ಬೆಂಗಳೂರು: ಎಲ್ಲಾ ಸಮುದಾಯಗಳಲ್ಲೂ ಪುಂಡರಿರುತ್ತಾರೆ. ಅವರನ್ನು ಒಳಗೆ ಹಾಕಿದರೆ ಎಲ್ಲವೂ ಸರಿಯಾಗುತ್ತದೆ ಅಂತ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಲೋಕಸಭಾ ಚುನಾವಣೆ: ಕರ್ನಾಟಕದ 13 ಕ್ಷೇತ್ರಗಳ 276 ಕ್ರಮಬದ್ಧ, 60 ತಿರಸ್ಕೃತ!
ಪಾನಿಪುರಿ ಮಾರಾಟಗಾರನ ಮಗನ ‘MBBS’ ಪ್ರವೇಶ ರದ್ದುಗೊಳಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಏನೀದು ಪ್ರಕರಣ: ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಾರಡಗಿ ಗ್ರಾಮದ ಭಗವಾ ಧ್ವಜ ಇಳಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಮು ಸೌಹಾರ್ದ ಕದಡಲು ಪಿತೂರಿ ನಡೆಸಲಾಗಿದೆಯೆಂಬ ಆರೋಪ ಸಂಬಂಧ ಹುಲಗೂರು ಪೊಲೀಸರು ದಾಖಲಿಸಿರುವ ದೂರು ರದ್ದು ಕೋರಿ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಶೇಷ ಪೀಠ ವಿಚಾರಣೆ ನಡೆಸಿತು.
ಈ ನಡುವೆ ಎಲ್ಲಾ ಸಮುದಾಯಗಳಲ್ಲೂ ನಾಲ್ಕಾರು ಪುಂಡರಿರುತ್ತಾರೆ. ಅವರನ್ನು ಹಿಡಿದು ಒಳಗೆ ಹಾಕಿದರೆ ಎಲ್ಲವೂ ಸರಿಯಾಗುತ್ತದೆ, ಇಲ್ಲವಾದರೆ ಇವತ್ತು ಭಗವಾ ಧ್ವಜ ಇಳಿಸ್ತಾರೆ, ನಾಳೆ ರಾಷ್ಟ್ರಧ್ವಜ ಇಳಿಸ್ತಾರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ ಅಂಥ ಹೇಳಿದ ನ್ಯಾಯಾಪೀಠ, ಮಾಜಿ ಶಾಸಕರೂ ಸೇರಿದಂತೆ ಆರೋಪಿಗಳಾಗಿರುವವರು ಬಳಸಿರುವ ಪದಗಳು ಸರಿ ಎನಿಸುವುದಿಲ್ಲ. ಮುಂದೆ ಸಮಾಜದಲ್ಲಿ ಏನಾದರೂ ತೊಂದರೆಯಾದರೆ ಇಡೀ ಸಮುದಾಯಕ್ಕೇ ಕೆಟ್ಟ ಹೆಸರು ಬರುತ್ತದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.