ಶಿವಮೊಗ್ಗ: ಏಪ್ರಿಲ್ 17 ರಂದು ಶ್ರೀ ರಾಮ ನವಮಿ ಹಬ್ಬ ಹಾಗೂ ಏಪ್ರಿಲ್ 21 ರಂದು ಮಹಾವೀರ ಜಯಂತಿ ಇರುವ ಪ್ರಯುಕ್ತ ಈ ದಿನಾಂಕಗಳಂದು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ-24: ಇಂದು 05 ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.15 ರಂದು ಒಟ್ಟು 05 ನಾಮಪತ್ರ ಸಲ್ಲಿಕೆ ಆಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ 02 ನಾಮಪತ್ರಗಳು, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ಪಿ.ಶ್ರೀಪತಿ ಮತ್ತು ಎನ್.ವಿ.ನವೀನ್ ಕುಮಾರ್ ಸೇರಿದಂತೆ ಇಂದು ನಾಲ್ಕು ಜನ ಅಭ್ಯರ್ಥಿಗಳಿಂದ ಒಟ್ಟು 05 ನಾಮಪತ್ರಗಳು ಸಲ್ಲಿಕೆಯಾಗಿವೆ.
ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕುಸಿತ ; 14,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ಮುಂದಾದ ‘ಟೆಸ್ಲಾ’
BREAKING: ‘ಸಂಸದ ತೇಜಸ್ವಿ ಸೂರ್ಯ’ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ‘ಚುನಾವಣಾ ಆಯೋಗ’ಕ್ಕೆ ದೂರು