ತುಮಕೂರು: ಜಿಲ್ಲೆಯಲ್ಲಿ ರಾಮ ನವಮಿ ಪಾಲನಕ, ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ರಾಮ ನವಮಿ ಪ್ರಯುಕ್ತ ಮಜ್ಜಿಗೆ, ಪಾನಕ, ಪಲಾರ ಮಾಡಲಾಗಿತ್ತು. ಇಂತಹ ದೇವರ ಪ್ರಸಾದ ಎಂಬುದಾಗಿ ನೀಡಿದಂತ ಪಾನಕ, ಮಜ್ಜಿಗೆಯನ್ನು ಹಂಚಲಾಗಿದೆ.
ಹೀಗೆ ದೇವಸ್ಥಾನದಲ್ಲಿ ಹಂಚಿದಂತ ಮಜ್ಜಿಗೆ, ಪಾನಕ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಎಡೆಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ, ಪರಿಶೀಲನೆ ನಡೆಸಿ, ವಾಂತಿ, ಬೇಧಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚೋದಕ್ಕಾಗಿ ಪಾನಕ, ಮಜ್ಜಿಗೆಯ ಮಾದರಿಯನ್ನು ಸಂಗ್ರಹಿಸಿ ಕೊಂಡೊಯ್ತಿದ್ದಾರೆ ಎನ್ನಲಾಗಿದೆ.
BREAKING: ಇವಿಎಂ-ವಿವಿಪ್ಯಾಟ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
`ಕಾಂಗ್ರೆಸ್ ಗೆ ಮತ ಹಾಕಿ’ : ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಅಬ್ಬರದ ಪ್ರಚಾರ!