ಜಲ್ಪೈಗುರಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳಿಗೆ ಬ್ರೇಕ್ ಹಾಕಿದೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ಫಲಾನುಭವಿಗಳ ಹಣ ಮೊದಲು ತಮ್ಮ ನಾಯಕರ ಖಾತೆಗಳಿಗೆ ಬರಬೇಕೆಂದು ತೃಣಮೂಲ ಕಾಂಗ್ರೆಸ್ ಬಯಸುತ್ತದೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿನ ಅಭಿವೃದ್ಧಿ ಕೇವಲ ‘ಟ್ರೈಲರ್’ ಎಂದು ಹೇಳಿದ ಅವರು, ಭಾರತವನ್ನು “ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ” ಮಾಡುವ ಬಿಜೆಪಿಯ ಧ್ಯೇಯವನ್ನು ಸಾಧಿಸಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಜನರನ್ನು ಒತ್ತಾಯಿಸಿದರು.