ಬೆಂಗಳೂರು : ಯುಗಾದಿ ಹಬ್ಬದ ದಿನವೇ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಇಂದು ಹೂ, ಹಣ್ಣುಗಳ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ.
ಹಬ್ಬಕ್ಕೆ ಹೂ, ಹಣ್ಣಿನ ಬೆಲೆ ಕೇಳಿ ಗ್ರಾಹಕರು ಕಂಗಾಲಾಗಿದ್ದು, ಕೆಜಿ ಸೇಬು ಹಣ್ಣಿನ ದರ 220 ರೂ. ತಲುಪಿದ್ರೆ, ಮಲ್ಲಿಗೆ ಹೂವಿನ ಬೆಲೆ 500 ರೂ.ನಿಂದ 600 ರೂ. ಗೆ ಏರಿಕೆಯಾಗಿದೆ. 300 ರೂ.ನಿಂದ 350 ರೂ.ಗೆ ಸೇವಂತಿಗೆ ಹೂ ಏರಿಕೆಯಾಗಿದೆ. ಕನಕಾಂಬರ ಬೆಲೆಯಲ್ಲೂ ಏರಿಕೆಯಾಗಿದ್ದು, 800 ರೂ.ನಿಂದ 1,000 ರೂ.ಗೆ ಏರಿಕೆಯಾಗಿದೆ. ಚೆಂಡು ಹೂವಿನ ಬೆಲೆ ಕೆಜಿಗೆ 100 ರೂ.ಗೆ ಹೆಚ್ಚಳವಾಗಿದೆ. ಸುಗಂಧರಾಜ ಹೂವಿನ ಬೆಲೆ 150 ರೂ ಗಡಿ ದಾಟಿದೆ.
ಕೆಜಿಗೆ 70 ರೂ ಇದ್ದ ಕಿತ್ತಲೆ ಹಣ್ಣಿನ ಬೆಲೆ 120 ರೂ, ಪಪ್ಪಾಯ 50 ರೂ, ಮಾವಿನ ಹಣ್ಣು ಕೆಜಿಗೆ 150 ರೂ, ದ್ರಾಕ್ಷಿ 120 ರೂ, ಗೆ ಏರಿಕೆಯಾಗಿದೆ. ಸಪೋಟ 100 ರೂ, ಕಿವಿ ಹಣ್ಣು 3ಕ್ಕೆ 100 ರೂ, ದಾಳಿಂಬೆ ಕೆಜಿಗೆ 200 ರೂಗೆ ಮಾರಾಟವಾಗುತ್ತಿದೆ.