ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಣಾಪಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ನೋಟೀಸ್ ಜಾರಿ ಕೆಲವು ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಗಳು ಕೆಲವು ವಾಹನಗಳನ್ನು ತಪಾಸಣೆ ಮಾಡದೇ ಇರುವುದು ಹಾಗೂ ರಾತ್ರಿ ವೇಳೆ ನಿದ್ದೆ ಮಾಡುತ್ತಿರುವ ಬಗ್ಗೆ ಚುನಾವಣಾ ವೆಚ್ಚ ವೀಕ್ಷಕರು ಗಮನಿಸಿರುವ ಹಿನ್ನಲೆಯಲ್ಲಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಲೋಪ ಕಂಡು ಬಂದಲ್ಲಿ ಆರ್.ಪಿ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿ ದಿನ ಸಹಾಯಕ ಚುನಾವಣಾಧಿಕಾರಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸ ಬೇಕು. ಜಿಲ್ಲಾಧಿಕಾರಿ ಗಳ ಕಚೇರಿಯ ದೂರು ನಿರ್ವಾಹಣಾ ಕೇಂದ್ರದಲ್ಲಿ ಚೆಕ್ ಪೋಸ್ಟ್ ಗಳ ಕಾರ್ಯನಿರ್ವಾಹಣೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಕಾರ್ಯನಿರ್ವಹಣೆ ಯಲ್ಲಿ ಲೋಪ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಏ.16 ರಿಂದ 18 ರವರೆಗೆ ಮನೆ ಮತದಾನ ಮಂಡ್ಯ ಲೋಕಸಭಾ ಕ್ಷೇತ್ರಷ ವ್ಯಾಪ್ತಿಯಲ್ಲಿ ಏಪ್ರಿಲ್ 16 ರಿಂದ 18 ರವರೆಗೆ 85 ವರ್ಷ ಹಾಗೂ ಮೇಲ್ಪಟ್ಟ 2570 ಮತದಾರರಿಗೆ ಹಾಗೂ 885 ವಿಕಲಚೇತನರಿಗೆ ಮನೆಯಿಂದ ಮತದಾನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈಗಾಗಲೇ ಮತದಾರರಿಗೆ ಮನೆ ಮತದಾನ ಕುರಿತು ಮಾಹಿತಿ ನೀಡಲಾಗಿದೆ. ಸೆಕ್ಟರ್ ಅಧಿಕಾರಿಗಳು ರೂಟ್ ಮ್ಯಾಪ್ ಸಿದ್ಧಪಡಿಸಿಕೊಳ್ಳಬೇಕು. ಕಡ್ಡಾಯವಾಗಿ ಜಿ.ಪಿ.ಎಸ್ ವಾಹನವನ್ನು ಮನೆ- ಮನೆ ಮತದಾನಕ್ಕೆ ನಿಯೋಜಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಮನೆ ಮತದಾನದಲ್ಲಿ ಗೌಪ್ಯತೆ ಕಾಪಾಡಿ. ಮತದಾನದ ಸಂದರ್ಭದಲ್ಲಿ ಕಂಪಾಟ್೯ಮೆಂಟ್ ಬಳಸಿ ಎಂದರು.
ಬ್ಯಾಲೆಟ್ ಪೇಪರ್ ಗಳನ್ನು ಕ್ರಮ ಸಂಖ್ಯೆ ಅನುಸಾರ ವಿತರಿಸಿ. ಉಳಿಯುವ ಬ್ಯಾಲೆಟ್ ಪೇಪರ್ ಗಳನ್ನು ಹಿಂದಿರುಗಿಸಬೇಕು. ಮೃತಪಟ್ಟ ಮತದಾರರಿದ್ದಲ್ಲಿ ಅದನ್ನು ಸಹ ಗೈರು ಹಾಜರಿ ಮೃತ ಪಟ್ಟಿರುತ್ತಾರೆ ಎಂದು ಸರಿಯಾಗಿ ನಮೂದಿಸಿ. ವಿಡಿಯೋ ಗ್ರಾಫರ್ ಗಳಿಗೆ ಸರಿಯಾದ ತರಬೇತಿ ನೀಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ಮಹೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ
ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕುಸಿತ ; 14,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ಮುಂದಾದ ‘ಟೆಸ್ಲಾ’
BREAKING: ‘ಸಂಸದ ತೇಜಸ್ವಿ ಸೂರ್ಯ’ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ‘ಚುನಾವಣಾ ಆಯೋಗ’ಕ್ಕೆ ದೂರು