ಧಾರವಾಡ : ಈ ಬಾರಿಯ ಲೋಕಸಭಾ ಚುನಾವಣೆ 2024 ನಿಧಾನವಾಗಿ ರಂಗೇರುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಲೇಶ್ವರ ಶ್ರೀ ಕಣಕ್ಕೆ ಇಳಿಯವುದಾಗಿ ಘೋಷಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಹ್ಲಾದ್ ಜೋಶಿಯವರು ಮತ್ತೆ ಕಣಕ್ಕಿಳಿದಿದ್ದು, ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಲೇಶ್ವರ ಶ್ರೀ ಸ್ಪರ್ಧಿಸಲಿದ್ದಾರೆ.
ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಕ್ಕಾಗಿ ಹೋರಾಟ ಸೇರಿದಂತೆ ಅನೇಕ ಬೆಳವಣಿಗೆಗಳು, ಜೀವ ಬೆದರಿಕೆ, ಭಾವೈಕ್ಯತೆ ಸೇರಿದಂತೆ ಮಠದ ವಿಷಯವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಅವರು ಗಮನ ಸೆಳೆದವರು. ಈಗ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ.