ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಜೊತೆಗೆ ಕಾಲರಾ ಆರ್ಭಟಿಸುತ್ತಿದೆ. ಇಂದು ಬೆಂಗಳೂರು ನಗರದಲ್ಲಿ ಮತ್ತೊಬ್ಬರಿಗೆ ಕಾಲರಾ ದೃಢಪಟ್ಟಿದ್ದು, ರೋಗಿಗಳ ಸಂಖ್ಯೆ ರಾಜ್ಯಾಧ್ಯಂತ 27ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಜನವರಿಯಿಂದ ಮಾರ್ಚ್ ವರೆಗೆ ಬೆಂಗಳೂರು ನಗರದಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಏಪ್ರಿಲ್ 2024ರವರೆಗೆ 7 ಕೇಸ್ ಜೊತೆಗೆ ಇಂದು ಒಬ್ಬರಿಗೆ ಕಾಲರಾ ದೃಢಪಟ್ಟ ಕಾರಣ, 10 ಮಂದಿಗೆ ಕಾಲರಾ ದೃಢಪಟ್ಟಂತೆ ಆಗಿದೆ ಎಂದಿದೆ.
ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 13 ಜನರಿಗೆ ಕಾಲರಾ ದೃಢಪಟ್ಟಿದ್ದರೇ, ಮೈಸೂರಲ್ಲಿ ಮೂವರಿಗೆ, ರಾಮನಗರದಲ್ಲಿ ಒಬ್ಬರು ಸೇರಿದಂತೆ ಒಟ್ಟು 27 ಜನರಿಗೆ ರಾಜ್ಯಾಧ್ಯಂತ ಕಾಲರಾ ದೃಢಪಟ್ಟಿದೆ ಎಂದು ತಿಳಿಸಿದೆ.
BREAKING : ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ : ಜೆಸಿಬಿಗೆ ಆಟೋ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಸಾವು