ಜೈಪುರ : ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೊದಲ ಶತಕವನ್ನ ಬಾರಿಸಿದ್ದಾರೆ. ಕೊಹ್ಲಿ ಪಂದ್ಯಾವಳಿಯಲ್ಲಿ ತಮ್ಮ ಮಿಡಾಸ್ ಸ್ಪರ್ಶವನ್ನ ಮುಂದುವರಿಸಿದರು ಮತ್ತು ತಮ್ಮ 8 ನೇ ಐಪಿಎಲ್ ಶತಕವನ್ನ ಬಾರಿಸಿದರು.
ಇನ್ನು ಇದೇ ಪಂದ್ಯದಲ್ಲಿ ಕೊಹ್ಲಿ IPLನಲ್ಲಿ ವಿರಾಟ್ ಕೊಹ್ಲಿ 7,500 ರನ್ ಗಡಿ ದಾಟುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಪ್ರತಿನಿಧಿಸುವ ಸಂದರ್ಭದಲ್ಲಿ ಕೊಹ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ಈ ಸಾಧನೆಯು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಕೊಹ್ಲಿಯ ಸ್ಥಾನವನ್ನ ಗಟ್ಟಿಗೊಳಿಸಿದೆ ಮತ್ತು ಐಪಿಎಲ್ನಲ್ಲಿ 7,500 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಸ್ ಗೆದ್ದ ರಾಜಸ್ತಾನ, ಆರ್ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಕೇಳಿಕೊಂಡಿತು. ಕೊಹ್ಲಿ ಮತ್ತು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ನಿಂದ ಅದ್ಭುತವಾಗಿ ಮುನ್ನಡೆಸಿದರು. ಇವರಿಬ್ಬರು ಆರಂಭಿಕ ವಿಕೆಟ್ ಗೆ 125 ರನ್’ಗಳ ಜೊತೆಯಾಟವನ್ನ ನೀಡಿದರು.
ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು ನಂತರ ಮುಂದಿನ ಐವತ್ತು ರನ್ ಗಳಿಸಿದರು. ಆರ್ಸಿಬಿ ದಿಗ್ಗಜ ಆಟಗಾರ 67 ಎಸೆತಗಳಲ್ಲಿ ಮೂರು ಅಂಕಿಯ ಗಡಿ ದಾಟಿದರು.
BREAKING : ಕಾನೂನು ಬಾಹಿರವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ : 11 ದಿನದ ಬಳಿಕ ಸೋನುಗೌಡ ಬಿಡುಗಡೆ
IPL 2024 : ‘IPL’ನಲ್ಲಿ 7,500 ರನ್ ಪೂರೈಸಿ ಇತಿಹಾಸ ನಿರ್ಮಿಸಿದ ‘ವಿರಾಟ್ ಕೊಹ್ಲಿ’
Watch Video : ಆಕ್ಷೇಪಾರ್ಹ ರೀತಿಯಲ್ಲಿ ‘ಹಿಂದೂ ದೇವತೆ’ಗಳ ಚಿತ್ರಣ ; ‘ಬಾಂಬೆ IIT’ ವಿರುದ್ಧ ಆಕ್ರೋಶ