Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಎನ್ಕೌಂಟರ್: 10 ಉಗ್ರರ ಹತ್ಯೆ

15/05/2025 7:05 AM

ಪಾದಚಾರಿಗಳ ಸುರಕ್ಷತೆಗೆ ಮಾರ್ಗಸೂಚಿ ರೂಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

15/05/2025 6:52 AM

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ FIR ದಾಖಲು | Col Sofia Qureshi

15/05/2025 6:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೆಂಪು ಚಿನ್ನ’ದ ಕೃಷಿ : ನೀವೂ ಒಂದೇ ಒಂದು ಕಿಲೋ ಬೆಳೆದ್ರೂ, ಲಕ್ಷಾಂತರ ರೂಪಾಯಿ ಗಳಿಸ್ಬೋದು
INDIA

‘ಕೆಂಪು ಚಿನ್ನ’ದ ಕೃಷಿ : ನೀವೂ ಒಂದೇ ಒಂದು ಕಿಲೋ ಬೆಳೆದ್ರೂ, ಲಕ್ಷಾಂತರ ರೂಪಾಯಿ ಗಳಿಸ್ಬೋದು

By KannadaNewsNow15/04/2024 5:35 PM

ನವದೆಹಲಿ : ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಲಕ್ಷಗಟ್ಟಲೆ ದುಡಿಮೆ ತೊರೆದು ವ್ಯವಸಾಯ ಮಾಡಿ ಕೈತುಂಬಾ ಹಣ ಗಳಿಸುತ್ತಿರುವ ಯುವಕರಿದ್ದಾರೆ. ನೀವೂ ಕೃಷಿಯನ್ನ ಪ್ರೀತಿಸಿದರೆ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ವ್ಯಾಪಾರದ ಭಾಗವಾಗಿ ಕೇಸರಿ ಕೃಷಿಯ ಬಗ್ಗೆ ತಿಳಿಯೋಣ. ಇದರಿಂದ ನೀವು ಪ್ರತಿ ತಿಂಗಳು 3 ಲಕ್ಷದಿಂದ 6 ಲಕ್ಷ ರೂಪಾಯಿ ಗಳಿಸಬಹುದು. ಇದಲ್ಲದೆ, ನೀವು ಇನ್ನೂ ಹೆಚ್ಚಿನದನ್ನು ಗಳಿಸಬಹುದು. ಈ ಕೃಷಿಯಲ್ಲಿ ಗಳಿಕೆಯು ನಿಮ್ಮ ವ್ಯಾಪಾರದ ಬೇಡಿಕೆಯನ್ನ ಅವಲಂಬಿಸಿರುತ್ತದೆ.

ಕೇಸರಿಯನ್ನ ಕೆಂಪು ಚಿನ್ನ ಎಂದೂ ಕರೆಯುತ್ತಾರೆ. ಯಾಕಂದ್ರೆ, ಅದು ತುಂಬಾ ದುಬಾರಿಯಾಗಿದೆ. ಪ್ರಸ್ತುತ, ಭಾರತದಲ್ಲಿ ಪ್ರತಿ ಕೆಜಿ ಕೇಸರಿ ಬೆಲೆ 2,50,000 ರೂಪಾಯಿಂದ 3,00,000 ರೂಪಾಯಿ ನಡುವೆ ಇದೆ.

ಕೇಸರಿ ಕೃಷಿಗೆ ಜಮೀನು ಹೇಗೆ ಸಿದ್ಧಪಡಿಸಲಾಗುವುದು.?
ಕೇಸರಿ ಬೀಜಗಳನ್ನ ಬಿತ್ತುವ ಮೊದಲು ಹೊಲವನ್ನ ಚೆನ್ನಾಗಿ ಉಳುಮೆ ಮಾಡಲಾಗುತ್ತದೆ. ಇದಲ್ಲದೆ 90 ಕೆಜಿ ಸಾರಜನಕ, 60 ಕೆಜಿ ರಂಜಕ ಮತ್ತು ಪೊಟ್ಯಾಷ್ ಜೊತೆಗೆ 20 ಟನ್ ಹಸುವಿನ ಸಗಣಿ ಗೊಬ್ಬರವನ್ನ ಹೆಕ್ಟೇರಿಗೆ ಅಂತಿಮ ಉಳುಮೆ ಮಾಡುವ ಮೊದಲು ಹಾಕಬೇಕು. ಇದು ಕೇಸರಿ ಉತ್ಪಾದನೆಯನ್ನ ಹೆಚ್ಚಿಸುತ್ತದೆ. ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಜುಲೈನಿಂದ ಆಗಸ್ಟ್’ವರೆಗೆ ಕೇಸರಿ ಕೊಯ್ಲು ಮಾಡಲು ಉತ್ತಮ ಸಮಯ. ಆದ್ರೆ, ಜುಲೈ ಮಧ್ಯಭಾಗವು ಇದಕ್ಕೆ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಬಯಲು ಸೀಮೆಯಲ್ಲಿ ಫೆಬ್ರವರಿ ಮತ್ತು ಮಾರ್ಚ್ ನಡುವೆ ಕೇಸರಿ ಬೀಜಗಳನ್ನ ಬಿತ್ತಲಾಗುತ್ತದೆ.

ಬಿಸಿ ವಾತಾವರಣದಲ್ಲಿ ಕೇಸರಿ ಬೆಳೆಯಿರಿ.!
ಸಮುದ್ರ ಮಟ್ಟದಿಂದ 1500 ರಿಂದ 2500 ಮೀಟರ್ ಎತ್ತರದಲ್ಲಿ ಕೇಸರಿ ಬೆಳೆಯಲಾಗುತ್ತದೆ. ಈ ಕೃಷಿಗೆ ಸಾಕಷ್ಟು ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ. ಚಳಿ ಮತ್ತು ಮಳೆಗಾಲದಲ್ಲಿ ಕೇಸರಿ ಬೆಳೆಯಲು ಸಾಧ್ಯವಿಲ್ಲ. ಬಿಸಿ ವಾತಾವರಣ ಇರುವ ಕಡೆ ಬೇಸಾಯ ಮಾಡುವುದು ಉತ್ತಮ ಎಂದು ಕೃಷಿ ತಜ್ಞರು ಸಲಹೆ ನೀಡುತ್ತಾರೆ.

ಕೇಸರಿ ಬೆಳೆಗೆ ಯಾವ ಮಣ್ಣು ಒಳ್ಳೆಯದು.?
ಕೇಸರಿ ಬೆಳೆಯಲು ಮರಳು, ಜೇಡಿಮಣ್ಣು ಮತ್ತು ಲೋಮಿ ಮಣ್ಣು ಒಳ್ಳೆಯದು. ಆದ್ರೆ, ಕೇಸರಿಯನ್ನ ಇತರ ಮಣ್ಣಿನಲ್ಲಿಯೂ ಸುಲಭವಾಗಿ ಬೆಳೆಸಬಹುದು. ಹೊಲದಲ್ಲಿ ನೀರು ಸಂಗ್ರಹವಾಗಬಾರದು. ಇಲ್ಲದಿದ್ದರೆ ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರವಾಹಕ್ಕೆ ಒಳಪಡದ ಭೂಮಿಯನ್ನ ಆರಿಸಿ.

ಕೇಸರಿಯಿಂದ ಗಳಿಸುವುದು ಹೇಗೆ.?
ಕೇಸರಿಯನ್ನ ಚೆನ್ನಾಗಿ ಪ್ಯಾಕ್ ಮಾಡಬಹುದು ಮತ್ತು ಹತ್ತಿರದ ಯಾವುದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಇದಲ್ಲದೆ ನೀವು ಆನ್‌ಲೈನ್‌’ನಲ್ಲಿಯೂ ಮಾರಾಟ ಮಾಡಬಹುದು. ಈ ಕೃಷಿ ವ್ಯವಹಾರದಲ್ಲಿ ತಿಂಗಳಿಗೆ ಎರಡು ಕಿಲೋ ಕೇಸರಿ ಮಾರಾಟ ಮಾಡಿದರೆ 6 ಲಕ್ಷ ರೂಪಾಯಿ. ಅದೇ ವೇಳೆ ಒಂದು ಕೆಜಿ ಮಾರಾಟ ಮಾಡಿದರೆ 3 ಲಕ್ಷ ರೂಪಾಯಿ.

ಕಾಯಿಲೆಗಳಿಗೆ ಒಳ್ಳೆಯದು.!
ಕೇಸರಿಯನ್ನು ಖೀರ್, ಗುಲಾಬ್ ಜಾಮೂನ್ ಮತ್ತು ಹಾಲಿನೊಂದಿಗೆ ಬಳಸಲಾಗುತ್ತದೆ. ಇದನ್ನು ಸಿಹಿತಿಂಡಿಗಳಲ್ಲಿ ಬಳಸುವುದರಿಂದ ರುಚಿ ಹೆಚ್ಚಾಗುತ್ತದೆ. ಇದಲ್ಲದೆ, ಇದನ್ನು ಔಷಧದಲ್ಲಿಯೂ ಬಳಸಲಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಯಲ್ಲಿ ಕೇಸರಿ ತುಂಬಾ ಪ್ರಯೋಜನಕಾರಿಯಾಗಿದೆ.

 

ಐಫೋನ್ ಮಾರಾಟ ಕುಸಿತ : ಆಪಲ್ ಹಿಂದಿಕ್ಕಿ ನಂಬರ್ ಒನ್ ‘ಸ್ಮಾರ್ಟ್ ಫೋನ್ ಬ್ರಾಂಡ್’ ಆಗಿ ಹೊರಹೊಮ್ಮಿದ ‘ಸ್ಯಾಮ್ ಸಂಗ್’

BREAKING: ಕಾಂಗ್ರೆಸ್ ಅಭ್ಯರ್ಥಿ ‘ಸೌಮ್ಯಾರೆಡ್ಡಿ’ ವಿರುದ್ಧ ‘FIR’ ದಾಖಲು

BREAKING : ಸಿಡ್ನಿ : ಚರ್ಚ್’ನಲ್ಲಿ ಚೂರಿ ಇರಿತ ; ಹಲವರಿಗೆ ಗಾಯ, 3 ದಿನದಲ್ಲಿ 2ನೇ ಘಟನೆ

'ಕೆಂಪು ಚಿನ್ನ'ದ ಕೃಷಿ : ನೀವೂ ಒಂದೇ ಒಂದು ಕಿಲೋ ಬೆಳೆದ್ರೂ Cultivation of red gold: Even if you grow a single kilo you can earn lakhs of rupees ಲಕ್ಷಾಂತರ ರೂಪಾಯಿ ಗಳಿಸ್ಬೋದು
Share. Facebook Twitter LinkedIn WhatsApp Email

Related Posts

BREAKING : ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಎನ್ಕೌಂಟರ್: 10 ಉಗ್ರರ ಹತ್ಯೆ

15/05/2025 7:05 AM1 Min Read

ಪಾದಚಾರಿಗಳ ಸುರಕ್ಷತೆಗೆ ಮಾರ್ಗಸೂಚಿ ರೂಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

15/05/2025 6:52 AM1 Min Read

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ FIR ದಾಖಲು | Col Sofia Qureshi

15/05/2025 6:47 AM1 Min Read
Recent News

BREAKING : ಮಣಿಪುರದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಎನ್ಕೌಂಟರ್: 10 ಉಗ್ರರ ಹತ್ಯೆ

15/05/2025 7:05 AM

ಪಾದಚಾರಿಗಳ ಸುರಕ್ಷತೆಗೆ ಮಾರ್ಗಸೂಚಿ ರೂಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

15/05/2025 6:52 AM

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ FIR ದಾಖಲು | Col Sofia Qureshi

15/05/2025 6:47 AM

ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ಬದ್ಧ: ಪ್ರಧಾನಿ ಮೋದಿ

15/05/2025 6:41 AM
State News
KARNATAKA

BREAKING: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್

By kannadanewsnow0914/05/2025 10:02 PM KARNATAKA 1 Min Read

ಮಂಗಳೂರು: ರೌಡಿ ಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ ಬಜ್ಪೆ ಠಾಣೆಯ ಪೊಲೀಸರು ಮೂವರು…

BIG NEWS : ತುಮಕೂರಲ್ಲಿ ಹಿಟ್ & ರನ್ ಗೆ ಬೈಕ್ ಸವಾರ ಬಲಿ

14/05/2025 9:14 PM

ಭಾರತ-ಪಾಕ್ ಮಧ್ಯ ಕದನ ವಿರಾಮ ಬೆನ್ನಲ್ಲೆ, ಸರಕು ಸಾಗಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಬಂದ ಪಾಕಿಸ್ತಾನ್ ಪ್ರಜೆ!

14/05/2025 8:52 PM

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವಕರು ಸಾವು!

14/05/2025 8:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.