ಬೆಂಗಳೂರು: ನಗರದಲ್ಲಿ ನಕಲಿ ನೋಟು ನೀಡಿ ವಿನೂತನ ರೀತಿಯಲ್ಲಿ ವಂಚಿಸುತ್ತಿದ್ದಂತ ಐವರು ವಂಚಕರನ್ನು ಪೊಲೀಸರು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ನಗರದಲ್ಲಿ ವಿನೂತನ ರೀತಿಯಲ್ಲಿ ನಕಲಿ ನೋಟು ನೀಡಿ ಜನರನ್ನು ವಂಚಿಸುತ್ತಿದ್ದಂತ ಐವರನ್ನು ಬಂಧಿಸಿರುವುದಾಗಿ ತಿಳಿಸಿದರು.
ಮಹಿಳಾ ಸಂರಕ್ಷಣಾಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 30 ಕೋಟಿ 9 ಲಕ್ಷದ 60 ಸಾವಿರ ಮೌಲ್ಯದ ನಕಲಿ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದರು.
ವಂಚಕರು ಟ್ರಸ್ಟ್ ಗಳನ್ನು ಸಂಪರ್ಕಿಸುತ್ತಿದ್ದರು. ಕಮೀಷನ್ ಆಸೆ ತೋರಿಸುತ್ತಿದ್ದರು. ಕಂಪನಿ ಪ್ರತಿನಿಧಿಗಳು ಎಂಬುದಾಗಿ ಹೇಳಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದರು. ಅಸಲಿ ನೋಟು ಪಡೆದು, ನಕಲಿ ನೋಟು ನೀಡಿ ವಂಚಿಸುತ್ತಿದ್ದರು ಎಂದು ಹೇಳಿದರು.
ಸಿಎಸ್ಆರ್ ಮೂಲಕ ಹಣ ನೀಡುವುದಾಗಿ ಹೇಳುತ್ತಿದ್ದರು. ಇವರನ್ನು ನಂಬಿದಂತ ಕೆಲವರಿಗೆ ನಕಲಿ ನೋಟು ನೀಡಿ ವಂಚಿಸಿದ್ದಾರೆ. ಜನರು ಹೀಗೆ ಹೊಸ ರೀತಿಯಲ್ಲಿ ವಂಚಿಸುತ್ತಿರೋ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
BREAKING NEWS : 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ : ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ !