ತುಮಕೂರು: ಜಿಲ್ಲೆಯಲ್ಲಿ ನಿನ್ನೆ ರಾಮನವಮಿ ಪ್ರಯುಕ್ತ ಮಾಡಲಾಗಿದ್ದಂತ ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ರಾಮನವಮಿ ಪ್ರಯುಕ್ತ ಮಜ್ಜಿಗೆ, ಪಾನಕ, ಪಲ್ಲಾರ ಮಾಡಲಾಗಿತ್ತು. ನಿನ್ನೆ ಸಂಜೆ ದೇವಸ್ಥಾನದ ಮುಂದೆ ನೆರೆದಿದ್ದಂತ ಗೊಲ್ಲರಹಟ್ಟಿಯ ಜನತೆಗೆ ಮಜ್ಜಿಗೆಯನ್ನು ವಿತರಿಸಲಾಗಿತ್ತು.
ರಾಮನವಮಿ ಪ್ರಯುಕ್ತ ನೀಡಲಾಗಿದ್ದಂತ ಮಜ್ಜಿಗೆ ಸೇವಿಸಿದಂತ 45ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದೀಗ ಅನೇಕರು ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರೋದಾಗಿ ತಿಳಿದು ಬಂದಿದೆ.
Rain in Karnataka: ರಾಜ್ಯದ ರೈತರಿಗೆ ಸಂತಸದ ಸುದ್ದಿ: ಇಂದಿನಿಂದ 5 ದಿನ ಗುಡುಗು, ಮಿಂಚು ಸಹಿತ ಮಳೆ
BREAKING: ಇವಿಎಂ-ವಿವಿಪ್ಯಾಟ್ ಪರಿಶೀಲನೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ