ನವದೆಹಲಿ: ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ದೇಶವು ಅತ್ಯಂತ ಬಿಸಿಯಾದ ಶಾಖವನ್ನು ಅನುಭವಿಸುವ ಸಾಧ್ಯತೆಯಿದೆ ಮತ್ತು ಮಧ್ಯ ಮತ್ತು ಪಶ್ಚಿಮ ಪರ್ಯಾಯ ದ್ವೀಪದ ಭಾಗಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.
ಈ ನಡುವೆ ಇದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಇದು ನಮ್ಮೆಲ್ಲರಿಗೂ ಅತ್ಯಂತ ಸವಾಲಿನದ್ದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಾವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವುದರಿಂದ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದರಿಂದ, ದೇಶವು ಅದಕ್ಕಾಗಿ ಮುಂಚಿತವಾಗಿ ತಯಾರಿ ನಡೆಸುವುದು ಕಡ್ಡಾಯವಾಗುತ್ತದೆ ಅಂಥ ಹೇಳಿದ್ದಾರೆ.
ಇನ್ನೂ ಇದಲ್ಲದೇ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾತನಾಡಿ, ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳ ಹೆಚ್ಚಳವು ಸಾಮಾನ್ಯ ಜನರಿಗೆ ಶಾಖದಿಂದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದು. ಜನತೆ ಮನೆಯಿಂದ ಹೊರಗೆ ಕಾಲಿಡುವುದು ಮತ್ತು ಚುನಾವಣಾ ಸಿಬ್ಬಂದಿಗೆ ತೀವ್ರ ಶಾಖಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಅಂತ ಹೇಳಿದ್ದಾರೆ.
Attended a crucial Press Conference today on the Updated Seasonal Outlook for the hot weather season (April-June) 2024, including the monthly outlook for April 2024 along with DG @Indiametdept Dr. Mrutyunjay Mohapatra & @ndmaindia official Shri Kamal Kishore.
Engaging… pic.twitter.com/nKXNznNRep
— Kiren Rijiju (मोदी का परिवार) (@KirenRijiju) April 1, 2024