ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಮತ ನೀಡಬೇಕು. ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬುದಾಗಿ ಸಂತೋಷ್ ಸದ್ಗುರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಾಗರದ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಪ್ ಕಚೇರಿ ಉದ್ಘಾಟನೆಯ ಬಳಿಕ ಮೊದಲ ಬಾರಿಗೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಾನು ಬಂದಿರೋದು ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಅಂತ. ಈ ಮಾತು ಯುವಕರಿಗೆ ಹೇಳಿರೋ ಮಾತು. ಇದು ಇಡೀ ದೇಶಕ್ಕೆ ಹೇಳಿರೋ ಮಾತು. ಭಾರತ ಎಲ್ಲಾ ಸಮುದಾಯವನ್ನು ಒಳಗೊಂಡಿರುವಂತ ದೇಶವಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಕೋರಿದರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ನಡೆಸಿದರು. ಅವರು ಸಾಗುವಂತ ಮಾರ್ಗದಲ್ಲಿ ಗುಡಿ, ಚರ್ಚು, ಮಸೀದಿಗಳಿಗೆ ಭೇಟಿ ನೀಡಿದಾರೆ. ಎಲ್ಲಾ ವರ್ಗದವರನ್ನು ಭೇಟಿಯಾಗಿದ್ದಾರೆ. ಇಂತಹ ಮನೋಭಾವದ ವ್ಯಕ್ತಿಯನ್ನು ಗೆಲ್ಲಿಸಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ, ಗೆಲ್ಲಿಸುವಂತೆ ಮನವಿ ಮಾಡಿದರು.
180 ದೇಶಗಳ ಪೈಕಿ ಭಾರತವನ್ನು 6ನೇ ಸ್ಥಾನಕ್ಕೆ ದೇಶವನ್ನು ತಂದಿದ್ದರು. ಆದ್ರೇ ಇಂದು ಅದು ಕೆಳಗೆ ಇಳಿದಿದೆ. ಭಾರತದವು ಮೀಡಿಯಾ ಕೂಡ ಕೆಳ ಮಟ್ಟಕ್ಕೆ ಇಳಿದಿದೆ. ಜಾಗತಿಕ ಮಟ್ಟದಲ್ಲಿ ಮೀಡಿಯಾ ಜೊತೆಗೆ ಸಂಪರ್ಕವಿಲ್ಲದೇ ಪ್ರಧಾನಿ ಮೋದಿ ದೂರವೇ ಉಳಿದಿದ್ದಾರೆ ಎಂದರು.
ರಾಹುಲ್ ಗಾಂಧಿ ಜನರ ಜೊತೆಗೆ ಇರುವವರು. ದೂರದೃಷ್ಠಿಯನ್ನು ಹೊಂದಿರುವಂತವರು ಆಗಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿದ್ದರೇ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ಆಗಿದೆ. ಅದರ ಹೊರತಾಗಿ ಬೇರೆ ಯಾವುದೇ ಪಕ್ಷದಿಂದ ಅಲ್ಲವೇ ಅಲ್ಲ ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಸಾಧಿಸುತ್ತಾರೆ. ಸಾಗರದಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದಾರೆ. ಸಚಿವ ಮಧು ಬಂಗಾರಪ್ಪ ಇದ್ದಾರೆ. ಅವರೆಲ್ಲರೂ ಸೇರಿ ಗೆಲ್ಲಿಸುತ್ತಾರೆ.
ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತೇನೆ. ಅದಕ್ಕೆ ನನ್ನ ಧಿಕ್ಕಾರ ಕೂಡ ಇದೆ. ಅದು ಕಾಂಗ್ರೆಸ್ ಇರಲಿ, ಬೇರೆ ಯಾವುದೇ ಪಕ್ಷವಿರಲಿ, ಕುಟುಂಬ ರಾಜಕಾರಣ ಮಾಡಬಾರದು ಎಂದರು.
ನಾವು ಪ್ರಚಾರಕ್ಕಾಗಿ ಕೆಲಸ ಮಾಡೋದಿಲ್ಲ. ಅಭಿವೃದ್ಧಿಯ ಮಂತ್ರದೊಂದಿಗೆ ಜನರ ಮುಂದೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ. ಜನರಿಗೆ ಅದರಿಂದ ಉಪಯೋಗ ಕೂಡ ಆಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಡುವಂತೆ ಸಾಗರ ಜನತೆಯಲ್ಲಿ ಕೋರಿದರು.
ಈ ವೇಳೆ ರಂಜನ್ ಶೆಟ್ಟಿ ಹಾಜರಿದ್ದರು.