ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ವಿಷಯವಾರು ಕೀ ಉತ್ತರಗಳನ್ನು ದಿನಾಂಕ: 06.04.2024ರಂದು ಮಂಡಲಿಯ ಜಾಲತಾಣದಲ್ಲಿ http://kseab.karnataka.gov.inನಲ್ಲಿ ಪ್ರಕಟಿಸಿದೆ.
ವಿದ್ಯಾರ್ಥಿಗಳು/ ಪೋಷಕರು/ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆಗಳನ್ನು ದಿನಾಂಕ: 08.04.2024ರ ಸಾಯಂಕಾಲ 5.00 ಗಂಟೆಯೊಳಗೆ ಮಂಡಲಿಯ ಜಾಲತಾಣದ ಮೂಲಕ ಸಲ್ಲಿಸಲು ತಿಳಿಸಿದೆ. ಮಂಡಲಿಯ ಜಾಲತಾಣ http://kseab.karnataka.gov.in ಲಿಂಕನ್ನು ಬಳಸಿ ಮಾರ್ಚ್/ಏಪ್ರಿಲ್-2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಕೀ ಉತ್ತರಗಳನ್ನು ಅವಲೋಕಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಲಾಗಿದೆ.
ಸದರಿ ಮಾಹಿತಿಯನ್ನು ತಮ್ಮ ಜಿಲ್ಲೆಯಲ್ಲಿ ಪ್ರಚುರಪಡಿಸಿ ವಿದ್ಯಾರ್ಥಿಗಳು/ಶಿಕ್ಷಕರಿಗೆ ಮಾಹಿತಿಯು ತಿಳಿಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಮಂಡಲಿಯು ಪರಿಗಣಿಸುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.
KEY ANSWER – 85E_A KEY ANSWER – 31E_A KEY ANSWER – 01K_A (1)