ಬೆಂಗಳೂರು: ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ. ಬರ್ಡ್ಸ್ ಎಕ್ಸಿಬಿಷನ್ನಲ್ಲಿ ಬಾಲಕ ಸ್ಮೋಕ್ ಬಿಸ್ಕೆಟ್ ತಿಂದಿದ್ದಾನೆ ಎನ್ನಲಾಗಿದೆ.
ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಇನ್ನೂ ಘಟನೆ ಸಂಬಂಧ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೂರಿನ ಬಳಿಕ ಅಧಿಕಾರಿಗಳುಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.. “ಈ ಪಾನೀಯಗಳು -196 ಡಿಗ್ರಿ ಸೆಲ್ಸಿಯಸ್ನಲ್ಲಿ ತಣ್ಣಗಾಗಿರುವ ದ್ರವ ಸಾರಜನಕವನ್ನು ಹೊಂದಿರುತ್ತವೆ, ಇದರಿಂದಾಗಿ ಹೊಟ್ಟೆಯಲ್ಲಿ ಸ್ಫೋಟ ಉಂಟಾಗುತ್ತದೆ, ಇದರಿಂದಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
Alert ‼️‼️
Beware of these kind of smokey drinks.
These drinks have liquid Nitrogen chilled at -196 degree Celsius causing a burst in stomach resulting breathlessness. Earlier in pubs now becoming common in street foods.Be Healthy eat Healthy https://t.co/O0WokXEDUJ
— चीते की चाल (@raunaqji) April 21, 2024