ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) “CUET-PG 2024 (ಸಾಮಾನ್ಯ ವಿಶ್ವವಿದ್ಯಾಲಯ ಅರ್ಹತಾ ಪರೀಕ್ಷೆ (PG) ಫಲಿತಾಂಶಗಳನ್ನ ಇಂದು ರಾತ್ರಿಯೊಳಗೆ ಪ್ರಕಟಿಸಲು ಕೆಲಸ ಮಾಡುತ್ತಿದೆ” ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಅವರು ಏಪ್ರಿಲ್ 12 ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಇಂದು ರಾತ್ರಿಯೊಳಗೆ ಸಿಯುಇಟಿ-ಪಿಜಿ ಫಲಿತಾಂಶಗಳನ್ನು ಪ್ರಕಟಿಸಲು ಎನ್ಟಿಎ ಕೆಲಸ ಮಾಡುತ್ತಿದೆ. ಈ ಅಂಕಗಳನ್ನ ಹಲವಾರು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಪಿಜಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಬಳಸಲಾಗುತ್ತದೆ. ಸಿಯುಇಟಿ-ಪಿಜಿಗೆ ಕುಳಿತ ಎಲ್ಲರಿಗೂ ಶುಭವಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.
NTA is working to announce the CUET-PG results by tonight. These scores are used for admission to various PG programmes at several Indian universities. Good luck to all those who sat for CUET-PG. pic.twitter.com/giJYqqMOrJ
— Mamidala Jagadesh Kumar (@mamidala90) April 12, 2024
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ವಿಧಾನಸಭಾ ಚುನಾವಣೆಗೆ ಸಮಯ ದೂರವಿಲ್ಲ ಎಂದ ಪ್ರಧಾನಿ ಮೋದಿ
Lok Sabha Elections 2024: ಯಾವ ಲೋಕಸಭೆಯು ಗರಿಷ್ಠ ಸಂಖ್ಯೆಯ ಮುಸ್ಲಿಂ ಸಂಸದರನ್ನು ಆಯ್ಕೆ ಮಾಡಿದೆ?ಇಲ್ಲಿದೆ ಮಾಹಿತಿ
BREAKING : ಜನ ಸಾಮಾನ್ಯರಿಗೆ ರಿಲೀಫ್ ; ಮಾರ್ಚ್’ನಲ್ಲಿ ಚಿಲ್ಲರೆ ಹಣದುಬ್ಬರ 10 ತಿಂಗಳ ಕನಿಷ್ಠ ಶೇ.4.85ಕ್ಕೆ ಇಳಿಕೆ