆ.
ಸತ್ಯ ಏನು? ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 100 ರೂಪಾಯಿ ತೆರಿಗೆ ಸಂಗ್ರಹಿಸಿದರೆ, 45.94 ರೂಪಾಯಿಗಳನ್ನು ಜನರಿಂದ ಹಾಗೂ 54.6 ರೂಪಾಯಿ ಶ್ರೀಮಂತರಿAದ ಸಂಗ್ರಹಿಸುತ್ತಿದ್ದರು
[2012-13 ರ ದಾಖಲೆ ಪ್ರಕಾರ] ಜಿಎಸ್‌ಟಿ ಬಂದ ಮೇಲೆ 2020-21 ರ ದಾಖಲೆಗಳ ಪ್ರಕಾರ ಬಡವರು ಹಾಗೂ ದುಡಿಯುವ ಜನರಿಂದ 61.3 ರೂಪಾಯಿ ಸಂಗ್ರಹಿಸಿದರೆ, ಶ್ರೀಮಂತರಿAದ 38.7 ರೂಪಾಯಿ ಮಾತ್ರ ಸಂಗ್ರಹಿಸಿದರು. 2023-24 ರಲ್ಲೂ ಈ ಪ್ರಮಾಣ 55 ಮತ್ತು 45 ರೂಗಳಷ್ಟಿದೆ. ಇಷ್ಟೆಲ್ಲ ಸತ್ಯ ಕಣ್ಣ ಮುಂದಿದ್ದರೂ ಸಹ ಮೋದಿಯವರು ಹಿಂದೆ ಬಡವರು ಹೆಚ್ಚು ತೆರಿಗೆ ಕಟ್ಟುತ್ತಿದ್ದರು. ಜಿಎಸ್ ಟಿ ಬಂದ ಮೇಲೆ ಕಡಿಮೆ ಕಟ್ಟುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.
ವರ್ಷ ಶ್ರೀಮಂತರಿAದ ಸಂಗ್ರಹಿಸುತ್ತಿದ್ದ/ ತ್ತಿರುವ ನೇರ ತೆರಿಗೆ ಬಡವರು, ಮಧ್ಯಮ ವರ್ಗದವರಿಂದ ಸಂಗ್ರಹಿಸುತ್ತಿದ್ದ/ ತ್ತಿರುವ ಪರೋಕ್ಷ ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುವ ಅಡಿಷನಲ್ ಎಕ್ಸೆöÊಸ್ ಡ್ಯೂಟಿ ಸೇರಿ ಒಟ್ಟು ತೆರಿಗೆಯಲ್ಲಿ
ಶ್ರೀಮಂತರಿAದ ವಸೂಲಿ ಮಾಡುತ್ತಿದ್ದ ತೆರಿಗೆ ಶೇ.ವಾರು ಬಡವರಿಂದ ವಸೂಲಿ ಮಾಡುವ ತೆರಿಗೆ ಶೇ. ವಾರು
2012-13 5,58,658 474767 54.6 45.94
2020-21 9,50,444 1499260 38.7 61.3
2023-24 18,10,504 2136997 45.86 54.14
ಈ ದೇಶದ ಶೇ.10 ರಷ್ಟು ಜನರ ಬಳಿ ಶೇ.79 ರಷ್ಟು ಸಂಪತ್ತಿದೆ. ಆದರೆ ಅವರಿಂದ ಸಂಗ್ರಹಿಸುವ ತೆರಿಗೆ ಮಾತ್ರ ನಗಣ್ಯ ಎಂಬAತಿದೆ.
2. ಮೋದಿ ಹೇಳಿದ ಎರಡನೆ ಸುಳ್ಳು ಕಾಂಗ್ರೆಸ್ ಆಧಾರ್ ಕಾರ್ಡ್ ಯೋಜನೆಯನ್ನು ವಿರೋಧಿಸಿತ್ತು.
ಸತ್ಯ; ಮೋದಿಯವರ ಮೆದುಳಿನ ಯಾವ ಭಾಗದಲ್ಲಿಯೂ ನಿಜ ಹೇಳಬೇಕೆಂಬ ನೈತಿಕತೆಯ ನರವೆ ಕೆಲಸ ಮಾಡುತ್ತಿಲ್ಲ ಎನ್ನಿಸುತ್ತದೆ. ಆಧಾರ್ ಯೋಜನೆಯನ್ನು ಪ್ರಾರಂಭಿಸಿದ್ದು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ. 28-1-2009 ರಲ್ಲಿ ಕರ್ನಾಟಕದವರೆ ಆದ ನಂದನ್ ನೀಲೆಕಣಿಯವರ ಅಧ್ಯಕ್ಷತೆಯಲ್ಲಿ ಆಧಾರ್ ಯೋಜನೆಯನ್ನು ಪ್ರಾರಂಭಿಸಲಾಯಿತು. ವಾಸ್ತವವಾಗಿ ಆಧಾರ್ ಯೋಜನೆಯನ್ನು ವಿರೋಧ ಮಾಡಿದ್ದು ಬಿಜೆಪಿಯವರು ಹಾಗೂ ಶ್ರೀಯುತ ನರೇಂದ್ರ ಮೋದಿಯವರು. 26-9-2009 ರಲ್ಲಿ ತಿರುಚಿಯಲ್ಲಿ ಭಾಷಣ ಮಾಡುವಾಗ ಮೋದಿಯವರು, ಆಧಾರ್ ಯೋಜನೆಯಿಂದ ಯಾರಿಗೆ ಲಾಭವಾಗುತ್ತದೆ? ಎಷ್ಟು ಖರ್ಚಾಗುತ್ತದೆ? ಆಧಾರ್ ಕಾರ್ಡಿನಿಂದ ಜನರು ಗಂಭಿರ ಸಂಕಟ ಅನುಭವಿಸಬೇಕಾಗುತ್ತದೆ ಎಂದು ಭಾಷಣ ಮಾಡಿದ್ದಾರೆ. ಜೊತೆಗೆ, 8-4-2014 ರಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿದ್ದಾಗ, “ On Aadhaar,….. There is no vision, only political gimmick” ಎಂದು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರು ಬೆಂಗಳೂರಿನ ಹಾಗೂ ಕರ್ನಾಟಕದ ಜನರು ದಡ್ಡರು, ಮೂರ್ಖರು ಎಂದು ತೀರ್ಮಾನಿಸಿ ಭಾಷಣ ಮಾಡಿ ನಮ್ಮನ್ನು ಅವಮಾನಿಸಿದ್ದಾರೆ.
3. ಮೋದಿಯವರು ಹೇಳಿದ ಮೂರನೆ ಸುಳ್ಳು; ಕಾಂಗ್ರೆಸ್ ಡಿಜಿಟಲ್ ಇಂಡಿಯಾ ಯೋಜನೆಯನ್ನು ವಿರೋಧಿಸಿದೆ.
ಸತ್ಯ; ಡಿಜಿಟಲ್ ಇಂಡಿಯಾ ಯೋಜನೆಯ ಪಿತೃ ಮೋದಿಯವರಲ್ಲ ದಿವಂಗತ ರಾಜೀವ್ ಗಾಂಧಿಯವರು. ದೇಶದಲ್ಲಿ ಕಂಪ್ಯೂಟರೈಸೇಷನ್ ಮಾಡಿದ್ದು ರಾಜೀವ್ ಗಾಂಧಿಯವರು. ಅವರು 1986 ರ ಹೊತ್ತಿಗಾಗಲೆ ರೈಲ್ವೆ ಟಿಕೇಟುಗಳನ್ನು ಬುಕ್ ಮಾಡಲು ಕಂಪ್ಯಟರೈಸೇಷನ್ ಪ್ರಾರಂಭಿಸಿದ್ದರು. ಅದಕ್ಕೂ ಮೊದಲು ನಮ್ಮ ರಾಜ್ಯದಲ್ಲಿ ದೇವರಾಜ ಅರಸು ಅವರು 1976 ರ ಹೊತ್ತಿಗಾಗಲೆ ಎಲೆಕ್ಟಾçನಿಕ್ ಸಿಟಿಯನ್ನು ಪ್ರಾರಂಭಿಸಿದ್ದರು. ಆಗಿನ್ನೂ ಮೋದಿಯವರು ಚೆಡ್ಡಿ ಹಾಕಿಕೊಂಡು ಓಡಾಡುತ್ತಿದ್ದರು. ಕಾಂಗ್ರೆಸ್ಸಿನವರೆ ಆದ ಎಸ್ಸೆಂ ಕೃಷ್ಣ ಅವರು ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಅಭಿವೃದ್ಧಿ ಮಾಡಲು ಶ್ರಮಿಸಿದರು. ಈ ವಿಚಾರದಲ್ಲಿ ನರೇಂದ್ರ ಮೋದಿಯವರ ಕೊಡುಗೆ ಶೂನ್ಯ.
4. ಸುಳ್ಳುಗಳನ್ನು ಮೋದಿ ತಮ್ಮ ಭಾಷಣದುದ್ದಕ್ಕೂ ಹೇಳಿದ್ದಾರೆ. ಅದರಲ್ಲಿ ನಮ್ಮ ಮೆಟ್ರೋ ಕೂಡ ಸೇರಿದೆ. 17 ಕಿಮೀನಿಂದ 72 ಕಿಮೀಗೆ ಏರಿಸಿದ್ದೇವೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಕೂಡ ಸಿಗಲಿದೆ. ಬೆಂಗಳೂರಿಗೆ ಬುಲೆಟ್ ಟ್ರೆöÊನ್ ಕೂಡ ಸಿಗಲಿದೆ ಎಂದು ಕರ್ನಾಟಕದ ಜನರ ತಲೆಯ ಮೇಲೆ ರೈಲು ಓಡಿಸಿದ್ದಾರೆ.
ವಾಸ್ತವಾಂಶವೇನೆAದರೆ, ಮೆಟ್ರೋ ಯೋಜನೆಯಲ್ಲಿ ಮೋದಿ ಸರ್ಕಾರದ ಕೊಡುಗೆ ಎಷ್ಟಿದೆ? ಎಂದು ಮೋದಿಯವರು ಹೇಳಲಿಲ್ಲ. ಪಕ್ಕದಲ್ಲೆ ಕೂತಿದ್ದ ದೇವೇಗೌಡರಿಗೆ ಸತ್ಯ ಗೊತ್ತಿದ್ದರೂ ಹೇಳದೆ ಮೋದಿಯವರ ಭಜನೆ ಮಾಡಿಕೊಂಡು ಕರ್ನಾಟಕದ ಜನರಿಗೆ ಮೋಸ ಮಾಡುತ್ತಿದ್ದಾರೆ. ಮೆಟ್ರೋ ಯೋಜನೆಯನ್ನು ಪ್ರಾರಂಭಿಸಿದ್ದು ಮನಮೋಹನ್ ಸಿಂಗ್ ಅವರು. 2011 ರಲ್ಲಿ ಮೆಟ್ರೋ ಯೋಜನೆ ಪ್ರಾರಂಭವಾಯಿತು. ಆಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಮನಮೋಹನ್ ಸಿಂಗ್ ಅವರು ಮೆಟ್ರೋ ಯೋಜನೆಗೆ ಅನುಮತಿ ಕೊಟ್ಟರು.
ಮೆಟ್ರೋ ಯೋಜನೆಗೆ ಇದುವರೆಗೆ 55141 ಕೋಟಿ ರೂಪಾಯಿಗಳು ಖರ್ಚಾಗಿವೆ. ಇದರಲ್ಲಿ ಕೇಂದ್ರ ಸರ್ಕಾರದ ಕೊಡುಗೆ 8764 ಕೋಟಿ ರೂಪಾಯಿಗಳು ಮಾತ್ರ. ಅದೂ ಸಹ ಈಕ್ವಿಟಿಯ ರೂಪದಲ್ಲಿ ತೆರಿಗೆಯ ಶೇ.50 ರಷ್ಟು ಪಾಲಿನ ಮುಖಾಂತರ ಬಂದಿದೆ. ಕೇಂದ್ರದ ಪಾಲು ಶೇ. 15.8 ಮಾತ್ರ. ಇನ್ನುಳಿದ ಶೇ. 84.2 ರಷ್ಟನ್ನು ರಾಜ್ಯ ಸರ್ಕಾರವೆ ಭರಿಸಬೇಕು, ತೆಗೆದುಕೊಂಡ ಸಾಲವನ್ನು ತೀರಿಸಬೇಕು.
ಸಬ್ ಅರ್ಬನ್ ರೈಲು ಯೋಜನೆಯ ಕುರಿತೂ ಸಹ ಮೋದಿಯವರು ಪ್ರಸ್ತಾಪಿಸಿದ್ದಾರೆ. ಕೇಂದ್ರದ ಈ ವರ್ಷದ ಬಜೆಟ್‌ನಲ್ಲಿ ಒಂದು ರೂಪಾಯಿಯನ್ನೂ ಸಹ ಸಬ್ ಅರ್ಬನ್ ರೈಲು ಯೋಜನೆಗೆ ಮೀಸಲಿಡಲಿಲ್ಲ. ಆದರೂ ಸಹ ಮೋದಿಯವರು ರೈಲು ಓಡಿಸುವುದನ್ನು ನಿಲ್ಲಿಸುತ್ತಿಲ್ಲ
ಬುಲೆಟ್ ಟ್ರೆöÊನು; ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ಟ್ರೆöÊನು ಯೋಜನೆ 10 ವರ್ಷಗಳಾದರೂ ಪ್ರಾರಂಭವಾಗಲಿಲ್ಲ. ಇನ್ನು ಕರ್ನಾಟಕದಲ್ಲಿ ಬುಲೆಟ್ ಟ್ರೆöÊನು ಓಡಿಸುತ್ತೇವೆ ಎಂದು ಹೇಳಿದರೆ ಕೇಳುವಷ್ಟು ದಡ್ಡರು ಕರ್ನಾಟಕದಲ್ಲಿ ಯಾರೂ ಇಲ್ಲ.
5. ಮೋದಿಯವರು ಹೇಳಿದ 5 ನೆ ಸುಳ್ಳು; ದೇಶದಲ್ಲಿ ಅನೇಕ ಗ್ರಾಮಗಳಿಗೆ ವಿದ್ಯುತ್ ಕುಡಿಯುವ ನೀರು ಸಿಕ್ಕಿರಲಿಲ್ಲ. ಮೋದಿ ಸರ್ಕಾರ ಬಂದ ಬಳಿಕ ಇದೆಲ್ಲ ಸಿಕ್ಕಿದೆ.
ವಾಸ್ತವ; ಕೆಲಸ ಮಾಡಿದ್ದು ಸಾಸಿವೆ ಕಾಳಿನಷ್ಟು- ಪ್ರಚಾರ ಮಾತ್ರ ಹಿಮಾಲಯದಷ್ಟು
ಗ್ರಾಮಗಳಿಗೆ ವಿದ್ಯುತ್ ಸಂಪರ್ಕದ ವಿಚಾರದಲ್ಲೂ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ತಾವು ಪ್ರಧಾನಿಯಾಗುವವರೆಗೆ ದೇಶದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ ಎಂಬAತೆ ಸುಳ್ಳು ಹೇಳುತ್ತಾರೆ. ವಾಸ್ತವದಲ್ಲಿ ದೇಶದಲ್ಲಿ 593732 ಗ್ರಾಮಗಳಿವೆ. ದೇಶಕ್ಕೆ ಸ್ವಾತಂತ್ರ‍್ಯ ಬಂದಾಗ ಕೇವಲ 1500 ಗ್ರಾಮಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗಿತ್ತು. 2014 ರ ವೇಳೆಗೆ 575282 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಮನಮೋಹನಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅವಧಿಯಲ್ಲಿ 2014 ರವರೆಗೆ 106548 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿತ್ತು. ಬಾಕಿ ಇದ್ದ ಗ್ರಾಮಗಳ ಸಂಖ್ಯೆ ಕೇವಲ 18452 ಮಾತ್ರ. ಈ ಗ್ರಾಮಗಳಿಗೂ ಸಹ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಮೋದಿಯವರಿಂದ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಮಾಡಿದ್ದು ಬಿಡಿಗಾಸಿನಷ್ಟು ಕೆಲಸವಾದರೂ ಪ್ರಚಾರ ಮಾತ್ರ ಬೆಟ್ಟದಷ್ಟು.
ವಿದ್ಯುತ್ ಸಂಪರ್ಕ ಪಡೆದ ಗ್ರಾಮಗಳ ವಿವರ
ದೇಶದ ಒಟ್ಟು ಗ್ರಾಮಗಳ ಸಂಖ್ಯೆ 593732
1947 ರ ವೇಳೆಗೆ ವಿದ್ಯುತ್ ಸಂಪರ್ಕ ಪಡೆದಿದ್ದ ಗ್ರಾಮಗಳ ಸಂಖ್ಯೆ 1500
2004 ರ ವೇಳೆಗೆ 468732
2014 ರ ವೇಳೆಗೆ ವಿದ್ಯುತ್ ಸಂಪರ್ಕ ಪಡೆದಿದ್ದ ಗ್ರಾಮಗಳ ಸಂಖ್ಯೆ 575280
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್ ಸಂಪರ್ಕ ಪಡೆಯಲು ಬಾಕಿ ಉಳಿದಿದ್ದ ಗ್ರಾಮಗಳ ಸಂಖ್ಯೆ 18452 ಮಾತ್ರ
ಮೋದಿಯವರು ಮತ್ತು ಬಿಜೆಪಿಯವರಿಗೆ ಸುಳ್ಳೆ ಮನೆದೇವರು. ಅದೊಂದು ಸುಳ್ಳಿನ ಫ್ಯಾಕ್ಟ್ರಿ. ಬಿಜೆಪಿ ಮತ್ತು ಆರೆಸ್ಸೆಸ್‌ನವರು ಪ್ರೇರಣೆ ಪಡೆದಿರುವುದೇ ಜರ್ಮನಿಯ ಹಿಟ್ಲರ್, ಮುಸಲೋನಿ, ಸ್ಪೇನಿನ ಫ್ರಾಂಕೊ ಮುಂತಾದವರಿAದ. ಆದ್ದರಿಂದ ಸುಳ್ಳು ಎಂದರೆ ಬಿಜೆಪಿ ಮತ್ತು ಅದರ ಸರ್ವೋಚ್ಛ ನಾಯಕರು ಎಂಬAತಾಗಿದೆ.
6. ಮೋದಿಯವರು ಇಂದು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಎರಡೂ ಕಡೆ ಪದೇ ಪದೇ ಪ್ರಸ್ತಾಪಿಸಿದ್ದ ಮಾತು; ನಾನು ಬಡವನ ಮಗ , ನನಗೆ ಬಡವರ ಕಷ್ಟ ಅರ್ಥ ಆಗ್ತದೆ ಎಂದು. ಇದಂತೂ ಅತಿ ದೊಡ್ಡ ಸುಳ್ಳು
ವಾಸ್ತವ; ಮೋದಿಯವರನ್ನು ಹೆತ್ತ ತಂದೆತಾಯಿಗಳ ಬಗ್ಗೆ ನನಗೆ ಗೌರವವಿದೆ. ಅವರು ಹುಟ್ಟಿದ್ದು ಬಡವರ ಮನೆಯಲ್ಲೆ ಇರಬಹುದು. ಆದರೆ ಆರೆಸ್ಸೆಸ್ ಸೇರಿದ ಮೇಲೆ ಮೋದಿಯವರ ದೇಹದ ಸಂಪೂರ್ಣ ನರನರಗಳೆಲ್ಲ ಬಡವರ ವಿರೋಧಿಯಾಗಿವೆ, ಕಾರ್ಪೊರೇಟ್ ಬಂಡವಾಳಿಗರ ಪರವಾಗಿವೆ. ಜನರಿಗೆ ಸುಳ್ಳು ಹೇಳುವುದನ್ನು ನಾಚಿಕೆಯಿಲ್ಲದೆ ಮಾಡು ಎಂದು ಆರೆಸ್ಸೆಸ್ ನವರು ತರಬೇತಿ ಕೊಟ್ಟು, ಮೋದಿಯವರ ಕೈಯಿಂದ ದೇಶವನ್ನು ಸರ್ವನಾಶ ಮಾಡಿಸುತ್ತಿದ್ದಾರೆ.
ಮೋದಿಯವರು ಬಡವರ ಪರವಾಗಿದ್ದರೆ, ಅಡುಗೆ ಸಿಲಿಂಡರುಗಳ ಮೇಲೆ ಇದ್ದ ಸಬ್ಸಿಡಿಯನ್ನು ಸಂಪೂರ್ಣ ರದ್ದು ಮಾಡುತ್ತಿದ್ದರೆ? 2014 ರಲ್ಲಿ 410 ರೂ ಇದ್ದ ಸಿಲಿಂಡರನ್ನು 1100 ರೂಪಾಯಿ ಮುಟ್ಟಿಸುತ್ತಿದ್ದರೆ? ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕಾಗಿ ಮಾತ್ರ ರೇಟು ಕಡಿಮೆ ಮಾಡಿಸುತ್ತಿದ್ದರೆ?
ಮೋದಿಯವರು ಬಡವರ ಪರವಾಗಿದ್ದರೆ 46 ರೂ ಇದ್ದ ಡೀಸೆಲ್ ಬೆಲೆಯನ್ನು 100 ರೂಪಾಯಿಗೆ ಯಾಕೆ ಏರಿಸಿದ್ದರು? 72 ರೂ ಇದ್ದ ಪೆಟ್ರೋಲ್ ದರಗಳನ್ನು 110 ರೂಗೆ ಯಾಕೆ ಏರಿಸುತ್ತಿದ್ದರು?
ಬಡವರ ಪರವಾಗಿದ್ದರೆ ರಸ್ತೆ ಟೋಲ್ ಗಳ ದರಗಳನ್ನು ಶೇ.100 ಶೇ.200 ರಷ್ಟು ಯಾಕೆ ಹೆಚ್ಚಿಸುತ್ತಿದ್ದರು?
2014 ಕ್ಕೆ ಹೋಲಿಸಿದರೆ ರೈಲ್ವೆ ಟಿಕೆಟ್ ದರಗಳನ್ನು ಶೇ.100-200 ರವರೆಗೆ ಯಾಕೆ ಹೆಚ್ಚಿಸುತ್ತಿದ್ದರು?
ಮೋದಿಯವರು ಬಡವರ ಪರವಾಗಿದ್ದರೆ, ಜನರು ಬಳಸುವ ಔಷಧ, ಹಾಲು, ಮಜ್ಜಿಗೆ, ಮೊಸರು, ಅಕ್ಕಿ, ಗೋಧಿ, ಎಳನೀರು, ಮಕ್ಕಳು ಬಳಸುವ ಪೆನ್ನು, ಪೇರ‍್ರು, ರಬ್ಬರ್, ಇಂಕು, ಪುಸ್ತಕ ಮುಂತಾದ ಎಲ್ಲದರ ಮೇಲೆ ಯಾಕೆ ಜಿಎಸ್‌ಟಿ ತೆರಿಗೆ ಹಾಕಿ ಬಡ ಜನರ ಬದುಕನ್ನು ಹಿಂಡುತ್ತಿದ್ದರು?
ಬಡ ಮಕ್ಕಳ ಪರವಾಗಿದ್ದರೆ ಉದ್ಯೋಗ ನೀಡುವುದನ್ನು ಬಿಟ್ಟು, ಪಕೋಡ ಮಾರಿ ಎನ್ನುತ್ತಿದ್ದರೆ? ಅಗ್ನಿವೀರ್ ಎಂಬ ಬಡವರ ಮಕ್ಕಳ ಹೊಟ್ಟೆಗೆ ಬೆಂಕಿ ಹಾಕುವ ಯೋಜನೆ ಜಾರಿಗೆ ತರುತ್ತಿದ್ದರಾ?
ಮೋದಿಯವರು ಬಡವರ ಪರವಾಗಿದ್ದರೆ, ಶ್ರೀಮಂತ ಕಾರ್ಪೊರೇಟ್ ಗಳ ಮೇಲಿನ ತೆರಿಗೆಯನ್ನು ಶೇ.30 ರಿಂದ ಶೇ.22 ಕ್ಕೆ ಇಳಿಸಿ, ಬಡವರ ಮೇಲಿನ ತೆರಿಗೆಯನ್ನು ದುಪ್ಪಟ್ಟು ಮಾಡುತ್ತಿದ್ದರಾ?
ಇವೆಲ್ಲ ಒಂದೆರಡು ಸಂಗತಿಗಳಲ್ಲ. ಬಡಜನರ ರಕ್ತ ಹೀರುವ ಎಲ್ಲ ಯೋಜನೆಗಳನ್ನು ಮೋದಿಯವರು ಜಾರಿಗೆ ತಂದಿದ್ದಾರೆ. ಶ್ರೀಮಂತರನ್ನು ಕೊಬ್ಬಿಸಿದ್ದಾರೆ. ಆದರೂ ಯಾವ ನಾಚಿಕೆಯೂ ಇಲ್ಲದೆ ನಾನು ಬಡವರ ಪರ ಎಂದು ಹೇಳುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಲಸಿಕೆಗೆ ನೂರಾರು ರೂಪಾಯಿ ವಸೂಲಿಗೆ ಹೊರಟಿದ್ದರು. ಸುಪ್ರೀಂಕೋರ್ಟು ಛೀಮಾರಿ ಹಾಕಿದ ಮೇಲೆ ಅದನ್ನು ಕೈ ಬಿಟ್ಟರು.
7. ಮೋದಿಯವರ 7 ನೆ ಸುಳ್ಳು; ಕರ್ನಾಟಕದ ಜನರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ ಎಂಬ ಕಲ್ಪನೆಯೇ ಇರಲಿಲ್ಲ. ನಾವು ಕೊಡುತ್ತಿದ್ದೇವೆ. ಇದು ಇನ್ನೂ 5 ವರ್ಷ ಮುಂದುವರೆಯುತ್ತದೆ.
ವಾಸ್ತವ; ಆಹಾರ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿದ್ದು ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ. ದೇಶದ 82 ಕೋಟಿ ಜನರಿಗೆ ತಿಂಗಳಿಗೆ ತಲಾ 5 ಕೆಜಿ ಅಕ್ಕಿ/ ಗೋಧಿಯನ್ನು ಕೊಡುವ ಕಾಯ್ದೆಯನ್ನು ಹಕ್ಕುಗಳಲ್ಲಿ ಸೇರಿಸಿದ್ದು ಮನಮೋಹನ್ ಸಿಂಗ್ ಅವರ ಸರ್ಕಾರ. ಆಹಾರ ಖಾತ್ರಿ ಯೋಜನೆಯನ್ನು ಬಿಜೆಪಿಯ ಹಿರಿಯ ನಾಯಕರುಗಳೆಲ್ಲ ವಿರೋಧಿಸಿದ್ದರು. ಮೋದಿಯವರು ಈಗ ಅದರ ಕ್ರೆಡಿಟ್ಟು ತೆಗೆದುಕೊಳ್ಳಲು ನೋಡುತ್ತಿದ್ದಾರೆ.
ನಮ್ಮ ಸರ್ಕಾರ 2013 ರಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದಾಗ ಕೆಜಿಗೆ ಕೇವಲ 1 ರೂಪಾಯಿಯನ್ನು ಜನರಿಂದ ಸಂಗ್ರಹಿಸುತ್ತಿದ್ದೆವು. 2015 ಏಪ್ರಿಲ್ – 1 ನೇ ತಾರೀಖಿನಿಂದಲೇ ನಾವು ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಆ ನಂತರ 7 ಕೆಜಿ ವರೆಗೆ ಅಕ್ಕಿ/ ಗೊಧಿಯನ್ನು ಪ್ರಾರಂಭಿಸಿದ್ದೆವು. 2023 ರಲ್ಲಿ ಚುನಾವಣೆ ಹತ್ತಿರ ಬಂತು ಎಂದು ಮೋದಿಯವರು ಉಚಿತವಾಗಿ ನೀಡಲು ಪ್ರಾರಂಭಿಸಿದರು.
ಉಚಿತವಾಗಿ ಅಕ್ಕಿ ಕೊಡುತ್ತಿದ್ದೇನೆ ಎಂದು ಮೋದಿಯವರು ಗುಜರಾತಿಗೆ ಬೇಕಿದ್ದರೆ ಹೋಗಿ ಹೇಳಿಕೊಳ್ಳಲಿ. ಕರ್ನಾಟಕದ ಜನರು 10 ವರ್ಷಗಳಿಂದ ಉಚಿತ ಅಕ್ಕಿ ಪಡೆಯುತ್ತಿದ್ದಾರೆ ಎಂಬ ತಿಳುವಳಿಕೆ ಮೋದಿಯವರಿಗೆ ಇರಬೇಕಾಗಿದೆ. ಇಲ್ಲದಿದ್ದರೆ ಬೊಗಳೆ ಜನತಾ ಪಾರ್ಟಿಯ ಬೊಗಳೆ ನಾಯಕ ಎಂದು ಆಡುವ ಮಕ್ಕಳು ಕರೆಯುತ್ತಾರೆ.
8. ಮೋದಿಯವರು ಹೇಳಿದ 8 ನೆ ಸುಳ್ಳು; ಕಾಂಗ್ರೆಸ್‌ನವರು ಬೆಂಗಳೂರನ್ನು ಭಯಾನಕ ನಗರ ಮಾಡಿದ್ದಾರೆ. ಟ್ಯಾಕ್ಸ್ ಸಿಟಿಯಿಂದ, ಟ್ಯಾಂಕರ್ ಸಿಟಿ ಮಾಡಿದ್ದಾರೆ ಎಂದಿದ್ದಾರೆ.
ಮೋದಿಯವರು ತಾನು ಈ ದೇಶದ ಪ್ರಧಾನಿ, ಪ್ರಧಾನಿ ಹುದ್ದೆಗೆ ಒಂದು ಘನತೆಯಿದೆ ಎಂಬುದನ್ನೆ ಮರೆತು ಮಾತನಾಡುತ್ತಿರುವುದು ಅತ್ಯಂತ ದುರಂತದ ಸಂಗತಿ.
ಕರ್ನಾಟಕವು ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಬರ ಪರಿಹಾರವಾಗಿ ನೀಡಬೇಕಾದ ಅನುದಾನವನ್ನು ಮೋದಿಯವರು ಇದುವರೆಗೆ ಬಿಡುಗಡೆ ಮಾಡಿಲ್ಲ. ಈ ಕುರಿತು ಸುಪ್ರೀಂಕೋರ್ಟು ಕೂಡ ಆಕ್ಷೇಪ ವ್ಯಕ್ತಪಡಿಸಿದೆ.
ಬರವಿದ್ದರೂ ಸಹ ನಮ್ಮ ಸರ್ಕಾರ ಕುಡಿಯುವ ನೀರಿಗೆ ಒಂದಿಷ್ಟು ತೊಂದರೆಯಾಗದAತೆ ನೋಡಿಕೊಂಡಿದೆ.
ಹಿಂದೆ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಜ್ಯದ ಹೈಕೋರ್ಟು ಪ್ರತಿ ದಿನ ರಾಜ್ಯ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಛೀಮಾರಿ ಹಾಕುತ್ತಿತ್ತು. ಇತ್ತೀಚೆಗೆ ಆ ರೀತಿಯ ಒಂದೇ ಒಂದು ಕಟು ಟೀಕೆ ರಾಜ್ಯ ಸರ್ಕಾರದ ಮೇಲೆ ಬಂದಿಲ್ಲ ಎಂಬುದು ಮೋದಿಯವರು ತಿಳಿದುಕೊಳ್ಳಲಿ.
ಬೆಂಗಳೂರು ಕಟ್ಟುವ ತೆರಿಗೆ ಇಲ್ಲದಿದ್ದರೆ ಮೋದಿ ಸರ್ಕಾರ ಪತರುಗುಟ್ಟಬೇಕಾಗುತ್ತದೆ. ಈ ಬಾರಿ ನೇರ ತೆರಿಗೆಯಿಂದಲೆ ಕರ್ನಾಟಕದಿಂದ 2,66,472 ಕೋಟಿ ತೆರಿಗೆ[ ಆದಾಯ ಮತ್ತು ಕಾರ್ಪೊರೇಟ್] ಯನ್ನು ಮೋದಿ ಸರ್ಕಾರ ಸಂಗ್ರಹಿಸಿದೆ. ನಮ್ಮ ರಾಜ್ಯಕ್ಕೆ 2023-24 ಕ್ಕೆ ಕೊಟ್ಟಿದ್ದ ಗುರಿ 2.23 ಲಕ್ಷ ಕೋಟಿ ರೂಪಾಯಿ. ಆದರೆ ವಸೂಲಿಯಾಗಿದ್ದು 2.66 ಲಕ್ಷ ಕೋಟಿ ರೂಪಾಯಿ. ಈ ತೆರಿಗೆಯಲ್ಲಿ ಸಿಂಹಪಾಲು ಬೆಂಗಳೂರಿನಲ್ಲಿ ಸಂಗ್ರಹವಾಗುತ್ತದೆ.
ದೇಶವು ರಫ್ತು ಮಾಡುವ ಐಟಿ ಸೇವೆ ಮತ್ತು ಉತ್ಪನ್ನಗಳಲ್ಲಿ ಶೇ.40 ರಷ್ಟನ್ನು ಬೆಂಗಳೂರೆ ಕೊಡುಗೆ ಕೊಡುತ್ತದೆ.
ಇಷ್ಟೆಲ್ಲ ಇದ್ದರೂ ಮೋದಿ ಬಂದು ಬೆಂಗಳೂರಿಗರನ್ನು ಹಂಗಿಸುತ್ತಿದ್ದಾರೆ.
ಹಾಗಿದ್ದ ಮೇಲೆ ಬೆಂಗಳೂರಿಗೆ ಮೋದಿ ಸರ್ಕಾರದ ಕೊಡುಗೆ ಏನು?
ಬೆಂಗಳೂರಿನ ಮೇಲೆ ಕಾಳಜಿಯಿದ್ದರೆ ಮೇಕೆ ದಾಟು ಯೋಜನೆಗೆ ಯಾಕೆ ಅನುಮತಿ ಕೊಡುತ್ತಿಲ್ಲ? ಬೆಂಗಳೂರು ಸಮೃದ್ಧವಾಗಿರುವುದನ್ನು ನೋಡಿದರೆ ನಿಮಗೆ ಹೊಟ್ಟೆ ಉರಿಯಾಗುತ್ತದೆಯೆ ಮೋದಿಯವರೆ?
ನಮ್ಮಲ್ಲಿ ಇದ್ದ ಮೈಸೂರು ಬ್ಯಾಂಕನ್ನು ಸೇರಿದಂತೆ ಎಲ್ಲ ಪ್ರಮುಖ ಬ್ಯಾಂಕುಗಳನ್ನು ಕಿತ್ತುಕೊಂಡಿರಿ, ಬೆಂಗಳೂರಿನಲ್ಲಿದ್ದ ಯುಜಿಸಿ ಕೇಂದ್ರವನ್ನು ಕಿತ್ತುಕೊಂಡಿರಿ, ನಮ್ಮಲ್ಲಿದ್ದ ಸಿಆರ್‌ಪಿಎಫ್ ಘಟಕವನ್ನು ಕಿತ್ತು ಉತ್ತರದ ರಾಜ್ಯಗಳಿಗೆ ಕೊಂಡೊಯ್ದಿರಿ.
ನಿಮ್ಮ ದ್ವೇಷ ರಾಜಕಾರಣಕ್ಕಾಗಿ ಬೆಂಗಳೂರು ಮತ್ತು ಕರ್ನಾಟಕ ಇನ್ನೆಷ್ಟು ಕಳೆದುಕೊಳ್ಳಬೇಕು?
9. ಬಡವರ ಬದುಕನ್ನು ದೋಚುತ್ತಿರುವ ಜನದ್ರೋಹಿ ಸರ್ಕಾರ ನಿಮ್ಮದು, ನಾವು ಜನರು ಬೆಲೆಯೇರಿಕೆಯಿಂದ ಬಳಲುತ್ತಿರುವುದನ್ನು ನೋಡಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪಿಸುತ್ತಿದ್ದೇವೆ. ಇದನ್ನು ನೀವು ಮತ್ತು ದೇವೇಗೌಡರು ಕಾಂಗ್ರೆಸ್ಸಿನ ಭ್ರಷ್ಟಾಚಾರ ಎನ್ನುತ್ತಿದ್ದೀರಿ, ನಿಮ್ಮಿಬ್ಬರಿಗೂ ಒಂದಿಷ್ಟಾದರೂ ಬಡ ಜನರ ಮೇಲೆ ಕರುಣೆ ಇದೆಯೆ?
10. ದೇವೇಗೌಡರು ಬೇರೆ ನಿಮ್ಮನ್ನು ಪಕ್ಕದಲ್ಲಿ ಕೂರಿಸಿಕೊಂಡು ಮನಮೋಹನಸಿಂಗ್ ಅವರು ಹಾಗೂ ಯುಪಿಎ ಸರ್ಕಾರದವರು ರಾಷ್ಟçವನ್ನು ಲೂಟಿ ಮಾಡಿ 2014 ರಲ್ಲಿ ಖಾಲಿ ಚೊಂಬನ್ನು ಮೋದಿಯವರ ಕೈಗೆ ಕೊಟ್ಟರು, ಆದರೆ ಮೋದಿಯವರು ಅದನ್ನು ಅಕ್ಷಯ ಪಾತ್ರೆ ಮಾಡಿದರು ಎಂದು ಇಡೀ ಜಗತ್ತು ನಗುವಂಥ ಸುಳ್ಳು ಹೇಳಿದ್ದಾರೆ.
ವಾಸ್ತವ; ದೇವೇಗೌಡರು ಈ ಮಟ್ಟದ ಸುಳ್ಳು ಹೇಳಿ, ಕರ್ನಾಟಕ ಹಾಗೂ ಭಾರತದ ಚರಿತ್ರೆಯಲ್ಲಿ ತಮ್ಮ ಹಿರಿ ವಯಸ್ಸಿನಲ್ಲಿ ಹಾಸ್ಯಾಸ್ಪದರಾಗ ಹೊರಟಿದ್ದಾರೆ. ಎಂದು ಬುದ್ಧಿವಂತರಾದ ಜನ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ.
ನಾನು ಮಾನ್ಯ ದೇವೇಗೌಡರನ್ನು ಕೇಳಬಯಸುತ್ತೇನೆ. ದೇವೇಗೌಡರೆ ಹಾಗಿದ್ದ ಮೇಲೆ 53.11 ಲಕ್ಷ ಕೋಟಿ ಇದ್ದ ದೇಶದ ಸಾಲ ಮಾರ್ಚ್ ವೇಳೆಗೆ ಯಾಕೆ 187 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಯಿತು? ಮೋದಿಯವರು ಅಕ್ಷಯ ಪಾತ್ರೆ ಮಾಡಿದ್ದರೆ ಕೇವಲ 10 ವರ್ಷಗಳಲ್ಲಿ ಯಾಕೆ 124 ಲಕ್ಷ ಕೋಟಿ ರೂಗಳಷ್ಟು ಸಾಲ ಮಾಡಿದರು?
ಮಾನ್ಯ ದೇವೇಗೌಡರೆ 2013 ರಲ್ಲಿ ಕೇವಲ 1 ಲಕ್ಷ ರೂ ಆಸುಪಾಸಿನಲ್ಲಿದ್ದ ಸೆಸ್ ಮತ್ತು ಸರ್ ಛಾರ್ಜುಗಳನ್ನು ಯಾಕೆ ವರ್ಷಕ್ಕೆ 6 ಲಕ್ಷ ಕೋಟಿಗೂ ಅಧಿಕ ಹಣ ದೋಚುತ್ತಿದ್ದಾರೆ.
ಯಾಕೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಗಳ ಮೇಲಿನ ಸಬ್ಸಿಡಿ ತೆಗೆದು ಹಾಕಿ ಬಡವರ ಹೊಟ್ಟೆಯನ್ನು ಉರಿಸುತ್ತಿದ್ದಾರೆ?
ದೇಶವನ್ನು ಅಕ್ಷಯ ಪಾತ್ರೆ ಮಾಡಿದ್ದರೆ, ರೈತರು ಕೇಳುತ್ತಿರುವ 23 ಬೆಳೆಗಳಿಗೆ ಎಂಎಸ್‌ಪಿ ಯನ್ನು ಯಾಕೆ ಕಾಯ್ದೆ ಮಾಡಿ ಜಾರಿಗೊಳಿಸಲಾಗುತ್ತಿಲ್ಲ?
ಕೇಂದ್ರ ಸರ್ಕಾರ ಮಿಲಿಟರಿ ನಡೆಸಲೂ ಸಹ ರಾಜ್ಯಗಳಿಂದ ಶೇ.1 ರಷ್ಟು ಪಾಲನ್ನು ಕಿತ್ತುಕೊಳ್ಳುತ್ತಿದೆ. ಇದು ಅಕ್ಷಯಪಾತ್ರೆನಾ?
ಶೇ. 75 ರಷ್ಟಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಕೇಂದ್ರದ ಪಾಲು ಶೇ. 30-45 ಕ್ಕೆ ಕುಸಿದಿದೆ. ಯಾಕೆ ಹೀಗಾಯಿತು?
ದೇವೇಗೌಡರೆ ನಿಮಗೆ ಗೊತ್ತಿರಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಕಡಿಮೆಯಾಗಿದೆ
2012-13 ರಲ್ಲಿ 46.63 ಬಿಲಿಯನ್ ಡಾಲರುಗಳಷ್ಟಿದ್ದ ವಿದೇಶಿ ನೇರ ಹೂಡಿಕೆಯು 2023-24 ರಲ್ಲಿ 17.96 ಬಿಲಿಯನ್ ಡಾಲರುಗಳಿಗೆ ಇಳಿದಿದೆ.
ಬಿಜೆಪಿಯವರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯು ಕಡಿಮೆಯಾಗಿದೆ ಇತ್ಯಾದಿಯಾಗಿ ಆರೋಪ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಪರಿಸ್ಥಿತಿ ಈ ರೀತಿ ಇದೆ. ಈ ಮಾಹಿತಿಯು ಕೇಂದ್ರ ಸರ್ಕಾರದÀ ಇನ್‌ವೆಸ್ಟ್ ಇಂಡಿಯಾ ಎಂಬ ವೆಬ್ ಸೈಟಿನಲ್ಲಿ ಪ್ರಕಟಿಸಿದ್ದಾರೆ. ನಿಮ್ಮಲ್ಲಿ ಯಾರಾದರೂ ಬುದ್ಧಿವಂತರಿದ್ದರೆ ಅವರಿಂದ ಮಾಹಿತಿ ಪಡೆದುಕೊಳ್ಳಿ.
2023-24 ರಲ್ಲಿ
ರಾಜ್ಯ ವಿದೇಶಿ ನೇರ ಹೂಡಿಕೆ ಶೇ.ವಾರು ಪ್ರಮಾಣ
ಮಹಾರಾಷ್ಟç 30
ಕರ್ನಾಟಕ 22
ಗುಜರಾತ್ 17
ದೆಹಲಿ 13
ತಮಿಳುನಾಡು 5
ಇದು ಮೋದಿ ಮತ್ತು ದೇವೇಗೌಡರಿಬ್ಬರಿಗೂ ಉತ್ತರ]
ಮೋದಿ ಸರ್ಕಾರದ ಕೆಲವು ಸಚಿವರು ಹಾಗೂ ಬಿಜೆಪಿ ನಾಯಕರುಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದರು. ಆದರೆ, ಕೇಂದ್ರ ಸರ್ಕಾರದ ‘ಇನ್‌ವೆಸ್ಟ್ ಇಂಡಿಯಾ ಎಂಬ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ ಮಹಾರಾಷ್ಟçದ ನಂತರ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಎಷ್ಟೆಲ್ಲ ಆರ್ಭಟಗಳನ್ನು ಮಾಡಿದರೂ ಗುಜರಾತ್ ರಾಜ್ಯವು 3 ನೆ ಸ್ಥಾನದಲ್ಲಿದೆ.
ಬಂಡವಾಳ ಹೂಡಿಕೆಯಾಗದೆ ಉದ್ಯೋಗ ಸೃಷ್ಟಿಗೆ ಅವಕಾಶವಿಲ್ಲ. ದಿನೇ ದಿನೇ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಯುವಕರಲ್ಲಿ ಉದ್ಯೋಗದ ಭರವಸೆಯೇ ಇಲ್ಲದಂತಾಗಿದೆ. ದಿನಾಂಕ;27-3-2024 ರಂದು ಕೂಡ ಆರ್ಥಿಕ ಸಲಹೆಗಾರರಾದ ವಿ ಅನಂತ ನಾಗೇಶ್ವರನ್ ರವರು ಎಲ್ಲರಿಗೂ ಉದ್ಯೋಗ ನೀಡಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸನ್ಮಾನ್ಯ ದೇವೇಗೌಡರೆ ಭಾರತ ಅಕ್ಷಯ ಪಾತ್ರೆಯಾಗಿದೆ ಎಂದು ಇಳಿವಯಸ್ಸಿನಲ್ಲಿ ನಿಮಗೆ ಕನಸ್ಸು ಬಿದ್ದಿರಬೇಕು ಸರಿಯಾಗಿ ಹಗಲಿನಲ್ಲಿ ದಾಖಲೆಗಳನ್ನು ಪರಿಶೀಲಿಸಿ ನೋಡಿ ಸತ್ಯ ತಿಳಿಯುತ್ತದೆ.
ಜಾಗತಿಕ ಹಸಿವಿನ ಸೂಚ್ಯಂಕ
ದೇಶ 2014 ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಸ್ಥಾನ 2023 ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಸ್ಥಾನ
ಭಾರತ 76 ದೇಶಗಳಲ್ಲಿ 55 ನೇ ಸ್ಥಾನ 125 ದೇಶಗಳಲ್ಲಿ 111 ನೇ ಸ್ಥಾನ
ಬಾಂಗ್ಲಾದೇಶ 76 ದೇಶಗಳಲ್ಲಿ 57 ನೇ ಸ್ಥಾನ 125 ದೇಶಗಳಲ್ಲಿ 81 ನೇ ಸ್ಥಾನ
ಭಾರತದ ಮಾನವ ಅಭಿವೃದ್ಧಿ ಸೂಚ್ಯಾಂಕವು 191 ದೇಶಗಳಲ್ಲಿ 132 ನೆ ಸ್ಥಾನಕ್ಕೆ ಕುಸಿದಿದೆ. ಈ 10 ವರ್ಷಗಳ ಮೋದಿ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ.
ದೇಶ ಸಮೃದ್ಧವಾಗಿದ್ದರೆ ಹಿಂದಿನ ಸರ್ಕಾರಗಳು ಸ್ಥಾಪಿಸಿದ್ದ ಕಂಪೆನಿಗಳನ್ನು ಮೋದಿಯವರು ಯಾಕೆ ಮಾರುತ್ತಿದ್ದರು?
ದಿನಾಂಕ ;3-2-2022 ರಂದು ಅಸ್ಸಾಮ್ ಮೂಲದ ರಾಜ್ಯ ಸಭಾ ಸದಸ್ಯರಾದ ರಿಪುನ್ ಬೋರಾ ಎಂಬುವವರು ಮೋದಿಯವರ ಸರ್ಕಾರದ ಸಾಧನೆಗಳೇನು ಎಂದು ವಿವರವಾಗಿ ಮಾತನಾಡಿದ್ದಾರೆ. ರಾಷ್ಟçಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಅವರು ಭಾಗವಹಿಸಿ ಮಾತನಾಡಿದ್ದಾರೆ. 1947 ರಿಂದ ಆಡಳಿತ ನಡೆಸಿರುವ ಪ್ರಧಾನಿಗಳು ಸ್ಥಾಪಿಸಿದ ಸಾರ್ವಜನಿಕರ ಸ್ವಾಮ್ಯದ ಸಂಸ್ಥೆ/ಕAಪೆನಿಗಳೆಷ್ಟು? ಅವುಗಳಲ್ಲಿ ಮುಚ್ಚಿದ್ದೆಷ್ಟು? ಇತ್ಯಾದಿ ವಿವರಗಳನ್ನು ನೀತಿ ಆಯೋಗದ ಮಾಹಿತಿಯನ್ನು ಆಧರಿಸಿ ಪ್ರಸ್ತಾಪಿಸಿದ್ದಾರೆ.
ಅವರ ಪ್ರಕಾರ;
ಪ್ರಧಾನ ಮಂತ್ರಿಗಳ ಹೆಸರು ಸ್ಥಾಪಿಸಿದ ಸಾರ್ವಜನಿಕ ವಲಯದ [ಕೇಂದ್ರ ಸರ್ಕಾರಿ ಸ್ವಾಮ್ಯದ] ಸಂಸ್ಥೆಗಳ ಸಂಖ್ಯೆ ಖಾಸಗಿಯವರಿಗೆ ಮಾರಾಟ ಮಾಡಿದ/ ನಿಯಂತ್ರಣಕ್ಕೆ ಕೊಟ್ಟ ಸಂಸ್ಥೆಗಳು/ಕAಪೆನಿಗಳ ಸಂಖ್ಯೆ
ಶ್ರೀಯುತ ಜವಾಹರಲಾಲ್ ನೆಹರೂ 33 0
ಶ್ರೀಯುತ ಲಾಲ್ ಬಹದ್ದೂರ್ ಶಾಸ್ತಿç 05 0
ಶ್ರೀಮತಿ ಇಂದಿರಾ ಗಾಂಧಿ 66 0
ಶ್ರೀಯುತ ರಾಜೀವ್ ಗಾಂಧಿ 16 0
ಶ್ರೀಯುತ ವಿ.ಪಿ ಸಿಂಗ್ 02 0
ಶ್ರೀಯುತ ಐ ಕೆ ಗುಜ್ರಾಲ್ 03 0
ಶ್ರೀಯುತ ಅಟಲ್ ಬಿಹಾರಿ ವಾಜಪೇಯಿ 17 7
ಶ್ರೀಯುತ ಮನಮೋಹನ್ ಸಿಂಗ್ 23 3
ಶ್ರೀಯುತ ನರೇಂದ್ರ ಮೋದಿ 00 23 [ 2022 ರ ಫೆಬ್ರವರಿವರೆಗೆ ಮಾತ್ರ]
ಮುಂದುವರೆದು ಅವರೆ ಇನ್ನೊಂದು ಮಾತನ್ನೂ ಹೇಳುತ್ತಾರೆ, ಒಬ್ಬ ಅಸಮರ್ಥ ಮಗ ತನ್ನ ಹಿರಿಯರು ತನಗೆ ಕೊಟ್ಟಿದ್ದೆಲ್ಲವನ್ನೂ ಮಾರಿ ಮತ್ತೆ ತನ್ನ ಹಿರಿಯರು ತನಗೆ ಏನೂ ಉಳಿಸಿ ಹೋಗಿಲ್ಲ, ತಮಗೆ ಏನೂ ಮಾಡಲಿಲ್ಲ ಎಂದು ಬೈದುಕೊಂಡು ಕೂತ ಹಾಗಿದೆ ಇಂದಿನ ಪರಿಸ್ಥಿತಿ ಎಂದು ನೇರವಾಗಿ ಮೋದಿಯವರ ಆಡಳಿತ ವೈಖರಿಯನ್ನು ಜನರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗೆ ಮೋದಿಯವರ ಸರ್ಕಾರ ಇದುವರೆಗೂ ಕಮಕ್ಕಿಮಕ್ಕೆನ್ನದೆ ಸುಮ್ಮನಿದೆ. ನರೇಂದ್ರ ಮೋದಿಯವರು ದ್ವೇಷದ ಹೊರತಾಗಿ ಏನನ್ನೂ ಸೃಷ್ಟಿಸದೆ ಇದ್ದ ಬದ್ದನ್ನೆಲ್ಲ ಹಾಳು ಮಾಡುವುದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮೆದುಳು, ಬುದ್ಧಿ, ಜ್ಞಾನಗಳಿಲ್ಲದ ಅವರ ಹಿಂಬಾಲಕರು ಮೋದಿಯವರ ಭಜನೆ ಮಾಡಿಕೊಂಡು ಓಡಾಡುತ್ತಿದ್ದಾರೆ.
ದೇವೇಗೌಡರೆ ನೀವೊಬ್ಬ ಅಸಮರ್ಥ ಹಾಗೂ ಜನದ್ರೋಹಿ ಪ್ರಧಾನಿಯನ್ನು ಅಧಿಕಾರದ ಆಸೆಗಾಗಿ ಜನರ ಮೇಲೆ ಹೇರಲು ಹೊರಟಿದ್ದೀರಿ ಎಂಬುದು ಇತಿಹಾಸದಲ್ಲಿ ದಾಖಲಾಗುತ್ತದೆ, ಎಚ್ಚರ ವಹಿಸಿ
ನಾನು ಹೋದಲ್ಲೆಲ್ಲ ಕೆಲವು ಪ್ರಜ್ಞಾವಂತ ಯುವಜನರು ಹೇಳುತ್ತಿರುತ್ಥಾರೆ, ‘ಸರ್ಕಾರಿ ಕಂಪೆನಿಗಳು/ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಹೇಳಿ ಅವುಗಳನ್ನು ಖಾಸಗಿಯವರಿಗೆ ಬಿಡುಗಾಸಿಗೆ ಮಾರಿ, ಅವರಿಗೆ ಯಥೇಚ್ಛವಾಗಿ ಜನರ ದುಡ್ಡಿನಿಂದಲೆ ನಡೆಯುವ ಬ್ಯಾಂಕುಗಳಿAದ ಸಾಲ ಕೊಡಿಸಿ, ಆ ಸಾಲವನ್ನು ಖಾಸಗಿಯವರು ತೀರಿಸಲಾಗದೆ ಸುಸ್ತಿಯಾಗಿದ್ದಾರೆಂದು ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಿ ಚುನಾವಣಾ ಬಾಂಡ್‌ಗಳ ಹೆಸರಲ್ಲಿ ಸಾವಿರಾರು ಕೋಟಿ ದೇಣಿಗೆ ಪಡೆದು ಹಿಂದುತ್ವ ಹಿಂದುತ್ವ ಎಂದು ಹೇಳಿಕೊಂಡು ಜನರ ತಲೆಗೆ ಮಂಕುಬೂದಿ ಎರಚಿ ದೇಶವನ್ನು ಲೂಟಿ ಮಾಡಲು ಹುಟ್ಟಿಕೊಂಡವರೆ ಬಿಜೆಪಿಯವರು. ಅವರ ನಾಯಕ ನರೇಂದ್ರ ಮೋದಿಯವರು.
ಸರ್ಕಾರದ ನಿಯಂತ್ರಣದಲ್ಲಿದ್ದ ಬಹುಪಾಲು ಲಾಭದಾಯಕವಾದ ಸಾರ್ವಜನಿಕ ಒಡೆತನದ ಸಂಸ್ಥೆ/ ಕಂಪೆನಿ/ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರುತ್ತಾ ಹೋದ ಕಾರಣದಿಂದಲೂ ನಿರುದ್ಯೋಗ ಸಮಸ್ಯೆಯು ತೀವ್ರವಾಗುತ್ತಿದೆ.
11. ಮೋದಿಯವರು ದೇಶ ಬಹಳ ಸಮೃದ್ಧವಾಗಿದೆ. ಈಗ ಹಿಂದಿಗಿAತ ಹೆಚ್ಚು ರಫ್ತು ಮಾಡುತ್ತಿದ್ದೇವೆ ಎಂದು 11 ನೆ ಸುಳ್ಳು ಹೇಳಿದ್ದಾರೆ
ವಾಸ್ತವ; . ಭಾರತ ಮತ್ತು ಚೀನಾದ ನಡುವೆ ವ್ಯಾಪಾರ
]
ವರ್ಷ ಚೀನಾ ದೇಶದಿಂದ ಆಮದು [ ಬಿಲಿಯನ್ ಡಾಲರುಗಳಲ್ಲಿ]
[ Imports ] [ ಭಾರತದಿಂದ ಚೀನಾ ದೇಶಕ್ಕೆ ರಫ್ತು
[Exports]
[ಬಿಲಿಯನ್ ಡಾಲರುಗಳಲ್ಲಿ]
2013 51 16.4
2022 102 15.1
2023 136.2
[Directorate of Commercial Intelligence and Statistics’ ಪ್ರಕಾರ ನವೆಂಬರ್ ವರೆಗೆ 97 ವಸ್ತುಗಳ ಆಮದುಗಳು ಹಾಗೂ ಅವುಗಳ ಮೊತ್ತ 102 ಬಿಲಿಯನ್ ಡಾಲರುಗಳು] 16.99
[ಜನವರಿಯಿಂದ-ನವೆಂಬರ್‌ವರೆಗೆ]
ಕೇAದ್ರ ಸರ್ಕಾರದ ‘Directorate of Commercial Intelligence and Statistics’ ಎಂಬ ಸಂಸ್ಥೆಯು ಸಹ ಸಮೀಕ್ಷೆಗಳನ್ನು ನಡೆಸಿ 2023 ರ ವರದಿ ಬಿಡುಗಡೆ ಮಾಡಿದೆ. ವಿಶ್ವಬ್ಯಾಂಕು ಸಹ ದೇಶಗಳ ನಡುವಿನ ರಫ್ತು ಹಾಗೂ ಆಮದುಗಳ ಮಾಹಿತಿ ಬಿಡುಗಡೆ ಮಾಡುತ್ತದೆ. ಈ ಎಲ್ಲ ವರದಿಗಳ ಪ್ರಕಾರ ನಮಗೆ ಸದಾ ಆತಂಕವನ್ನುAಟು ಮಾಡುತ್ತಿರುವ ಚೀನಾ ದೇಶವು ನಮ್ಮ ಆರ್ಥಿಕತೆಯನ್ನು ಕಬಳಿಸುತ್ತಿದೆ. ಇಷ್ಟಾದರೂ ಸಹ ಮೋದಿ ಸರ್ಕಾರವು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಬದಲಾಗಿ ಚೀನಾದಿಂದ ರಾಶಿ ರಾಶಿ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ನಮ್ಮ ಆರ್ಥಿಕತೆಯನ್ನು ನಾಶ ಮಾಡಲು ನಿಂತಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರಫ್ತು ಮತ್ತು ಆಮದುಗಳ ನಡುವೆ ದೊಡ್ಡ ವ್ಯತ್ಯಾಸವಿರದಂತೆ ನೋಡಿಕೊಂಡಿದ್ದರು. ಆದರೆ ಮೋದಿಯವರು ಮನಮೋಹನ್‌ಸಿಂಗ್ ಅವರ ಬುದ್ಧಿವಂತಿಕೆಯ ನಡೆಗಳನ್ನು ಮುರಿದು ಎಸೆದರು. ಹಾಗಾಗಿಯೆ ದೇಶ ಸಂಕಷ್ಟಕ್ಕೆ ಸಿಲುಕಿದೆ.
ಮೇಲಿನ ಉದಾಹರಣೆಯನ್ನು ನೋಡಿದರೆ ನಮ್ಮ ದೇಶದ ಸಮಸ್ಯೆ ಅರ್ಥವಾಗುತ್ತದೆ. 11.31 ಲಕ್ಷ ಕೋಟಿ ರೂಗಳಷ್ಟು ಸಂಪತ್ತು ಚೀನಾಕ್ಕೆ ಹೋಗುತ್ತದೆ. ಚೀನಾದವರು ನಮ್ಮಿಂದ ಖರೀದಿಸುವುದು ಕೇವಲ 1.41 ಲಕ್ಷ ಕೋಟಿ ರೂಗಷ್ಟು ಮಾತ್ರ. ಸುಮಾರು 9.9 ಲಕ್ಷ ಕೋಟಿ ರೂಗಳಷ್ಟು ಸಂಪತ್ತು ಚೀನಾಕ್ಕೆ ಕೊಚ್ಚಿ ಹೋಗುತ್ತಿದ್ದರೂ ಸಹ ಚೌಕಿದಾರನೆಂದು ಹೇಳಿಕೊಳ್ಳುವ ಮೋದಿಯವರು ಕೈಕಟ್ಟಿ ಬಾಯಿ ಮುಚ್ಚಿ ಕೂತಿದ್ದಾರೆ.
2013 ರಲ್ಲಿಯೆ ಭಾರತವು ಚೀನಾ ದೇಶಕ್ಕೆ 16.4 ಬಿಲಿಯನ್ ಡಾಲರುಗಳಷ್ಟು ರಫ್ತು ಮಾಡುತ್ತಿತ್ತು ಎಂಬುದನ್ನು ಮರೆಯಬಾರದು.
ಅದಾನಿ ಮುಂತಾದ ಸ್ನೇಹಿತರಿಗೆ ಲಾಭ ಮಾಡಿಕೊಡಲು ಅಕ್ಕ ಪಕ್ಕದ ದೇಶಗಳ ಜೊತೆಗಿನ ಸಂಬAಧವೂ ಹಾಳಾಗಿದೆ. ಶ್ರೀಲಂಕಾದಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಭಾರತದಿಂದ ಒತ್ತಡವಿದೆಯೆಂದು ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದರು. ಆ ವಿದ್ಯುತ್ ಸ್ಥಾವರ ಅದಾನಿಗೆ ಕೊಡಲಾಗಿದೆ. ಇದರ ನಡುವೆಯೆ ಶ್ರೀಲಂಕಾವನ್ನು ಚೀನಾ ದೇಶ ನಿಯಂತ್ರಿಸಲಾರAಭಿಸಿದೆ. ಇತ್ತೀಚೆಗೆ ಮಾಲ್ಡೀವ್ಸ್ ದೇಶವೂ ನಮ್ಮಿಂದ ದೂರ ಹೋಗಿದೆ. ಮೋದಿ ಸರ್ಕಾರಕ್ಕೆ ಅತ್ಯಂತ ಪ್ರಿಯವಾದ ದೇಶವೆಂದರೆ ತಾಲಿಬಾನ್ ಆಡಳಿತವಿರುವ ಅಪ್ಘಾನಿಸ್ತಾನ ಮಾತ್ರ. ಅಪ್ಘಾನಿಸ್ತಾನಕ್ಕೆ ಗೋಧಿ, ವಿವಿಧ ರೀತಿಯ ಔಷಧಗಳು ಇತ್ಯಾದಿಗಳನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ.
12. ಸನ್ಮಾನ್ಯ ದೇವೇಗೌಡರೆ ಮೋದಿಯವರು ರೈತರ ಪರ ಎಂದು ಹೇಳಿದ್ದೀರಿ, ಮೋದಿಯವರೂ ಸಹ ಹಸಿರು ಶಾಲು ಧರಿಸಿ ವೇಷ ಹಾಕಿದ್ದಾರೆ. ಇಡೀ ದೇಶದ ರೈತ ಸಂಘಟನೆಗಳು ಮೋದಿಯವರು ರೈತ ವಿರೋಧಿ ಎಂದು ತೀರ್ಮಾನಿಸಿ ಪ್ರತಿಭಟಿಸುತ್ತಿವೆ. ಆದರೆ ನಿಮಗೆ ಮಾತ್ರ ರೈತಸ್ನೇಹಿಯಾಗಿ ಕಾಣಿಸುತ್ತಿದ್ದಾರೆ. ನೀವೂ ಸಹ ರೈತ ವಿರೋಧಿಯಾಗಿದ್ದೀರಿ. ರೈತ ವಿರೋಧಿ ಬಿಜೆಪಿಯು ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ರದ್ದು ಮಾಡಿ ಕಳಿಸಿದರೆ ನೀವು ವಿಧಾನಪರಿಷತ್ತಿನಲ್ಲಿ ದುಷ್ಟ ಬಿಜೆಪಿಯವರೊಂದಿಗೆ ಸೇರಿಕೊಂಡು ಅದಕ್ಕೆ ತಡೆ ಹಾಕಿದಿರಿ. ಹಾಗಿದ್ದ ಮೇಲೆ ನೀವು ಯಾವ ಮಾನದಂಡದ ಮೇಲೆ ರೈತರ ಬಗ್ಗೆ ಮಾತನಾಡುತ್ತೀರಿ?
13. ಮೋದಿಯವರು ರಾಜ್ಯದ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಮಾತನಾಡಿದ್ದಾರೆ. ನಾವು ನಮ್ಮ ಮನೆ ಮಕ್ಕಳನ್ನು ಹೇಗೆ ಜೋಪಾನ ಮಾಡಬೇಕೆಂದು ಕಲಿತಿದ್ದೇವೆ. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತಿನಲ್ಲಿ ಹೇಗೆ ಆಡಳಿತ ನಡೆಸಿದ್ದೀರಿ ಎಂದು ಇಡೀ ಜಗತ್ತಿಗೆ ತಿಳಿದಿದೆ. ಮಣಿಪುರದಲ್ಲಿ ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಆಗುತ್ತಿರುವಾಗಲೂ ಆ ವಿಚಾರದ ಕುರಿತು ತುಟಿಪಿಟಕ್ಕೆಂದ ಉದಾಹರಣೆ ಇದೆಯಾ? ಆ ರಾಜ್ಯಕ್ಕೆ ಹೋಗಿದ್ದೀರಾ?
14. ನಿಮ್ಮ ತವರು ರಾಜ್ಯವಾದ ಗುಜರಾತಿನಲ್ಲಿ ಪ್ರತಿ ದಿನ 6 ಜನ ಹೆಂಗಸರ ಮೇಲೆ ಅತ್ಯಾಚಾರವಾಗುತ್ತಿದೆಯೆಂದು 7-3-2024 ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸರ್ಕಾರದ ದಾಖಲೆಗಳನ್ನು ಆಧರಿಸಿ ವರದಿ ಮಾಡಿದೆ. ಅವೆಲ್ಲ ನಿಮ್ಮ ಕಣ್ಣಿಗೆ ಬೀಳುತ್ತಿವೆಯೊ ಇಲ್ಲವೊ? ನಿಮ್ಮ ಬೂಟಾಟಿಕೆ ಮತ್ತು ದೇಶದ ಪ್ರಧಾನಿ ಎಂಬುದನ್ನು ಮರೆತು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಂತೆ ನಡೆದುಕೊಳ್ಳುವುದು ಭಾರತದಂತಹ ಭವ್ಯ ಪರಂಪರೆಯ ದೇಶಕ್ಕೆ ನೀವು ಮಾಡುತ್ತಿರುವ ಅವಮಾನ ಎಂದು ಕನ್ನಡಿಗನಾಗಿ ಹಾಗೂ ಭಾರತೀಯನಾಗಿ ಭಾವಿಸುತ್ತಿದ್ದೇನೆ.
15. ಮೋದಿಯವರು ಕರ್ನಾಟಕದಂಥ ಮರ್ಯಾದಸ್ಥ ಹಾಗೂ ಸ್ವಾಭಿಮಾನಿಗಳ ನೆಲದಲ್ಲಿ , ಕೆಂಪೇಗೌಡರಂಥ ಸಮರ್ಥರು ಆಳಿದ ನೆಲದಲ್ಲಿ ಸುಳ್ಳು ಹೇಳಿ ಈ ನೆಲಕ್ಕೆ ಅವಮಾನ ಮಾಡಿದ್ದಾರೆ. ನಾನು ಮೋದಿಯವರಿಗೆ ನೇರ ಸವಾಲು ಹಾಕುತ್ತೇನೆ. ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ. ಮಾಧ್ಯಮಗಳ ಹಾಗೂ ತಿಳಿದ ಜನರ ಎದುರು ಕೂರೊಣ. ನಾನು ಹೇಳುತ್ತಿರುವ ಈ ಮಾಹಿತಿಗಳೆಲ್ಲ ಕೇಂದ್ರ ಸರ್ಕಾರದ ಇಲಾಖೆಗಳು, ರಿಸರ್ವ್ ಬ್ಯಾಂಕು ಮುಂತಾದ ಮೂಲಗಳಿಂದಲೆ ತೆಗೆದುಕೊಂಡಿರುವುದು. ಬೇಕಿದ್ದರೆ ಆ ಎಲ್ಲ ತಜ್ಞರನ್ನೂ ಕರೆದುಕೊಂಡು ಬನ್ನಿ ಅಥವಾ ದೆಹಲಿಗೆ ಕರೆಯಿರಿ ನಾನೆ ಬರುತ್ತೇನೆ. ಬಹಿರಂಗ ಚರ್ಚೆ ನಡೆಯಲಿ.
ಆದರೆ ಏಕಪಾತ್ರಾಭಿನಯ ಮಾಡುವಂತೆ ಬಂದು ಬೆಟ್ಟದೆತ್ತರ ಸುಳ್ಳು ಹೇಳಿ ಕರ್ನಾಟಕದ ಮಯಾದಸ್ಥರ ಹಾಗೂ ತಿಳುವಳಿಕಸ್ಥರ ನೆಲಕ್ಕೆ ಅವಮಾನ ಮಾಡಬೇಡಿ. ನಿನ್ನೆ ಮಾಡಿದ ಅವಮಾನವನ್ನೆ ಕನ್ನಡಿಗರು ಗಮಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದು ನಿಮಗೆ ನೆನಪಿರಲಿ. ದ್ರೋಹಿಗಳನ್ನೆಂದೂ ಕನ್ನಡಿಗರು ಕ್ಷಮಿಸಿಲ್ಲ. ಕ್ಷಮಿಸುವುದೂ ಇಲ್ಲ.
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!