ನವದೆಹಲಿ : ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 5.09 ರಿಂದ ಮಾರ್ಚ್ನಲ್ಲಿ 10 ತಿಂಗಳ ಕನಿಷ್ಟ ಶೇಕಡಾ 4.85ಕ್ಕೆ ಇಳಿದಿದೆ.
ಇತ್ತೀಚಿನ ಎಂಪಿಸಿ ಪ್ರಕಟಣೆಗಳ ಪ್ರಕಾರ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 2025ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವನ್ನ ಶೇಕಡಾ 4.5ಕ್ಕೆ ಅಂದಾಜಿಸಲಾಗಿದೆ ಎಂದು ಹೇಳಿದರು. ಇತ್ತೀಚಿನ ಅಂಕಿಅಂಶಗಳು ಕೇಂದ್ರ ಬ್ಯಾಂಕಿನ ಶೇಕಡಾ 2-6 ರ ಸಹಿಷ್ಣುತೆಯ ಬ್ಯಾಂಡ್ನಲ್ಲಿವೆ, ಗುರಿಯನ್ನ ಶೇಕಡಾ 4ಕ್ಕೆ ನಿಗದಿಪಡಿಸಲಾಗಿದೆ.
ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಹಕ ಬೆಲೆ ಹಣದುಬ್ಬರವು ಮಾರ್ಚ್ನಲ್ಲಿ ಐದು ತಿಂಗಳ ಕನಿಷ್ಠ ಶೇಕಡಾ 4.91 ಕ್ಕೆ ಇಳಿದಿದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ. ಅದೇನೇ ಇದ್ದರೂ, ಈ ಸಂಖ್ಯೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಧ್ಯಮಾವಧಿಯ ಗುರಿಯಾದ ಶೇಕಡಾ 4ಕ್ಕಿಂತ ಹೆಚ್ಚಾಗಿದೆ.
Lok Sabha Elections 2024: ಯಾವ ಲೋಕಸಭೆಯು ಗರಿಷ್ಠ ಸಂಖ್ಯೆಯ ಮುಸ್ಲಿಂ ಸಂಸದರನ್ನು ಆಯ್ಕೆ ಮಾಡಿದೆ?ಇಲ್ಲಿದೆ ಮಾಹಿತಿ
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ವಿಧಾನಸಭಾ ಚುನಾವಣೆಗೆ ಸಮಯ ದೂರವಿಲ್ಲ ಎಂದ ಪ್ರಧಾನಿ ಮೋದಿ