ಮುಂಬೈ : ಮುಂಬೈನಲ್ಲಿ ಸೋಮವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 90 ವರ್ಷಗಳ ಸ್ಮರಣಾರ್ಥ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರನೇ ಬಾರಿಗೆ ಲೋಕಸಭೆಗೆ ಮರಳುವ ವಿಶ್ವಾಸವಿದೆ ಎಂದು ಸಂಕೇತ ನೀಡಿದರು. ಕೇಂದ್ರದಲ್ಲಿ ಮುಂದಿನ ಸರ್ಕಾರವನ್ನ ಆಯ್ಕೆ ಮಾಡಲು ಭಾರತ ಮತ ಚಲಾಯಿಸುವ ಕೆಲವೇ ವಾರಗಳ ಮೊದಲು ಅವರ ಹೇಳಿಕೆ ಬಂದಿದೆ.
ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಮರುದಿನದಿಂದ ಬರುವ “ಕೆಲಸದ ಪ್ರವಾಹ”ಕ್ಕೆ ಸಿದ್ಧರಾಗುವಂತೆ ಪಿಎಂ ಮೋದಿ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವತ್ರಿಕ ಚುನಾವಣೆಯ ನಂತ್ರ ಹೊಸ ಸರ್ಕಾರವನ್ನ ರಚಿಸುವ ವಿಶ್ವಾಸವನ್ನ ವ್ಯಕ್ತಪಡಿಸಿದ ಪ್ರಧಾನಿ, ಭಾರತವನ್ನ ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ಸರಿಯಾದ ಶ್ರದ್ಧೆಯಿಂದ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
ಚಪ್ಪಾಳೆಗಳ ನಡುವೆ ಪಿಎಂ ಮೋದಿ, “ನಾನು ಈ 100 ದಿನಗಳ ಚುನಾವಣೆಯಲ್ಲಿ ನಿರತನಾಗಿದ್ದೇನೆ, ಆದ್ದರಿಂದ ನಿಮಗೆ ಯೋಚಿಸಲು (ಹೊಸ ನೀತಿಗಳು) ಸಾಕಷ್ಟು ಸಮಯವಿದೆ. ಯಾಕಂದ್ರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭದ ಒಂದು ದಿನದ ನಂತ್ರ ನಿಮಗೆ ಸಾಕಷ್ಟು ಕೆಲಸವಿರುತ್ತದೆ” ಎಂದರು.
ವಿಡಿಯೋ ಇಲ್ಲಿದೆ ನೋಡಿ.!
#WATCH | Mumbai: At the commemoration ceremony of 90 years of the Reserve Bank of India, PM Modi says, "I am busy with the elections for these 100 days, so you have a lot of time to think about (new policies). Because just a day after the swearing-in ceremony, you will have a lot… pic.twitter.com/vTm0BFuHiz
— ANI (@ANI) April 1, 2024
BREAKING : ಎಎಪಿ ಮಾಜಿ ಸಂಸದ ‘ಧರಮ್ವೀರ್ ಗಾಂಧಿ’ ಕಾಂಗ್ರೆಸ್ ಸೇರ್ಪಡೆ