ನವದೆಹಲಿ: ಫೆಬ್ರವರಿಯಲ್ಲಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ಸಮೀಕ್ಷೆಯ ಪ್ರಕಾರ, ಮುಂಬರುವ ಸಂಸದೀಯ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಹುಮತ ಪಡೆಯುತ್ತದೆ ಎಂದು ಶೇಕಡಾ 91 ರಷ್ಟು ಜನರು ನಂಬಿದ್ದಾರೆ.
ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದ್ದಂತೆ, ಇತ್ತೀಚಿನ ಟೈಮ್ಸ್ ನೌ-ಇಟಿಜಿ ಸಂಶೋಧನಾ ಸಮೀಕ್ಷೆಯು ದೇಶಾದ್ಯಂತ ಸರ್ವೆ ನಡೆಸಿದ್ದು, ಈ ನಡುವೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ 370 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಲು ಸಜ್ಜಾಗಿದೆ ಎನ್ನಲಾಗಿದೆ.
ಸಮೀಕ್ಷೆಯು ವಿವಿಧ ರಾಜಕೀಯ ಪಕ್ಷಗಳಿಗೆ ಈ ಕೆಳಗಿನ ಸ್ಥಾನ ಪಡೆದುಕೊಳ್ಳುವುದು ಅಂತ ಊಹಿಸಲಾಗಿದೆ.
ಒಟ್ಟು ಸ್ಥಾನಗಳು: 543
ಬಿಜೆಪಿ: 329-359 ಸ್ಥಾನಗಳು
ಕಾಂಗ್ರೆಸ್: 27-47 ಸ್ಥಾನಗಳು
ವೈಎಸ್ಆರ್ಸಿಪಿ: 21 – 22 ಸ್ಥಾನಗಳು
ಡಿಎಂಕೆ: 24 – 28 ಸ್ಥಾನಗಳು
ಟಿಎಂಸಿ: 17 – 21 ಸ್ಥಾನಗಳು
ಬಿಜೆಡಿ: 10 – 12 ಸ್ಥಾನಗಳು
ಎಎಪಿ: 5 – 7 ಸ್ಥಾನಗಳು
ಇತರರು: 72 – 92 ಸ್ಥಾನಗಳು
ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಫೆಬ್ರವರಿಯಲ್ಲಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿತ್ತು. ಸಮೀಕ್ಷೆಯ ಪ್ರಕಾರ, ಮುಂಬರುವ ಸಂಸದೀಯ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಹುಮತ ಪಡೆಯುತ್ತದೆ ಎಂದು ಶೇಕಡಾ 91 ರಷ್ಟು ಜನರು ನಂಬಿದ್ದಾರೆ.
ಟೈಮ್ಸ್ ನೌ-ಇಟಿಜಿ ರಿಸರ್ಚ್ ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಶೇಕಡಾ 45 ರಷ್ಟು ಜನರು ನಂಬಿದ್ದರೆ, ಆಡಳಿತ ಮೈತ್ರಿಕೂಟವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು 14 ಪ್ರತಿಶತದಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 21-23 ಸ್ಥಾನ, ಕಾಂಗ್ರೆಸ್‌ಗೆ 4-6, ಜೆಡಿಎಸ್‌ಗೆ 1-2 ಸ್ಥಾನ ಬರುತ್ತದೆ ಅಂತ ಹೇಳಿದೆ.