ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿ ಕುರಿತಂತೆ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ ಅವರು, ಒಂದೆಡೆ.. ಗ್ಯಾರಂಟಿಗಳಿಂದಾಗಿ ಸ್ವಲ್ಪವಾದರೂ ದಾರಿಗೆ ಬಂದ ಬಡ ಕುಟುಂಬಗಳು… ಮತ್ತೊಂದೆಡೆ… ಪೂರ್ತಿಯಾಗಿ ದಿಕ್ಕೆಟ್ಟ, ದಾರಿಗೆಟ್ಟ ಕುಮಾರಸ್ವಾಮಿಗಳು.. -ಶಿವಸುಂದರ್ ಹೇಳಿ, “ದಾರಿ ತಪ್ಪಿದ ಮಗ” ಯಾರು ? ಎಂದು ಪ್ರಶ್ನಿಸಿದ್ದಾರೆ.
ಎರಡನೇ ವರ್ಷಗಳ ಹಿಂದೆ ದೆಹಲಿ ಮಹಾಪ್ರಭುಗಳು ಉತ್ತರ ಕುಮಾರಸ್ವಾಮಿಯ ಕುಟುಂಬಕ್ಕೆ ಅಪ್ಪ ಮಗ ಮೊಮ್ಮಕ್ಕಳ ಪಕ್ಷ ಅಂತ ಮುಖಕ್ಕೆ ಉಗಿದಿದ್ರು, ಈಕಡೆ ಉತ್ತರ ಕುಮಾರಸ್ವಾಮಿಗಳು ಸಿಟ್ಟಿಗೆದ್ದು ಮಹಾಪ್ರಭು ಕಳ್ಳ, ಖದೀಮ ಅಂತೋನು, ಇಂಥೋನು ಅಂತ ಇವ್ರೂ ಸಮಾ ಉಗಿದಿದ್ರು. ಈಗ ಇಬ್ರೂ ಮಿಕ್ಸ್ ಆಗಿಬಿಟ್ಟವ್ರೆ ಅವನ ಉಗಳನ್ನು ಇವನು, ಇವನ ಉಗುಳನ್ನು ಅವನು ಒರಿಸಿಕೊಂಡು ಕುಂತಿದ್ದಾರೆ. ಅವನಿಗೂ ನಾಚಿಕೆ ಇಲ್ಲ. ಇವನಿಗೂ ನಾಚಿಕೆಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಒಂದೆಡೆ..
ಗ್ಯಾರಂಟಿಗಳಿಂದಾಗಿ
ಸ್ವಲ್ಪವಾದರೂ
ದಾರಿಗೆ ಬಂದ
ಬಡ ಕುಟುಂಬಗಳು…ಮತ್ತೊಂದೆಡೆ…
ಪೂರ್ತಿಯಾಗಿ
ದಿಕ್ಕೆಟ್ಟ,
ದಾರಿಗೆಟ್ಟ
ಕುಮಾರಸ್ವಾಮಿಗಳು..-ಶಿವಸುಂದರ್
ಹೇಳಿ,
“ದಾರಿ ತಪ್ಪಿದ ಮಗ” ಯಾರು ?? #justasking pic.twitter.com/jGctH4wd8y— Prakash Raj (@prakashraaj) April 14, 2024