ನವದೆಹಲಿ: ಉತ್ತರ ಪ್ರದೇಶದ 13 ವರ್ಷದ ಬಾಲಕಿಯೊಬ್ಬಳು ಸಮಯೋಚಿತವಾಗಿ ಚಿಂತನೆ ಮಾಡಿ ಕೋತಿ ದಾಳಿಯನ್ನು ವಿಫಲಗೊಳಿಸಿದ್ದಾಳೆ. ಅಲೆಕ್ಸಾ (Alexa) ಎಂಬ ತಂತ್ರಜ್ಞಾನದಿಂದ ಬಾಲಕಿಯೊಬ್ಬಳು ತನ್ನ ಜೊತೆಗೆ ಒಂದು ವರ್ಷದ ಪುಟ್ಟ ಮಗುವಿನ ಪ್ರಾಣವನ್ನು ಕೂಡ ಉಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಿಕಿತಾ ತನ್ನ 15 ತಿಂಗಳ ಸೋದರ ಸೊಸೆಯೊಂದಿಗೆ ಮಲಗುವ ಕೋಣೆಯೊಂದರಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನಿಕಿತಾ ತನ್ನ 15 ತಿಂಗಳ ಸೋದರ ಸೊಸೆಯೊಂದಿಗೆ ಮಲಗುವ ಕೋಣೆಯಲ್ಲಿ ಆಟವಾಡುತ್ತಿದ್ದಾಗ ಕೋತಿಗಳು ತಮ್ಮ ಮನೆಗೆ ಪ್ರವೇಶಿಸಿವೆ ಅವರ ತಾಯಿ ಪಂಕಜ್ ಓಜಾ ಅವರು ಅತಿಥಿಯನ್ನು ಮನೆಯಿಂದ ಹೊರಗೆ ಕಳುಹಿಸಲು ಬಸ್‌ಸ್ಟಾಂಡ್‌ಗೆ ಹೋಗಿದ್ದಾರೆ. ಆದರೆ ಈ ವೇಳೆಯಲ್ಲಿ ಮನೆಯ ಬಾಗಿಲನ್ನು ಸರಿಯಾಗಿ ಹಾಕಿಕೊಂಡುಹೋಗದೇ ಇದ್ದ ಕಾರಣ ಮನೆಗೆ ಕೋತಿಗಳು ಮನೆ ಒಳಗೆ ಬಂದಿವೆ ಎನ್ನಲಾಗಿದೆ.
ಮಂಗವೊಂದು ಹಲವಾರು ಬಾರಿ ನಿಖಿತಾ ಹಾಗೂ ವಮಿಕಾ ಬಳಿಗೆ ಬಂದು ಹೋಗುತ್ತಿತ್ತು. ಇದರಿಂದ ನಿಖಿತಾ ಭಯಗೊಂಡಳು. ಈ ವೇಳೆ ಮಂಗಗಳಿಂದ ಪಾರಾಗಲು ಕೊನೆಗೆ ನಿಖಿತಾ ಫ್ರಿಡ್ಜ್ ಮೇಲೆ ಇಟ್ಟಿದ್ದ ಅಲೆಕ್ಸಾದ ಮೊರೆ ಹೋಗಿದ್ದಾಳೆ. ಅದರಲ್ಲಿ ನಾಯಿ ಬೊಗಳುವ ಶಬ್ದವನ್ನು ಪ್ಲೇ ಮಾಡಿದ್ದಾಳೆ. ಅಲೆಕ್ಸಾ ರಿಯಾಕ್ಟ್ ಮಾಡಿ ನಾಯಿಯಂತೆ ಬೊಗಳಿಗೆ ಕೋತಿಗಳು ಪರಾರಿಯಾಗಿದ್ದಾವೆ ಈ ವೇಳೆ ಹೀಗಾಗಿ ಇವರಿಬ್ಬರು ಮಂಗಗಳ ದಾಳಿಯಿಂದ ಪರಾರಿಯಾಗಿದ್ದಾರೆ.
#WATCH | Uttar Pradesh: A girl named Nikita in Basti district saved her younger sister and herself by using the voice of the Alexa device when monkeys entered their home.
Nikita says, "A few guests visited our home and they left the gate open. Monkeys entered the kitchen and… pic.twitter.com/hldLA0wvZS
— ANI UP/Uttarakhand (@ANINewsUP) April 6, 2024