ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಘೋಷಿಸಿರುವ 31 ಕಂದಾಯ ಜಿಲ್ಲೆಗಳ 223 ಬರ ಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಸರ್ಕಾರಿ ಮತ್ತು ಅನುದಾನಿತ 1-10ನೇ ತರಗತಿಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲಿ ಅನುಷ್ಠಾನಗೊಳಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
24.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, 2023-24 ನೇ ಸಾಲಿನ ಉಲ್ಲೇಖ-1ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಡವಳಿಯಂತೆ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ 31 ಕಂದಾಯ ಜಿಲ್ಲೆಗಳಲ್ಲಿ ಒಟ್ಟು 236 ರ ಪೈಕಿ 223 ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿ ಸರ್ಕಾರವು ಆದೇಶಿಸಿದೆ.
ಘನ ಸರ್ವೋಚ್ಚ ನ್ಯಾಯಾಲಯುದ ಆದೇಶಾನುಸಾರ ಬರಗಾಲ ಪೀಡಿತ ಪ್ರದೇಶದಲ್ಲಿಬೇಸಿಗೆ ರಜೆಯಲ್ಲಿಯೂ ಸಹ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಬೇಕಾಗಿರುತ್ತದೆ. ಪುಸ್ತುತ 2024-25ನೇ ಸಾಲಿನಬೇಸಿಗೆ ರಜೆಯ ಅವಧಿಯು ದಿನಾಂಕ 11.04.2024 ರಿಂದ ದಿನಾಂಕ 28.05.2024 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಕೈಗೊಳ್ಳಬೇಕಾಗಿದೆ. ಈ ಸಂಬಂಧ ದಿನಾಂಕ 10.01.2024 ರಂದು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ 2024-25ರಲ್ಲಿ ನಡೆದ ಎಸ್ ಎಸ್ ಎಂ ಸಿ ಸಭೆಯಲ್ಲಿ ಪಿ.ಎಂ, ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯನ್ನು 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನುಷ್ಠಾನಕ್ಕಾಗಿ ಸಿದ್ಧಪಡಿಸಿದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ ಬಗ್ಗೆ ಸಭೆಯ ಸಹಮತ ನಿರ್ಣಯದಂತೆ ಮತ್ತು ದಿನಾಂಕ: 27.03.2024 ರಂದು ಶಿಕ್ಷಣ ಮಂತ್ರಾಲಯ ನವದೆಹಲಿ ಇಲ್ಲಿ ನಡೆದ ಪಿ.ಎ.ಬಿ ಸಭೆಯಲ್ಲಿ ಅನುಮೋದನೆ ಆಗಿರುವಂತೆ ಈ ಕೆಳಕಂಡ ಕ್ರಮಗಳನ್ನು ಮತ್ತು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಮೂಲಕ ಸೂಚಿಸಿದೆ.
1. ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ವಿತರಣೆಗೆ ಅಡುಗೆ ಕೇಂದ್ರಗಳನ್ನು ಗುರುತಿಸುವ ಬಗ್ಗೆ 1.1 ಪುಸ್ತುತ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು, ಬೇಸಿಗೆ ರಜಾ ಅವಧಿಯಲ್ಲಿ ಈ ಕಾರ್ಯಕ್ರಮವನ್ನು 41 ದಿನಗಳ ಅವಧಿಗೆ ಏಪ್ರಿಲ್- ಮೇ 2024ರ ಮಾಹೆಗಳಲ್ಲಿ ಅನುಷ್ಠಾನಗೊಳಿಸುವುದು. ಯಾವುದೇ ಒಂದು ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಅಂತಹ ಶಾಲೆಗಳ ಪೈಕಿ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುತಿಸುವುದು.
1.2 ಕೇಂದ್ರ ಶಾಲೆಯನ್ನು ಗುರುತಿಸುವಾಗ ಮಕ್ಕಳ ಹಿತದೃಷ್ಟಿಯನ್ನು ಮಾತ್ರ ಪರಿಗಣಿಸಿ ಕ್ರಮ ವಹಿಸುವುದು, ಜೊತೆಗೆ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮಕ್ಕೆ ಶಾಲೆಗಳ ಪಟ್ಟಿಯನ್ನು ಡೈಸ್ ಮಾಹಿತಿ ಆಧಾರದ ಮೇಲೆ ಗುರುತಿಸಿ ಅಂತಿಮಗೊಳಿಸಿಕೊಳ್ಳತಕ್ಕದ್ದು, ಈ ಸಂಬಂಧ ಆಯಾ ಶಾಲಾ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳು ಮ್ಯಾಪಿಂಗ್ ಕಾರ್ಯವನ್ನು ಸಿ ಆರ್ ಪಿ / ಇ ಸಿ ಒ ಇವರ ಸಹಕಾರದೊಂದಿಗೆ ದಿನಾಂಕ : 06.04.2024ರ ಒಳಗಾಗಿ ಪೂರ್ಣಗೊಳಿಸತಕ್ಕದ್ದು.
1.3 ನಂತರದಲ್ಲಿ ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ಜಿಲ್ಲಾವಾರು ಶಾಲೆಗಳ
ಪಟ್ಟಿಯನ್ನು ವೆಬ್‌ಸೈಟ್ ನಲ್ಲಿ ದೊರೆಯುವಂತೆ ಕ್ರಮವಹಿಸಬೇಕಾಗಿರುವುದರಿಂದ ದಿನಾಂಕ : 08.04.2024ರ ಒಳಗೆ ನಿರ್ದೇಶಕರು ಪಿ ಎಂ ಪೋಷಣ್, ರವರ ರಾಜ್ಯ ಕಛೇರಿಗೆ ಧೃಢೀಕರಿಸಿದ ಪ್ರತಿಯನ್ನು ಇ-ಮೇಲ್ ಮೂಲಕ ಸಲ್ಲಿಸತಕ್ಕದ್ದು. ಕೇಂದ್ರ ಶಾಲೆಗಳ ಪಟ್ಟಿಯನ್ನು ಉಪನಿರ್ದೇಶಕರ ಅನುಮೋದನೆಯೊಂದಿಗೆ ಆಯಾ ತಾಲ್ಲೂಕಿನ ಕೇಂದ್ರ ಶಾಲೆಗಳಲ್ಲಿ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್/ಪುರಸಭೆಗಳ ಕಛೇರಿಗಳಲ್ಲಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು/ಬಿ ಆರ್ ಸಿ ಕಛೇರಿಗಳಲ್ಲಿ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಯ ಸೂಚನ ಫಲಕದಲ್ಲಿ ಸಾರ್ವಜನಿಕ ಮಾಹಿತಿಗಾಗಿ ದಿನಾಂಕ : 08.04.2024 ರೊಳಗೆ ಪುಕಟಪಡಿಸಿ ಮಕ್ಕಳಿಗೆ, ಪೋಷಕರಿಗೆ ಅರಿವು ಮೂಡಿಸುವುದು.
1.4 ಕೇಂದ್ರ ಶಾಲೆ ಮತ್ತು ಕೇಂದ್ರ ಶಾಲೆಗೆ ಸಂಯೋಜನೆಗೊಂಡಿರುವ ಸುತ್ತಮುತ್ತಲಿನ ಶಾಲೆಗಳ,ಈ ಶಾಲೆಗಳಿಂದ ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ನೀಡಿರುವ ಶಾಲಾ ಮಕ್ಕಳ ಸಂಖ್ಯೆ ವಿವರವನ್ನು ಕೇಂದ್ರ ಶಾಲೆಯಲ್ಲಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು/ ತಾಲ್ಲೂಕು ಪಂಚಾಯತ್ ಕಛೇರಿಗಳ ಸೂಚನಾ ಫಲಕದಲ್ಲಿ ಸಾರ್ವಜನಿಕರ, ಪೋಷಕರ ಮಾಹಿತಿಗಾಗಿ ಪುಕಟಪಡಿಸುವ ಕ್ರಮವಹಿಸುವುದು. ( ನಮೂನೆ -1 ಮತ್ತು ನಮೂನೆ- 2 ನ್ನು ಲಗತ್ತಿಸಿದೆ.)
1.5 ಗುರುತಿಸಿದ ಕೇಂದ್ರ ಶಾಲೆಗಳ ಮುಖ್ಯ ಶಿಕ್ಷಕರು ನೆರೆಹೊರೆಯ ಶಾಲೆಗಳ ಮುಖ್ಯ ಶಿಕ್ಷಕರಿಂದ ಮಕ್ಕಳ ಪಟ್ಟಿಯನ್ನು ಪಡೆದು ಧೃಢೀಕರಿಸಿ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ನೀಡತಕ್ಕದ್ದು. ಸದರಿ ಮುಖ್ಯ ಶಿಕ್ಷಕರು ಮಕ್ಕಳ ಪಟ್ಟಿಯಂತೆ ಒಟ್ಟು ಮಕ್ಕಳ ಹಾಜರಾತಿ ಆಧಾರದ ಮೇಲೆ ಬಿಸಿಯೂಟ ಕಾರ್ಯಕ್ರಮವನ್ನು ನಿರ್ವಹಿಸಲು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು.
1.6 ಇನ್ನುಳಿದ ಶಾಲಾ ಮಕ್ಕಳನ್ನು ಸದರಿ ಕೇಂದ್ರ ಶಾಲೆಗೆ ಕಳುಹಿಸುವ ಕಾರ್ಯವನ್ನು ಮತ್ತು ಪುತಿನಿತ್ಯ ಗುರುತಿಸುವ ಕಾರ್ಯವನ್ನು ಆಯಾ ಶಾಲೆಯ ಮುಖ್ಯಶಿಕ್ಷಕರು ಕ್ರಮವಹಿಸಬೇಕಾಗುತ್ತದೆ. ಗುರುತಿಸಲ್ಪಟ್ಟ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು ಹಾಜರಾದ ಮಕ್ಕಳ ಬಿಸಿಯೂಟದ ದೈನಂದಿನ ವೆಚ್ಚವನ್ನು ಕೇಂದ್ರ ಶಾಲೆಯಲ್ಲಿಯೆ ಭರಿಸಿವುದು. ಇದರ ಲೆಕ್ಕ ವಿವರವನ್ನು ಬೇಸಿಗೆ ರಜೆಯ ಬಿಸಿಯೂಟ ಖರ್ಚು-ವೆಚ್ಚದ ಲೆಕ್ಕ ದಾಖಲೆಯನ್ನು ಇದರೊಂದಿಗೆ ಶಾಲಾ ಮಕ್ಕಳಹಾಜರಾತಿ, ಅಡುಗೆ ಸಿಬ್ಬಂದಿಗಳ ಹಾಜರಾತಿ, ಆಹಾರ ದಾಸ್ತಾನು ವಹಿ, ಶುಚಿ-ರುಚಿ ವಹಿ ಇತ್ಯಾದಿ ದಾಖಲೆಗಳನ್ನು ಕೇಂದ್ರ ಶಾಲೆಯಲ್ಲಿ ಪ್ರತ್ಯೇಕವಾಗಿ ನಿರ್ವಹಿಸುವುದು.
2. ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಪಡೆಯುವ ಮಕ್ಕಳ ಕುರಿತು ಮಾಹಿತಿ: 2.1 ಬೇಸಿಗೆ ರಜಾ ಅವಧಿಯಲ್ಲಿ ಎಲ್ಲಾ ಅರ್ಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ವಿತರಿಸುವ ಅವಕಾಶವಿದೆ.ಅವರಿಗೆ ಸಿದ್ಧಪಡಿಸಿದ ಆಹಾರವು ವ್ಯರ್ಥವಾಗದಂತೆ ಕ್ರಮವಹಿಸಲು ತಿಳಿಸಿದೆ.
2.2 ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ವ್ಯವಸ್ಥೆ ಕುರಿತು ಶಾಲಾ ಹಂತದಲ್ಲಿ ಪೋಷಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಕುರಿತು ಒಪ್ಪಿಗೆ ಪತ್ರವನ್ನು ಪಡೆಯುವುದು ಹಾಗೂ ಅದರಂತೆ ಕ್ರೋಢೀಕೃತ ಪಟ್ಟಿಯನ್ನು ಕೇಂದ್ರ ಶಾಲೆಗೆ ಒದಗಿಸುವುದು. ಈ ಕುರಿತು ನಿಗದಿತ ನಮೂನೆಯನ್ನು ಈ ಸುತ್ತೋಲೆಯ ಕೊನೆಯ ಪುಟದಲ್ಲಿ ಲಗತ್ತಿಸಿದೆ.
2.3 ಮೇಲ್ಕಂಡ ಬಿಸಿಯೂಟ ವ್ಯವಸ್ಥೆಯ ನಿರ್ವಹಣೆಯನ್ನು ಮಾಡಲು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಪಿ ಎಂ ಪೋಷಣ್ ಸಹಾಯಕ ನಿರ್ದೇಶಕರು ಸಿ ಆರ್ ಪಿ / ಬಿ ಆರ್ ಪಿ/ ಇ ಸಿ ಒ ಗಳನ್ನು ಕ್ಲಸ್ಟರ್‌ವಾರು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸುವುದು.
3. ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಗುರುತಿಸುವಿಕೆ.
3.1 ಮಧ್ಯಾಹ್ನ ಬಿಸಿಯೂಟಕ್ಕಾಗಿ ಗುರುತಿಸಲ್ಪಟ್ಟ
ಅಡುಗೆ ಕೇಂದ್ರಗಳಲ್ಲಿ (ಹಿ.ಪ್ರಾ.ಶಾ/ ಉನ್ನತೀಕರಿಸಿದ ಹಿ.ಪ್ರಾ.ಶಾ/ ಪ್ರೌ.ಶಾ) ಕಾರ್ಯಕ್ರಮದ ನಿರ್ವಹಣೆಗಾಗಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ಕೇಂದ್ರ ಶಾಲೆಯ ಮುಖ್ಯಶಿಕ್ಷಕರು ಹಾಗೂ ಅಗತ್ಯವಿದ್ದಲ್ಲಿ ಒಬ್ಬ ನೋಡಲ್ ಶಿಕ್ಷಕರನ್ನು ಗುರುತಿಸಿ ನಿಯೋಜಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.
3.2 ಒಂದು ವೇಳೆ ಗುರುತಿಸ್ಪಟ್ಟ ಕೇಂದ್ರ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ನಿಯೋಜಿಸತಕ್ಕದ್ದು ಇದರೊಂದಿಗೆ ತಮ್ಮ ಕಛೇರಿಯಿಂದ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಯನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಕನಿಷ ಎರಡು ಬಿಸಿಯೂಟ ಕೇಂದ್ರ ಶಾಲೆಗಳನ್ನು ಭೇಟಿ ಮಾಡಿ ಹಾಜರಾಗುವ ಅರ್ಹ ಮಕ್ಕಳ ಹಾಜರಾತಿ ಸಂಖ್ಯೆ, ಸ್ವಚ್ಛತೆ, ಆಹಾರ ಗುಣಮಟ್ಟ, ಶುಚಿ-ರುಚಿ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಪರಿಶೀಲಿಸಿ, ಪ್ರತಿ ನಿತ್ಯ ವರದಿಯನ್ನು ನೀಡುವುದು.
3.3 ಬೇಸಿಗೆ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆಯನ್ನು ಪಡೆಯಲು ಅವಕಾಶವಿರುವುದರಿಂದ ಶಿಕ್ಷಕರನ್ನು ಅಗತ್ಯಕ್ಕೆ ತಕ್ಕಂತೆ ನಿಯಮಾನುಸಾರ ನಿಯೋಜಿಸಲು ಕ್ರಮವಹಿಸುವುದು.
3.4 ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ವಿತರಣಾ ಕೇಂದ್ರ ಶಾಲೆಗಳಿಗೆ ಗೊತ್ತುಪಡಿಸಲಾದ ಮುಖ್ಯಶಿಕ್ಷಕರು/ ಸಹ ಶಿಕ್ಷಕರ ಸಂಪರ್ಕ/ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಯವರು ಹೊಂದಿರತಕ್ಕದ್ದು.
3.5 ಕೇಂದ್ರ ಶಾಲೆಗೆ ಸಂಯೋಜನೆಗೊಳಿಸಿರುವ ಸುತ್ತ-ಮುತ್ತಲಿನ ಶಾಲೆಗಳ ಮುಖ್ಯಶಿಕ್ಷಕರು ಪ್ರಾರಂಭ ದಿನದಂದು ಕೇಂದ್ರ ಶಾಲೆಗೆ ಬಂದು ತಮ್ಮ ಶಾಲೆಯಿಂದ ಹಾಜರಾಗುತ್ತಿರುವ ಮಕ್ಕಳನ್ನು ಪರಿಚಯಿಸಿ ಗುರುತಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇವರು ಕೇಂದ್ರ ಶಾಲೆಯ ಮುಖ್ಯಶಿಕ್ಷಕರಿಂದ ತಮ್ಮ ಶಾಲೆಯ ಮಕ್ಕಳ ಹಾಜರಾತಿ ಮಾಹಿತಿಯನ್ನು ಪಡೆದು ತಮ್ಮ ಶಾಲೆಯ SATS MDMನಲ್ಲಿ ತಪ್ಪದೇ ಇಂದೀಕರಿಸುವುದು. ಪ್ರತಿನಿತ್ಯ ಮಕ್ಕಳು ಅವರ ಪೋಷಕರ ಜವಾಬ್ದಾರಿಯಲ್ಲಿ ಕೇಂದ್ರ ಶಾಲೆಗೆ ಹಾಜರಾಗಿ ಬಿಸಿಯೂಟ ಸ್ವೀಕರಿಸುವುದು.
4. ಅಡುಗೆ ಸಿಬ್ಬಂದಿಗಳ ಪಾತ್ರ.
4.1 ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ಸ್ವೀಕರಿಸಲು ಹಾಜರಾಗುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೆಲಸಕ್ಕೆ ಅಡುಗೆ ಸಿಬ್ಬಂದಿಯನ್ನು ತೆಗೆದುಕೊಳ್ಳಲು ಕೇಂದ್ರ ಶಾಲೆಯ ಮುಖ್ಯಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಡುಗೆಯವರ ಅವಶ್ಯಕತೆ ಇದ್ದಲ್ಲಿ, ಮ್ಯಾಪಿಂಗ್ ಮಾಡಿರುವ ಶಾಲೆಯಲ್ಲಿನ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆಯುವುದು.
4.2 ಅಡುಗೆ ಸಹಾಯಕರು ಕಾರ್ಯ ನಿರ್ವಹಿಸಿದ ದಿನಗಳಿಗೆ ಮಾತ್ರ ಗೌರವ ಸಂಭಾವನೆಯನ್ನು ಪಡೆಯಲಿದ್ದು, ಪುಸ್ತುತ ಜಾರಿಯಲ್ಲಿರುವ ವಿಧಾನದಂತೆ ನೇರವಾಗಿ ಅಡುಗೆಯವರ ಖಾತೆಗೆ ಜಮಾ ಮಾಡಲಾಗುವುದು. 4.3 ಬರಗಾಲದ ಅವಧಿಯಲ್ಲಿ ಕಾರ್ಯನಿರ್ವಹಿಸಲು ಕೇಂದ್ರ ಶಾಲೆಗಳಲ್ಲಿ ಅಗತ್ಯಕ್ಕೆ ತಕ್ಕ ಪುಮಾಣದಲ್ಲಿ ಮರು ನೇಮಕ ಮಾಡಿಕೊಂಡು ಕೆಲಸಕ್ಕೆ ಹಾಜರಾಗುವ ಅಡುಗೆ ಸಿಬ್ಬಂದಿಯವರನ್ನು 12ನೇ ಏಪ್ರಿಲ್ 2024 ರಿಂದ ಮೇ 2024ರ ಮಾಹೆಯ ಅಂತ್ಯದವರೆಗೆ ಕರ್ತವ್ಯಕ್ಕೆ ಹಾಜರಿಪಡಿಸಿಕೊಳ್ಳುವುದು. ಒಟ್ಟು ಎರಡು ತಿಂಗಳ ಬೇಸಿಗೆ ರಜಾ ಅವಧಿಯ ಅಡುಗೆ ಕೆಲಸವನ್ನು ಪರಿಗಣಿಸಿ ಅರ್ಹ ಅಡುಗೆ ಸಿಬ್ಬಂದಿಗೆ ಹಾಜರಾತಿಯನ್ನು ಖಚಿತಪಡಿಸಿಕೊಂಡು ಗೌರವಸಂಭಾವನೆಯನ್ನು ನೀಡಲು ಕ್ರಮವಹಿಸುವುದು.
4.4 ನೇಮಕಗೊಂಡ ಅಡುಗೆ ಸಿಬ್ಬಂದಿ ಕೇಂದ್ರ ಶಾಲೆಗೆ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಹಾಜರಾಗಿ 2 ಗಂಟೆಯ ವರೆಗೆ ಹಾಜರಿದ್ದು ಅಗತ್ಯ ಪೂರ್ವಸಿದ್ಧತೆಯೊಂದಿಗೆ ಬಿಸಿಯೂಟ ಸಿದ್ಧಪಡಿಸಿ ಮಧ್ಯಾಹ್ನ 12.30, ಯಿಂದ 2 ಗಂಟೆಯವರೆಗೆ ಹಾಜರಾಗುವ ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಮಧ್ಯಾಹ್ನ ಬಿಸಿಯೂಟ ವಿತರಿಸಿ ಸ್ವಚ್ಛತೆಯನ್ನು ಕೈಗೊಂಡು ಕೆಲಸ ಪೂರೈಸುವುದು. ಬಿಸಿಲ ಉಷ್ಮಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಕೇಂದ್ರ ಶಾಲೆಗಳಲ್ಲಿ ಬೆಳಗ್ಗೆ 8.00 ಗಂಟೆಯಿಂದ 12.00 ಗಂಟೆಯವರೆಗೆ ಹಾಜರಾಗಿ ಕಾರ್ಯ ನಿರ್ವಹಿಸಿ ಶಾಲಾ ಮಕ್ಕಳಿಗೆ 10.00 ಗಂಟೆಯಿಂದ 11.30 ಗಂಟೆ ಒಳಗಾಗಿ ಬಿಸಿಯೂಟ ವಿತರಿಸುವುದು. 4.5 ಬರಗಾಲ ಪೀಡಿತ ಪ್ರದೇಶಗಳ 41 ದಿನಗಳ ಆಹಾರ ಧಾನ್ಯಗಳ ತಾಲ್ಲೂಕುವಾರು ಬೇಡಿಕೆಯನ್ನು ರಾಜ್ಯ ಕಛೇರಿಗೆ ಕೂಡಲೇ ಸಲ್ಲಿಸುವುದು.
4.6 ಸಾದಿಲ್ವಾರು ಅನುದಾನ ಮತ್ತು ಅಡುಗೆಯವರ ಗೌರವಧನವನ್ನು ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಮುಂಗಡವಾಗಿ ಸಕಾಲದಲ್ಲಿ ಬಿಡುಗಡೆಗೊಳಿಸುವ ಕ್ರಮವನ್ನು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ಇವರ ಜವಾಬ್ದಾರಿಯಾಗಿದ್ದು, ಇದರಂತೆ ಕ್ರಮವಹಿಸುವುದು.
5. ಮೇಲುಸ್ತುವಾರಿಬಗ್ಗೆ:
5.1 ಬರಗಾಲ ಪೀಡಿತ ಪ್ರದೇಶದ ತಾಲ್ಲೂಕುಗಳ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿ ಬಿಸಿಯೂಟ ವಿತರಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ, 08.04.202400 ಮಾರ್ಗದರ್ಶಿಸುವುದು.
ಕೈಗೊಂಡು
5.2 ಜಿಲ್ಲಾ ಹಂತದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ರವರು ತಾಲ್ಲೂಕುವಾರು ಕೇಂದ್ರ ಶಾಲೆಗಳ ಪಟ್ಟಿಯನ್ನು ಅನುಮೋದಿಸುವುದು. ಕೇಂದ್ರ ಶಾಲೆಗಳಿಗೆ ಭೇಟಿ ನೀಡಿ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಮಾರ್ಗದರ್ಶಿಸಿ ಜಿಲ್ಲೆಯ ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆ ಜವಾಬ್ದಾರಿಯನ್ನು ನಿರ್ವಹಿಸುವುದು.
5.3 ಕೇಂದ್ರ ಶಾಲೆಗಳ ಹಂತದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಕುಂದು ಕೊರತೆಗಳ ಬಗ್ಗೆ ಮಾಹಿತಿ / ದೂರನ್ನು ಸ್ವೀಕರಿಸಲು ಸಲಹಾ ಪೆಟ್ಟಿಗೆಗಳನ್ನು ಇಟ್ಟು ನಿರ್ವಹಿಸುವುದು.
5.4 ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲ್ಬುರ್ಗಿ ಮತ್ತು ಧಾರವಾಡ ವಿಭಾಗ ಇವರು ಬೇಸಿಗೆ ರಜೆಯ ಬಿಸಿಯೂಟ ವಿತರಣೆಯ ಬಗ್ಗೆ ಆಯಾ ವಿಭಾಗಗಳ ಜಿಲ್ಲೆಗಳ ಮೇಲುಸ್ತುವಾರಿ ವಹಿಸುವುದು ಮತ್ತು ಅನುಷ್ಠಾನ ಮತ್ತು ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಮಾರ್ಗದರ್ಶಿಸುವುದು.
6. ಸ್ವಯಂ ಸೇವಾ ಸಂಸ್ಥೆಗಳ ಪಾತ್ರ:
6.1 ಬರಗಾಲ ಪೀಡಿತ ತಾಲ್ಲೂಕುಗಳ ಬೇಸಿಗೆ ರಜೆಯ ಅವಧಿಯಲ್ಲಿ ಕೇಂದ್ರ ಶಾಲೆಗಳಿಗೆ ಹಾಜರಾಗುವ 1-10ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮವಹಿಸುವುದು. ತಮ್ಮ ಕೇಂದ್ರ ಶಾಲೆಗಳಿಗೆ ಬಿಸಿಯೂಟವನ್ನು ಸುರಕ್ಷಿತ ಸಾಗಾಣಿಕೆಯೊಂದಿಗೆ ಸಕಾಲದಲ್ಲಿ ತಲುಪಿಸಿ ಹಾಜರಾದ ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ವಿತರಿಸುವುದು. 6.2 ಮಧ್ಯಾಹ್ನದ ಬಿಸಿಯೂಟ ವಿತರಣೆಯ ಸಮಯವು 12.30 ರಿಂದ 02.00 ಗಂಟೆಯವರೆಗೂ ಇದ್ದು ಸರಿಯಾದ ಸಮಯಕ್ಕೆ ಬಿಸಿಯೂಟವನ್ನು ವಿತರಿಸುವುದು.ಬೇಸಿಗೆ ಬಿಸಿಲ ಉಷ್ಮಾಂಶ ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಶಾಲಾ ಮಕ್ಕಳಿಗೆ ಬೆಳಗ್ಗೆ 10.00 ಗಂಟೆಯಿಂದ 11.30 ಗಂಟೆ ಒಳಗಾಗಿಬಿಸಿಯೂಟ ವಿತರಿಸುವ ಕ್ರಮವಹಿಸುವುದು. ಅಧಿಕ ಉಷ್ಣಾಂಶವಿರುವ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಿಸುವ ವೇಳಾಪಟ್ಟಿಯ ಬಗ್ಗೆ, ಪುಕಟಪಡಿಸುವುದು.
6.3 ಬಿಸಿಯೂಟ ಸ್ವೀಕರಿಸಿದ ಮಕ್ಕಳ ಹಾಜರಾತಿ ಸಂಖ್ಯೆಯ ದಾಖಲೆ ಇರಿಸಿಕೊಂಡು ಮುಖ್ಯ ಶಿಕ್ಷಕರಿಂದ ಹಾಗೂ ಅಡುಗೆಯವರಿಂದ ಸಹಿ ಪಡೆದು ನಿರ್ವಹಿಸುವುದು.
6.4 ಸಂಬಂಧಿಸಿದ ಕೇಂದ್ರ ಶಾಲೆಗೆ ಹಾಜರಾದ ಹಾಗೂ ಬಿಸಿಯೂಟ ಸ್ವೀಕರಿಸಿದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ತಿಂಗಳ ಪರಿವರ್ತನ ವೆಚ್ಚದ ಬಿಲ್ ಅನ್ನು ಸಿದ್ಧಪಡಿಸಿ ಪಾವತಿಗೆ ಸಲ್ಲಿಸುವುದು. 6.5 ಬಿಸಿಯೂಟ ವಿತರಣೆಯೊಂದಿಗೆ ಕೇಂದ್ರ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ಟೀಲ್ ತಟ್ಟೆ ಲೋಟಗಳನ್ನು, ಪಾತ್ರೆಗಳನ್ನು ತೊಳೆಯಲು ಅಗತ್ಯ ಪಮಾಣದಲ್ಲಿ ನೀರಿನ ವ್ಯವಸ್ಥೆಯನ್ನು ಶಾಲೆಯ ಮುಖ್ಯಸ್ಥರೊಂದಿಗೆ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯೊಂದಿಗೆ ಸಹಕಾರ ಪಡೆದು ಒದಗಿಸುವ ಕ್ರಮ ವಹಿಸುವುದು. ಕೇಂದ್ರ ಶಾಲೆಗಳ ಒಟ್ಟು ಫಲಾನುಭವಿಗಳಿಗೆ ಬೇಸಿಗೆ ರಜೆಯ ಬಿಸಿಯೂಟ ವಿತರಿಸಿದ ಸಂಬಂಧ ಬಿಲ್ಲುಗಳನ್ನು ಪಾವತಿಗಾಗಿ ಆಯಾ ಕೇಂದ್ರ ಶಾಲೆಗಳಿಗೆ ಸಲ್ಲಿಸುವುದು.
7 ಕುಡಿಯುವ ನೀರು ವ್ಯವಸ್ಥೆ ಬಗ್ಗೆ:
7.1 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಶಾಲಾ ಬಿಸಿಯೂಟ ಕೇಂದ್ರಗಳಿಗೆ ನೀರಿನ ನಿರಂತರ ಸರಬರಾಜಿಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪತ್ರ ಬರೆದು ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಮತ್ತು ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಸರಬರಾಜಿಗಾಗಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಪುರಸಭೆ ಪಟ್ಟಣ ಪಂಚಾಯತ್‌ಗಳ ಮುಖ್ಯ ಅಧಿಕಾರಿ (Chief Officer) ಗಳಿಗೆ ಪತ್ರ ಬರೆದು ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಅಗತ್ಯ ಕ್ರಮಕ್ಕಾಗಿ ಸೂಚನೆ ನೀಡುವುದು.
8. ಎ.ಎಂ.ಎಸ್. ತಂತ್ರಾಂಶದಲ್ಲಿ ಫಲಾನುಭವಿಗಳ ಮಾಹಿತಿ ನೀಡುವ ಬಗ್ಗೆ.
8.1 ಈಗಾಗಲೇ ಎ.ಎಂ.ಎಸ್ ತಂತ್ರಾಂಶವನ್ನು ರಾಜ್ಯಾದಂತ ಅನುಷ್ಠಾನಗೊಳಿಸಿದ್ದು, ಎಸ್.ಎಂ.ಎಸ್ ಮೂಲಕ ಪ್ರತಿನಿತ್ಯ ಬಿಸಿಯೂಟ ಸ್ವೀಕರಿಸಿದ ಶಾಲಾ ಮಕ್ಕಳ ಫಲಾನುಭವಿಗಳ ಮಾಹಿತಿಯನ್ನು ಕೇಂದ್ರ ಶಾಲೆಯ ಮುಖ್ಯಶಿಕ್ಷಕರು ಇಂದೀಕರಿಸುವುದು.
8.2 ಮ್ಯಾಪಿಂಗ್ ಮಾಡಿ ಕೇಂದ್ರ ಶಾಲೆಯನ್ನಾಗಿ ಗುರುತಿಸಿರುವ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ 1-10 ನೇ ತರಗತಿಯವರೆಗೆ (2023-24ನೇ ಸಾಲಿನಲ್ಲಿ ವ್ಯಾಸಾಂಗ ಮಾಡಿರುವ) ಹಾಜರಾತಿಯಾದ ಮಕ್ಕಳ ಫಲಾನುಭವಿಗಳ ಸಂಖ್ಯೆಯೊಂದಿಗೆ ಇತರೆ ಶಾಲೆಯಿಂದ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನೂ ಸೇರಿಸಿ ಒಟ್ಟು ಫಲಾನುಭವಿಗಳ ಮಾಹಿತಿಯನ್ನು ಪ್ರತಿದಿನ ಇಂದೀಕರಿಸುವುದು.
8.3 ಅಗತ್ಯ ಬಿದ್ದಲ್ಲಿ ಹಾಗೂ ಅಗತ್ಯ ಮಾಹಿತಿಗಾಗಿ ಕೇಂದ್ರ ಕಛೇರಿಯ Toll Free No:180042520007 ಹಾಗೂ Land Line (ಸ್ಥಿರ ದೂರವಾಣಿ ಸಂಖ್ಯೆ: 08022271998 /08022242943 ಇ-ಮೇಲ್ ಐಡಿ E.Mail.ID: dpi.pmposhan@edukar.gov.inಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಅಂಥ ತಿಳಿಸಿದೆ.