ಕ್ವಿಂಗೈ : ಇಂದು ಬೆಳ್ಳಂಬೆಳಗ್ಗೆ ಚೀನಾದ ಕ್ವಿಂಗೈನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ (ಸಿಇಎನ್ಸಿ) ತಿಳಿಸಿದೆ.
ವಾಯವ್ಯ ಚೀನಾದ ಕ್ವಿಂಗೈ ಪ್ರಾಂತ್ಯದ ಮಾಂಗ್ಯಾ ನಗರದಲ್ಲಿ ಗುರುವಾರ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ಜಾಲ ಕೇಂದ್ರ (ಸಿಇಎನ್ಸಿ) ತಿಳಿಸಿದೆ.
ಬುಧವಾರ ತೈವಾನ್ನಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ ಸಂಭವಿಸಿದ ಒಂದು ದಿನದ ನಂತರ ಈ ಭೂಕಂಪ ಸಂಭವಿಸಿದ್ದು, ಜಪಾನ್ನ ಯೋನಾಗುನಿ ದ್ವೀಪದಲ್ಲಿ ಸುನಾಮಿ ಉಂಟಾಗಿದೆ. ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.