ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆ ಶನಿವಾರ ಸುಸೂತ್ರವಾಗಿ ಮುಕ್ತಾಯಗೊಂಡಿದ್ದು, ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ದಿನಪತ್ರಿಕೆಯ ಪರೀಕ್ಷೆಗೆ ಶೇ. 98.2 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಏಪ್ರಿಲ್15 ರಿಂದ ಮೌಲ್ಯ ಮಾಪನ ಕಾರ್ಯ ಆರಂಭವಾಗಲಿದೆ ಎಂದು ಕರ್ನಾಟಕ ಶಾಲಾ ಮತ್ತು ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಈ ನಡುವೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ವಿಷಯವಾರು ಕೀ ಉತ್ತರಗಳನ್ನು ದಿನಾಂಕ: 06.04.2024ರಂದು ಮಂಡಲಿಯ ಜಾಲತಾಣದಲ್ಲಿ http://kseab.karnataka.gov.inನಲ್ಲಿ ಪ್ರಕಟಿಸಿದೆ.