ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ರಾತ್ರಿಯೊಳಗೆ ಸಿಯುಇಟಿ-ಪಿಜಿ ಫಲಿತಾಂಶಗಳನ್ನು ಪ್ರಕಟಿಸಲು ಕೆಲಸ ಮಾಡುತ್ತಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಅವರು ಏಪ್ರಿಲ್ 12 ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಇಂದು ರಾತ್ರಿಯೊಳಗೆ ಸಿಯುಇಟಿ-ಪಿಜಿ ಫಲಿತಾಂಶಗಳನ್ನು ಪ್ರಕಟಿಸಲು ಎನ್ಟಿಎ ಕೆಲಸ ಮಾಡುತ್ತಿದೆ. ಈ ಅಂಕಗಳನ್ನು ಹಲವಾರು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಪಿಜಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಬಳಸಲಾಗುತ್ತದೆ ಅಂತ ಹೇಳಿದ್ದಾರೆ.
ಮಾರ್ಚ್ 28 ರಂದು ಮುಕ್ತಾಯಗೊಂಡ ಸಿಯುಇಟಿ-ಪಿಜಿ ಪರೀಕ್ಷೆಯಲ್ಲಿ 4.62 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಸಿಯುಇಟಿ ಪಿಜಿ 2024 ಗೆ 4,62,725 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.
“ಇದು ಪರೀಕ್ಷೆಯಲ್ಲಿ ಇದುವರೆಗಿನ ಅತ್ಯಧಿಕ ಭಾಗವಹಿಸುವಿಕೆಯಾಗಿದೆ” ಎಂದು ಅಧ್ಯಕ್ಷ ಎಂ ಜಗದೀಶ್ ಕುಮಾರ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಸಿಯುಇಟಿ ಪಿಜಿಯನ್ನು ಭಾರತದ ಹೊರಗಿನ ಒಂಬತ್ತು ನಗರಗಳು ಸೇರಿದಂತೆ 250 ಕ್ಕೂ ಹೆಚ್ಚು ನಗರಗಳಲ್ಲಿ 15 ದಿನಗಳ ಕಾಲ ನಡೆಸಲಾಯಿತು.
NTA is working to announce the CUET-PG results by tonight. These scores are used for admission to various PG programmes at several Indian universities. Good luck to all those who sat for CUET-PG. pic.twitter.com/giJYqqMOrJ
— Mamidala Jagadesh Kumar (@mamidala90) April 12, 2024