ನವದೆಹಲಿ: ದೇಶಾದ್ಯಂತ ಇಂದು ಬಿಸಿಲ ತಾಪಮಾನ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 44.5 ಸೆಲ್ಸಿಯಸ್ ದಾಖಲಾಗುವ ಮೂಲಕ, ಹೊಸ ದಾಖಲೆಯನ್ನು ಬರೆದಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಇಂದು ಅತಿ ಹೆಚ್ಚು ಎನ್ನುವಂತೆ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪಮಾನ ದಾಖಲಾಗಿದೆ.
ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ರಾಯಲ ಸೀಮೆಯ ಕರ್ನೂಲ್ ನಲ್ಲಿ ನಿನ್ನೆ 44.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಇಂದು 43.3ಕ್ಕೆ ಇಳಿದಿತ್ತು. ನಂದ್ಯಾಲದಲ್ಲಿ 43.5 ದಾಖಲಾಗಿದ್ದರೇ, ದೇಶದಲ್ಲೇ ಅತಿಹೆಚ್ಚು ಎನ್ನುವಂತೆ ಅನಂತಪುರದಲ್ಲಿ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಆಂಧ್ರಪ್ರದೇಶದ ರೆಂಟಚಿಂತಲ್ ನಲ್ಲಿ 43.4 ತಾಪಮಾನ ದಾಖಲಾಗಿದ್ದರೇ, ಕರ್ನಾಟಕ ಗುಲ್ಬರ್ಗಾದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತೆಲಂಗಾಣದ ನಲಗೊಂಡದಲ್ಲಿ 42, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇಂದು ದಾಖಲಾಗಿದೆ.
Today maximum temperatures are in the range of 42-44°C over many parts of Rayalaseema; in isolated pockets over south coastal Andhra Pradesh & North Interior Karnataka @ndmaindia @DDNewslive @airnewsalerts pic.twitter.com/cOISOoE01z
— India Meteorological Department (@Indiametdept) April 7, 2024
Shocking Video: ದೆಹಲಿಯ ಮೆಟ್ರೋ ನಿಲ್ದಾಣದಲ್ಲೇ ‘ರೈಫಲ್’ನಿಂದ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ