ಕೋಲಾರ: ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ಹೇಳುವ ಮೂಲಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರವಾಗಿ ನಡೆಸಿದರು. ಈ ವೇಳೆ ಮಾತನಾಡಿದಂತ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರೀಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂಬುದಾಗಿ ಘೋಷಿಸಿದರು.
ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯೇ ಕಲುಷಿತಗೊಂಡು, ಮೌಲ್ಯಗಳಿಗೆ ಉರುಳಿಲ್ಲದಂತೆ ಆಗಿದೆ. ನಾನು ಇಷ್ಟು ದಿನ ರಾಜಕೀಯ ಜೀವನದಲ್ಲಿ ನಾನು ನ್ಯಾಯಯುತವಾಗಿ ಬದುಕಿದ್ದೇನೆ. ನಾನು ಯಾವತ್ತೂ ಹಣಪಡೆದು ರಾಜಕೀಯ ಮಾಡಿಲ್ಲ. ಆದ್ರೇ ಪಕ್ಷದಲ್ಲಿ ಕೆಲವರು ಹಣಕ್ಕಾಗಿ ತಮ್ಮ ತಲೆ ಮಾರಿಕೊಂಡು ನನಗೆ ಮೋಸ ಮಾಡಿ ಬಿಟ್ರು ಅಂತ ಅಳಲು ತೋಡಿಕೊಂಡರು.
ನಾನು ಕಾಂಗ್ರೆಸ್ ಪಕ್ಷವನ್ನು ತಾಯಿಯಂತೆ ಭಾವಿಸಿದ್ದೇನೆ. ಇಂತಹ ತಾಯಿಯಂತ ಪಕ್ಷಕ್ಕೆ ದ್ರೋಹವನ್ನು ಕೆಲವರು ಮಾಡಿದ್ರು. ಅಧಿಕಾರದ ಆಸೆಗಾಗಿ ಅನೈತಿಕ ರಾಜಕಾರಣ ಕೂಡ ಮಾಡುತ್ತಿದ್ದಾರೆ. ಅವರು ಸರ್ವನಾಶ ಆಗೋದು ಗ್ಯಾರಂಟಿ ಎಂಬುದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದವರಿಗೆ ಹಿಡಿಶಾಪ ಹಾಕಿದರು.
ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಉತ್ತರಾಧಿಕಾರಿಯಾಗಿ ನನ್ನ ಮಗ ಹರ್ಷ ಕೂಡ ಮತ ಕೇಳೋದಕ್ಕೆ ಬರೋದಿಲ್ಲ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯವನ್ನು ನೋಡಿ ಜನರು ಮತ ಹಾಕಲಿ ಎಂದರು.
ಐಪಿಎಲ್ 2024: ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ 2ನೇ ಹಂತದ ವೇಳಾಪಟ್ಟಿ ಪ್ರಕಟ | TATA IPL Fan Park
Shocking Video: ದೆಹಲಿಯ ಮೆಟ್ರೋ ನಿಲ್ದಾಣದಲ್ಲೇ ‘ರೈಫಲ್’ನಿಂದ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ