ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಸಮೃದ್ಧಗೊಳಿಸಿದ್ದಾರೆ. ಖಾಲಿಯಾಗಿದ್ದಂತ ಚೊಂಬನ್ನೇ ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಲೂಟಿ ಮಾಡಿ, ಚೊಂಬಿನ ಸ್ಥಿತಿ ತಂದಿದ್ದು ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಹೆಸರೇಳದೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ವಾಗ್ಧಾಳಿ ನಡೆಸಿದರು.
ಇಂದು ಚಿಕ್ಕಬಳ್ಳಾಪುರದ ಆಗಲಗುರ್ಕಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಚೊಂಬು ಜಾಹೀರಾತು ಪ್ರದರ್ಶಿಸಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.
ರಾಜ್ಯಕ್ಕೆ ನಿಜವಾಗಿಯೂ ಚೊಂಬು ಕೊಟ್ಟವರು ಯಾರು ಎಂದು ಪ್ರಶ್ನಿಸಿದಂತ ಅವರು, ಡಿಕೆ ಶಿವಕುಮಾರ್ ಈ ರಾಜ್ಯವನ್ನೇ ಲೂಟಿ ಮಾಡಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಖಾಲಿಯಾಗಿದ್ದ ಚೊಂಬನ್ನೇ ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬಂದು ಸಣ್ಣವರ್ಗದವರನ್ನು ಮೇಲಕ್ಕೆತ್ತಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ದೇಶದ ಸಂಪತ್ತು ಲೂಟಿ ಮಾಡಿದ್ರು. ಅದನ್ನ ತುಂಬಿಸಿದವರು ಮೋದಿಯವರು ಎಂಬುದಾಗಿ ಕೊಂಡಾಡಿದರು.
‘ಮೋದಿ’ ತಮ್ಮ ಭಾಷಣದಲ್ಲಿ ಈ ಜುಮ್ಲಾಗಳಿಗೆ ಉತ್ತರ ನೀಡುವಂತೆ ‘ಸಿಎಂ ಸಿದ್ದರಾಮಯ್ಯ’ ಸವಾಲು
BREAKING: ‘ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್’ ವಿರುದ್ಧ ‘ಕಾಂಗ್ರೆಸ್’ನಿಂದ ‘ಚುನಾವಣಾ ಆಯೋಗ’ಕ್ಕೆ ದೂರು