ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಹಾಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಈಗ ಕಾಂಗ್ರೆಸ್ ಪಾರ್ಟಿಗೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹಲವು ಮಂದಿ ನಮ್ಮ ಪಾರ್ಟಿಗೆ ಬಂದು ಸೇರುತ್ತಿದ್ದಾರೆ. ಅಂತ ಹೇಳಿದರು. ಇದಲ್ಲದೇ ಸೋಲಿನ ಭಯದಿಂದಲೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನಮ್ಮ ಕಾರ್ಯಕ್ರಮಗಳ ಮೂಲಕ ಬಿಜೆಪಿ ನಿರ್ಮೂಲನೆಯಾಗಲಿದೆ ಅಂತ ಹೇಳಿದರು. ಬಿಜೆಪಿಯ ಸರಿ ಸುಮಾರು ನೂರು ಮಂದಿಗೆ ಟಿಕೆಟ್ ಕೊಟ್ಟಿಲ್ಲ, ಈ ಮೂಲಕ ಎನ್‌ಡಿಯ ಪರಿಸ್ಥಿತಿ ಏನು ಎನ್ನುವುದು ತಿಳಿದಿದೆ. ಅವರ ಪಾರ್ಟಿಯವರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಜೆಪಿ ಹಣೆ ಬರಹದಲ್ಲಿ ಗ್ಯಾರಂಟಿಯನ್ನು ತೆಗೆಯುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದರು.
LIVE : ಪಕ್ಷ ಸೇರ್ಪಡೆ ಕಾರ್ಯಕ್ರಮ, ಕೆಪಿಸಿಸಿ ಕಚೇರಿ https://t.co/SQB4fBkNRW
— Karnataka Congress (@INCKarnataka) April 17, 2024