ಮಂಗಳೂರು : ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಇಂದು ರಂಜಾನ್ ಆಚರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.
ಕೇರಳದಲ್ಲಿ ನಿನ್ನೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯಲ್ಲಿ ಇಂದು ರಂಜಾನ್ ಆಚರಿಸಲಾಗುತ್ತದೆ. ಇನ್ನು ಕರಾವಳಿ ಬಿಟ್ಟು ರಾಜ್ಯಾದ್ಯಂತ ಏಪ್ರಿಲ್ 11ರ ನಾಳೆ ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತದೆ.
ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಇಂದು ರಂಜಾನ್ ಹಬ್ಬ ಎಂದು ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ 29 ದಿನಗಳ ಉಪವಾಸ ವೃತ ಆಚರಿಸಿದ್ದ ಮುಸ್ಲಿಮರು, ಇಂದು ಈದುಲ್ ಫಿತರ್ ಹಬ್ಬದೊಂದಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಉಪವಾಸ ಅಂತ್ಯಗೊಳಿಸಲಿದ್ದಾರೆ.