ಸುದ್ದಿ ಕೃಪೆ: ಪ್ರಜಾಕಹಳೆ, ತುಮಕೂರು ಕನ್ನಡ ದಿನ ಪತ್ರಿಕೆ, ಸಂಪಾದಕರು: ರಘು ಎ.ಎನ್
ಹುಳಿಯಾರು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲ ಸಿಗಬಹುದೆಂಬ ನಿರೀಕ್ಷೆಯಿಂದ ಲೋಕ ಸಭಾ ಕಣಕ್ಕೆ ಧುಮ್ಮಿಕ್ಕಿರುವ ವಿ.ಸೋಮಣ್ಣನಿಗೆ ಚಿಕ್ಕನಾಯಕ ನಹಳ್ಳಿ ಭಾರೀ ಮುಖಭಂಗವಾಗಿದ್ದು, ಬಿಜೆಪಿ ಕಾರ್ಯ ಕರ್ತರಿಲ್ಲದೆ ಪ್ರಚಾರ ನಡೆಸುವಂತಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 2 ಕ್ಷೇತ್ರದಲ್ಲೂ ಸೋತಿದ್ದರೂ ಹೈ ಕಮಾಂಡ್ ಮನವೊಲಿಸಿ ಲೋಕಸಭೆಗೆ ಟಿಕೆಟ್ ತಂದಿರುವ ವಿ.ಸೋಮಣ್ಣ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದಂತಾಗಿದೆ. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಘೋಷಣೆಯಾದ ಕ್ಷಣದಿಂದಲೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಕಾರ ಘೋಷಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಧಾನಕ್ಕೆ ಬಂದರೂ ಬಗ್ಗದೆ ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು ಸಹ ಮಾಧುಸ್ವಾಮಿ ಪ್ರಚಾರಕ್ಕೆ ಬರುತ್ತಾರೆಂಬ ಆಸೆಯಿಂ ದಲೇ ಚುನಾವಣೆ ಎದುರಿಸುತ್ತಿರುವ ವಿ.ಸೋಮಣ್ಣರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು
ಕೈಕೊಟ್ಟಿದ್ದಾರೆ.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುನಿಸಿಕೊಂಡಿದ್ದರೂ ಬಿಜೆಪಿ ಪಕ್ಷ ನಿಷ್ಠರು, ಸ್ವಜಾತಿ ಮುಖಂಡರು ನನ್ನ ಪರ ಪ್ರಚಾರ ಮಾಡಿ ಯೇ ಮಾಡುತ್ತಾರೆ ಎಂಬ ವಿಶ್ವಾಸದೊಂದಿಗೆ ಚಿಕ್ಕನಾ ಯಕನಹಳ್ಳಿಯಲ್ಲಿ ಪ್ರಚಾರಕ್ಕೆ ಬಂದ ಅವರಿಗೆ, ಬಿಜೆಪಿ ಮಾಜಿ ಅಧ್ಯಕ್ಷ ಮಿಲ್ಟಿವಣ್ಣ ಅವರೊಬ್ಬರನ್ನು ಬಿಟ್ಟರೆ ಒಬ್ಬನೇ ಒಬ್ಬ ಬಿಜೆಪಿ ಮುಖಂಡನಿರಲಿ ಸಾಮಾನ್ಯ ಕಾರ್ಯಕರ್ತನೂ ಸಹ ಸೋಮಣ್ಣ ಜೊತೆಗೆ ಪ್ರಚಾರಕ್ಕೆ ಬರಲಿಲ್ಲ. ಇದು ಬಿಜೆಪಿಯಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಇರುವುದು ಹಾಗೂ ಮಾಧುಸ್ವಾಮಿ ಹಾಕಿದ ಗೆರೆ ದಾಟಲಾರರು ಎಂಬ ಸಂದೇಶವನ್ನು ಸೋಮಣ್ಣ ಮತ್ತು ಪಕ್ಷದ ವರಿಷ್ಟರಿಗೂ ನೀಡಿದ್ದಾರೆ ಎಂಬುದು ರಾಜಕೀಯ ವಲಯದ ವಿಶ್ಲೇಷಣೆಯಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆವಿಗೂ ಸೋಮಣ್ಣ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡಿದರಲ್ಲದೆ ಅಲ್ಲಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು. ತನ್ನ ಭಾಷಣದಲ್ಲಿ ಮಾಧುಸ್ವಾಮಿ ಬಗ್ಗೆ ಎಲ್ಲರೂ ತುಟಿ ಬಿಚ್ಚದೆ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗುವುದು ದೇಶಕ್ಕೆ ಹಿತದೃಷ್ಠಿಯಿಂದ ಅತ್ಯವಶ್ಯಕ ಹಾಗಾಗಿ ಬೆಜೆಪಿ ಗೆಲ್ಲಿಸಿ ಎಂದರಲ್ಲದೆ ಕೇಂದ್ರದಿಂದ.
ಮಾಧುಸ್ವಾಮಿ ಬಂಟನಿಗೆ ಗಾಳ: ಮಾಧುಸ್ವಾಮಿ ಅವರ ಮುನಿಸಿನಿಂದ ಬಿಜೆಪಿಯ ಮತಗಳು ಕೈ ತಪ್ಪದಂತೆ ಹಿಡಿದಿಟ್ಟುಕೊಳ್ಳಲು ಮಾಧು ಸ್ವಾಮಿ ಬಲಗೈ ಭಂಟ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅಮಗೆ ಗಾಳ ಹಾಕಲು ಮುಂದಾದರು. ಪ್ರಚಾರ ಸಭೆಯ ಒತ್ತಡದ ನಡುವೆಯೂ ನವೀನ್ ಮನೆಗೆ ಭೇಟಿ ನೀಡಿ ಅರ್ಧ ಗಂಟೆ ಚುನಾವಣೆಯ ಬಗ್ಗೆ ಚರ್ಚಿಸಿದರು. ಸೋಮಣ್ಣನಿಗಾಗಿ ದುಡಿಯಬೇಡ ನಿನ್ನ ಪಕ್ಷ ಬಿಜೆಪಿ ಗೆಲುವಿಗಾಗಿ ದುಡಿ. ಇನ್ನೊಬ್ಬರ ಕೈ ಗೊಂಬೆಯಾಗದೆ ನಿನ್ನ ನಾಯಕತ್ವ ಸಾಬೀತಿಗೆ ಇದು ಸುವರ್ಣವಕಾಶ ಬಳಸಿಕೊಂಡು ನಾಯಕನಾಗಿ ಹೊ ರಹೊಮ್ಮು ಎಂಬ ಹುರಿದುಂಬಿಸುವ ಮಾತುಗಳನ್ನು ಆಡಿದರು ಎನ್ನಲಾಗಿದೆ. ತುಮಕೂರಿಗೆ ಹಣದ ಹೊಳೆ ಹರಿಸಿ ಅಭಿವೃದ್ಧಿ ಮಾಡುತ್ತೇನೆ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯುತ್ತಿರುವುದು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.