ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ನಡುವೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗೆ ಅರ್ಜಿ ಹಾಗೂ ಅಗತ್ಯವಿದ್ದಲ್ಲಿ ಮರುಎಣಿಕೆಗಾಗಿ, ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ತಾವು ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ / ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.530.
- ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿ ವಿಷಯಕ್ಕೆ ರೂ.1670.
- ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕ ಇರುವುದಿಲ್ಲ.
- ಅರ್ಜಿ ಸಲ್ಲಿಸಲು ನಿಗದಿತ ದಿನಾಂಕಗಳು ಹೀಗಿದೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : ಏಪ್ರಿಲ್ 10 ರಿಂದ 16, 2024 ರವರೆಗೆ.
- ಸ್ಕ್ಯಾನ್ಡ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಪ್ರಾರಂಭ ಹಾಗೂ ಕೊನೆಯ ದಿನಾಂಕ : ಏಪ್ರಿಲ್ 14 – 19, 2024 ರವರೆಗೆ.
- ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) : ಏಪ್ರಿಲ್ 15-20, 2024 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹಾಗಾದ್ರೇ ಅರ್ಜಿ ಸಲ್ಲಿಸುವುದು ಹೇಗೆ?
– ವೆಬ್ಸೈಟ್ ವಿಳಾಸ https://kseab.karnataka.gov.in/english ಕ್ಕೆ ಭೇಟಿ ನೀಡಿ.
– ತೆರೆದ ಮುಖಪುಟದಲ್ಲಿ ‘ಮತ್ತಷ್ಟು ಸುದ್ದಿಗಳು ಎಂದಿರುವಲ್ಲಿ ಕ್ಲಿಕ್ ಮಾಡಿ.
– ಹೊಸ ಪೇಜ್ ಪ್ರದರ್ಶಿತವಾಗುತ್ತದೆ. ‘Click here to apply online application for Scanned copy, Revaluation, Retotalling of II PUC Exam-1 March 2024’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಉತ್ತರ ಪತ್ರಿಕೆ, ಮರುಮೌಲ್ಯಮಾಪನ, ಮರುಎಣಿಕೆ ಯಾವುದೇ ಸೌಲಭ್ಯ ಬಯಸುವವರು ನಿಮ್ಮ ಪರೀಕ್ಷೆ-1 ರಿಜಿಸ್ಟರ್ ನಂಬರ್ ನಮೂದಿಸಬೇಕು.
– ನಿಮ್ಮ ಡೀಟೇಲ್ಸ್ ಪ್ರದರ್ಶಿತವಾಗುತ್ತದೆ.
– ನಿಮಗೆ ಉತ್ತರ ಪತ್ರಿಕೆ ಬೇಕಾದಲ್ಲಿ ಒಮ್ಮೆಯೇ ವಿಷಯಗಳನ್ನು ಆಯ್ಕೆ ಮಾಡಿ, ಪೋಷಕರ ಮೊಬೈಲ್ ನಂಬರ್, ಇ-ಮೇಲ್ ವಿಳಾಸ ನೀಡಿ ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಶುಲ್ಕದ ಚಲನ್ ಸಂಖ್ಯೆಯು ಆಟೋ ಜೆನೆರೇಟ್ ಆಗುತ್ತದೆ.
– ‘Make Payment’ ಬಟನ್ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ.
ಮಂಡಲಿಯ ವೆಬ್ಸೈಟ್ನಲ್ಲಿ ಏಪ್ರಿಲ್ 14 ರಿಂದ 19 ರವರೆಗೆ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಬಹದಾಗಿದೆ.