ಮಂಡ್ಯ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಭಾವನಾತ್ಮಕ ಹೇಳಿಕೆಗೆ ಮರುಳಾಗಬೇಡಿ. ಅಂದು ಮೇಕೆದಾಟು ಯೋಜನೆಗಾಗಿ ನಡೆದಂತ ಪಾದಯಾತ್ರೆ ಟೀಕಿಸಿದ್ರು, ಇಂದು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ರೂ ಅವರೊಂದಿಗೆ ಮೈತ್ರಿ ಮಾಡಿಕೊಂಡು ಹೊಗಳುತ್ತಿದ್ದಾರೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಬಹಿರಂಗ ಸಭೆಯಲ್ಲಿ ಮಾತನಾಡಿದಂತ ಅವರು, ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದೆ ಅಂದು ಇಲ್ಲಿನ ಶಾಸಕ ಕೃಷ್ಣರನ್ನು ಸಚಿವರನ್ನಾಗಿ ಮಾಡಲು ಬಿಡಲಿಲ್ಲ. ಅವರು ಕುಟುಂಬ ರಾಜಕಾರಣದ ವಿರುದ್ದ ಇದ್ರು ಅದಕ್ಕಾಗಿ ಅವರನ್ನು ದೇವೇಗೌಡ್ರು ಮಂತ್ರಿ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿರೋದ್ರಿಂದ ಈ ಕ್ಷೇತ್ರದಲ್ಲಿ ಲೀಡ್ ಬರುವ ವಿಶ್ವಾಸವಿದೆ. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದರು.
ಪ್ರಧಾನಿ ಮೋದಿ ವಿರುದ್ದ ಸಭೆಯಲ್ಲಿ ಸಿದ್ರಾಮಯ್ಯ ಆಕ್ರೋಶ ಹೊರ ಹಾಕಿದಂತ ಅವರು, ಎಚ್ಡಿಡಿ ಮತ್ತು ಎಚ್ಡಿಕೆ ಭಾವನಾತ್ಮಕ ಹೇಳಿಕೆಗೆ ಮರಳಾಗಿದಿರಿ. ಅವರಿಬ್ಬರಿಗೂ ಅಳುವುದು ಅವರ ಕೊನೆ ಅಸ್ತ್ರ,ಇದನ್ನ ನಂಬಬೇಡ. ಅಂದು ನಮ್ಮ ಮೇಕೇದಾಟು ಪಾದೆಯಾತ್ರೆಯನ್ನು ಟೀಕೆ ಮಾಡಿದ್ರು. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನ್ಯಾಯ ಆಗಿದೆ. ಇದ್ಯಾವುದಕ್ಕೆ ಅವರು ಮಾಜಿ ಪ್ರಧಾನಿಯಾಗಿ ಸಂಸತ್ ಸದಸ್ಯರಾಗಿ ಇದ್ರು ಮೌನವಾಗಿದ್ರು. 2109 ರಲ್ಲಿ ಗೆದ್ದ 27 ಜನರು ರಾಜ್ಯದ ಪರವಾಗಿ ಒಮ್ಮೆಯ ಮಾತಾಡಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ
‘ಮೋದಿ’ ತಮ್ಮ ಭಾಷಣದಲ್ಲಿ ಈ ಜುಮ್ಲಾಗಳಿಗೆ ಉತ್ತರ ನೀಡುವಂತೆ ‘ಸಿಎಂ ಸಿದ್ದರಾಮಯ್ಯ’ ಸವಾಲು
BREAKING: ‘ಚುನಾವಣಾ ನೀತಿ ಸಂಹಿತೆ’ ಉಲ್ಲಂಘನೆ: ‘ಡಿಸಿಎಂ ಡಿ.ಕೆ ಶಿವಕುಮಾರ್’ ವಿರುದ್ಧ ‘FIR’ ದಾಖಲು