ಹುಬ್ಬಳ್ಳಿ: ಭೀಕರವಾಗಿ ಕೊಲೆಯಾದ ನೇಹಾಳ ಸಾವಿಗೆ ದಿನದಿಂದ ದಿನಕ್ಕೆ ಬಿಗ್ ಟ್ವಿಸ್ಟ್ ಸಿಗುತ್ತಿದೆ. ಈ ನಡುವೆ ನೇಹಾ-ಫಯಾಜ್ ಲವ್ ಮಾಡುತ್ತಿದ್ದರು ಅಂಥ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ನೀಡಿದ್ದಾರೆ.
ನನ್ನ ಮಗನಿಗೆ ನೇಹಾಳೇ ಪ್ರಪೋಸ್ ಮಾಡಿದ್ದಳು ಅಂತ ಆರೋಪಿ ತಾಯಿ ಹೇಳಿದ್ದಾರೆ, ತಪ್ಪು ಯಾರೇ ಮಾಡಿದ್ದರು ಅವರಿಗೆ ಕಾನೂನು ಪ್ರಕಾರ ಕಠಿಣ ಕ್ರಮವಾಗಲಿ ಅಂತ ಹೇಳಿದರು. ಇನ್ನೂ ನನ್ನ ಮಗ ಕೆಎಎಸ್ ಅಧಿಕಾರಿ ಆಗಬೇಕು ಅಂಥ ಆಸೆ ಹೊಂದಿದ್ದ, ಆದರೆ ಅದು ಸಾಧ್ಯವಾಗಲಿಲ್ಲ ಅಂತ ಹೇಳಿದರು. ಆತ ಬಹಳ ದೊಡ್ಡ ತಪ್ಪು ಮಾಡಿದ್ದಾನೆ ಅವನಿಗೆ ಕಾನೂನು ಪ್ರಕಾರ ಶಿಕ್ಟೆಯಾಗಲಿ ಅಂತ ಹೇಳಿದರು.
ಇನ್ನೂ ಇಬ್ಬರ ಲವ್ ಬಗ್ಗೆ ನನ್ನ ಬಳಿ ನನ್ನ ಮಗ ಹೇಳಿದ ವೇಳೆಯಲ್ಲಿ ಇದಾವುದು ಬೇಡ ಅಂತ ಹೇಳಿದ್ದೆ. ಇದೆಲ್ಲ ಒಳ್ಳೆಯದು ಅಲ್ಲ ಅಂತ ನಾವು ಹೇಳಿದ್ದೆ, ನೇಹಾ ತುಂಬಾ ಒಳ್ಳೆ ಹುಡುಗಿ ಅಂಥ ಹೇಳಿದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದು, ಬಳಿಕ ದಿನ ಕಳೆದ ಹಾಗೇ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಅದರೆ ಅದು ಒನ್‌ಸೈಡ್ ಲವ್ ಅಲ್ಲವೇ ಅಲ್ಲ. ಇಬ್ಬರು ಪ್ರೀತಿಸುತ್ತಿದ್ದರು ಅಂತ ಹೇಳಿದರು. ನನಗೂ ಮಗಳಿದ್ದಾಳೆ, ನನಗೂ ನೋವಾಗುತ್ತಿದೆ ತಮ್ಮ ದುಖಃವನ್ನು ತೋಡಿಕೊಂಡಿದ್ದಾರೆ.