ನವದೆಹಲಿ : 2024-25ರ ಹೊಸ ಹಣಕಾಸು ವರ್ಷದ ಮೊದಲ ವಹಿವಾಟು ಅಧಿವೇಶನವು ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಬಹಳ ಅದ್ಭುತವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಯ ಜೀವಮಾನದ ಗರಿಷ್ಠ ಮಟ್ಟವನ್ನ ಮುಟ್ಟಿವೆ. ಸೆನ್ಸೆಕ್ಸ್ 74,254.62 ಅಂಕಗಳ ದಾಖಲೆಯ ಗರಿಷ್ಠ ಮಟ್ಟವನ್ನ ತಲುಪಿದರೆ, ನಿಫ್ಟಿ 22,529.95 ಅಂಕಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಬ್ಯಾಂಕಿಂಗ್ ಮತ್ತು ಇಂಧನ ಷೇರುಗಳು ಮಾರುಕಟ್ಟೆಯಲ್ಲಿನ ಈ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿವೆ.
ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಸಹ ದೊಡ್ಡ ಏರಿಕೆಯನ್ನ ಕಂಡಿವೆ. ಈ ಏರಿಕೆಯಿಂದಾಗಿ, ಹೂಡಿಕೆದಾರರ ಸಂಪತ್ತಿನಲ್ಲಿ 6 ಲಕ್ಷ ಕೋಟಿಗೂ ಹೆಚ್ಚು ಜಿಗಿತ ಕಂಡುಬಂದಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 363 ಪಾಯಿಂಟ್ಸ್ ಏರಿಕೆ ಕಂಡು 74,014 ಪಾಯಿಂಟ್ಸ್ ತಲುಪಿದ್ದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ 135 ಪಾಯಿಂಟ್ಸ್ ಏರಿಕೆ ಕಂಡು 22,462 ಪಾಯಿಂಟ್ಸ್ ತಲುಪಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಆಸ್ತಿ ಎಷ್ಟು ಗೊತ್ತ? : ಇಲ್ಲಿದೆ ಸಂಪೂರ್ಣ ವಿವರ