ಬೆಂಗಳೂರು: ಬರದ ವಿಚಾರದಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿಯನ್ನು ಕೊಡದ ಕೇಂದ್ರ ಸರ್ಕಾರ ಇಂದು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರಪರಿಹಾರದ ವಿಚಾರದಲ್ಲಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಅನಿವಾರ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಮಿತ್ ಶಾ ಅವರು ತಾವು ಆಡಿದ ಮಾತುಗಳನ್ನೇ ಸುಪ್ರೀಂ ಕೋರ್ಟ್ ಮುಂದೆ ಅಫಿಡೆವಿಟ್ ರೂಪದಲ್ಲಿ ಸಲ್ಲಿಸಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದು ಸ್ಪಷ್ಟ. ಸತ್ಯಾಂಶ ಜನರಿಗೆ ಗೊತ್ತಿದೆ. ಒಂದು ರೂಪಾಯಿ ಕೊಡದೇ ಈಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಅವರು ಕರ್ನಾಟಕದ ಜನರ ಮುಂದೆ ಸುಳ್ಳು ನೆಪಗಳನ್ನ ಹೇಳಿತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಆಗಿರುವ ಅನ್ಯಾಯವನ್ನು ಅಂಕಿ ಅಂಶಗಳ ಸಮೇತ ಬಿಚ್ಚಟ್ಟರು.
ಕೇಂದ್ರ ಸರ್ಕಾರ ಉತ್ತರ ಪ್ರದೇಶ ಒಂದು ರಾಜ್ಯಕ್ಕೆ ನೀಡಿತ್ತಿರುವ ತೆರಿಗೆ ಪಾಲು, ಇಡೀ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಹೊಲಿಸಿ ಲೆಕ್ಕ ಹಾಕಿದರೂ ಸಮನಾಗಿಲ್ಲ.
ಉತ್ತರ ಪ್ರದೇಶದ ಒಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರತಿ ವರ್ಷ 2,18,216 ಕೋಟಿ ತೆರಿಗೆ ಪಾಲು ವಿತರಿಸುತ್ತಿದೆ. ಆದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳು ಒಟ್ಟಿಗೆ ಸೇರಿಸಿ ಲೆಕ್ಕ ಹಾಕಿದಾಗ ಕೇಂದ್ರದಿಂದ ಪಡೆಯುತ್ತಿರುವ ತೆರಿಗೆ ಪಾಲು 1,92,725 ಕೋಟಿ ಮಾತ್ರ. 5 ರಾಜ್ಯಗಳ ದಕ್ಷಿಣ ಭಾರತ ಉತ್ತರ ಪ್ರದೇಶ ಒಂದು ರಾಜ್ಯ ಪಡೆಯುವಷ್ಟು ತೆರಿಗೆ ಪಾಲನ್ನ ಹೊಂದಿಲ್ಲವೇ. ದಕ್ಷಣ ಭಾರತದ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ತಾರಮತ್ಯ ಧೋರಣೆ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ ಕರ್ನಾಟಕ ಒಂದೇ ರಾಜ್ಯ ಕೇಂದ್ರ ಸರ್ಕಾರಕ್ಕೆ 12 ಲಕ್ಷ ಕೋಟಿ ತೆರಿಗೆ ಪಾವತಿಸಿದೆ. ಆದರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಟ್ಟಿರುವ ತೆರಿಗೆ ಪಾಲು ಕೇವಲ 2.95 ಲಕ್ಷ ಕೋಟಿ ಮಾತ್ರ. ದೇಶಕ್ಕೆ ಅತಿ ಹೆಚ್ಚು ಜಿಎಸ್ ಟಿ ಕಟ್ಟುವ ಎರಡನೇ ರಾಜ್ಯ ಕರ್ನಾಟಕದಲ್ಲಿ ಪ್ರತಿಯೊಬ್ನ ಕನ್ನಡಿಗ ಸರಾಸರಿ 13428 ರೂ ಜಿಎಸ್ ಟಿ ಕಟ್ಟುತ್ತಾನೆ. ಆದರೆ ಉತ್ತರ ಪ್ರದೇಶದಲ್ಲಿ ಪ್ರತಿಯೊಬ್ಬರು ಸರಾಸರಿ 2793 ರೂ ಮಾತ್ರ ಜಿಎಸ್ ಟಿ ಕಟ್ಟುತ್ತಾರೆ. ಹೆಚ್ವು ತೆರಿಗೆ ಕಟ್ಟುವ ಕನ್ನಡಿಗನಿಗೆ ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟಿದ್ದು ಏನೂ ಇಲ್ಲ ಎಂದು ವಿವರಿಸಿದರು.
ದೇಶದಲ್ಲಿಯೇ ಐಟಿ ರಫ್ತು ಮಾಡವಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿದೆ. ಶೇ 41 ರಷ್ಟು ಐಟಿ ರಫ್ತಿನ ಮೂಲಕ 602 ಬಿಲಿಯನ್ ಡಾಲರ್ ವ್ಯವಹಾರವನ್ನ ಕರ್ನಾಟಕ ಒಂದೇ ರಾಜ್ಯ ನಡೆಸುತ್ತಿದೆ. ದೇಶದ ಆದಾಯಕ್ಕೆ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಸಹಕಾರಿಯಾಗಿರುವ ಕರ್ನಾಟಕವನ್ನ ಕೇಂದ್ರ ಬಿಜೆಪಿ ಕಡೆಗಣಿಸಿದೆ. ನಾವು ಕಟ್ಟುವ ತೆರಿಗೆ ನಮಗೆ ಕೊಡಲ್ಲ. ಬರದಿಂದ ಜನರು ತತ್ತರಿಸಿರುವಾಗ ಅದರಲ್ಲೂ ಅನ್ಯಾಯ. ಕರ್ನಾಟಕದವರು ಭಾರತೀಯರಲ್ಲವೇ.. ದೇಶದ ಬಗ್ಗೆ ಮಾತನಾಡುವ ಬಿಜೆಪಿ, ದಕ್ಷಣ ಭಾರತ ಸೇರಿದಂತೆ ಕನ್ಮಡಿಗರನ್ನ ಕಡೆಗಣಿಸಿರುವುದಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಕರಾವಳಿ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ. 33 ವರ್ಷಗಳಿಂದ ದಕ್ಷಿಣ ಕನ್ನಡದ ಜನರು ಬಿಜೆಪಿಯನ್ನ ನೋಡಿದ್ದಾರೆ. ಈಗ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ನಿಂದ ಪದ್ಮರಾಜ್ ಪೂಜಾರಿ ಅವರು ಒಳ್ಳೆಯ ಅಭ್ಯರ್ಥಿಯಾಗಿದ್ದು, ಜನರು ಕೂಡ ಈ ಬಾರಿ ಕಾಂಗ್ರೆಸ್ ಬೆಂಬಲಿಸುವ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ನಾಳೆ RBI ಹಣಕಾಸು ನೀತಿ ಬಿಡುಗಡೆ: ಆ ಬಗ್ಗೆ ಇಲ್ಲಿದೆ ಮಾಹಿತಿ | RBI monetary policy
ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ- ಬೊಮ್ಮಾಯಿ