ದಾವಣಗೆರೆ : ಸ್ಮೋಕ್ ಬಿಸ್ಕೆಟ್ ತಿಂದು ಬಾಲಕನನೊಬ್ಬ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ನಗರದ ಖಾಸಗಿ ಕಂಪನಿಯ ಎಕ್ಸಿಬಿಷನ್ ನಲ್ಲಿ ನಡೆದಿದೆ.
ದಾವಣಗೆರೆ ನಗರದಲ್ಲಿ ಮನರಂಜನೆಗಾಗಿ ಖಾಸಗಿ ಕಂಪನಿ ಎಕ್ಸಿಬಿಷನ್ ಹಾಕಲಾಗಿದ್ದು, 80 ರೂ.ಗೆ 5 ಸ್ಮೋಕ್ ಬಿಸ್ಕಟ್ ಗಳನ್ನು ತಿಂದ ಬಾಲಕ ಬಿಸ್ಕೆಟ್ ನುಂಗಲು ಆಗದೇ, ಉಗುಳಲು ಆಗದೇ ಅಸ್ವಸ್ಥನಾಗಿದ್ದು, ಕೂಡಲೇ ಅಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ಎಕ್ಸಿಬಿಷನ್ ನಲ್ಲಿ ಸ್ಟಾಲ್ ಅನ್ನು ಕಿತ್ತು ಬಿಸಾಕಿದ್ದಾರೆ.