ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಮೂರು ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಥಮ ಹಂತದ ಪರೀಕ್ಷೆಗಳು
ಜೂನ್ 7ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್ ಲೋಯರ್ (01) ಮತ್ತು ಮಧ್ಯಾಹ್ನ 2ರಿಂದ 4ರ ತನಕ ಜನರಲ್ ಲಾ ವಿಭಾಗ-II (08) ಪರೀಕ್ಷೆ ನಡೆಯಲಿದೆ.
ಜೂನ್ 8ರಂದು ಬೆಳಗ್ಗೆ 10ರಿಂದ 12ರ ತನಕ ಅಕೌಂಟ್ಸ್ ಹೈಯರ್-ಪತ್ರಿಕೆ -1 (22/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆ ತನಕ ಹೈಯರ್-ಪತ್ರಿಕೆ -2 (22/2) ಪರೀಕ್ಷೆ ಆಯೋಜಿಸಲಾಗಿದೆ.
ಜೂನ್ 9ರಂದು ಬೆಳಗ್ಗೆ 10ರಿಂದ 12ರ ತನಕ ಜನರಲ್ ಲಾ ಭಾಗ-I ಪತ್ರಿಕೆ-1 (36/1) ಮತ್ತು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಜನರಲ್ ಲಾ ಭಾಗ-I ಪತ್ರಿಕೆ-2 (36/2) ಪರೀಕ್ಷೆ ನಡೆಯಲಿದೆ.
ದ್ವಿತೀಯ ಹಂತದ ಪರೀಕ್ಷೆಗಳು
ಇನ್ನು ದ್ವಿತೀಯ ಹಂತದ ಪರೀಕ್ಷೆಗಳು ವಿಭಾಗೀಯ ಕೇಂದ್ರಗಳಲ್ಲಿ ಜೂನ್ 11ರಿಂದ 23ರ ತನಕ ಆಯೋಜಿಸಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.
ತೃತೀಯ ಹಂತದ ಪರೀಕ್ಷೆ
ಮೂರನೇ ಹಂತದ ಪರೀಕ್ಷೆ ಜೂನ್ 24ರಿಂದ 29ರ ತನಕ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ.