ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಿನಲ್ಲೇ ರಾಜ್ಯದ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್ ಹೊರ ಬಿದ್ದಿದೆ. ಇಂದಿನಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಇಳಿಕೆ ಮಾಡಿ, 15 ವರ್ಷಗಳ ಬಳಿಕ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ( KERC ) ಅಧಿಕೃತ ಆದೇಶ ಹೊರಡಿಸಿದೆ. ಅದರಲ್ಲಿ ಎಲ್ ಟಿ ಗೃಹ ಬಳಕೆಯಲ ವಿದ್ಯುತ್ ದೀಪದ 100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್ ಗೆ 110 ಪೈಸೆ ಇಳಿಕೆ ಮಾಡಲಾಗಿದೆ. ಅಲ್ಲದೇ ಹೆಚ್.ಟಿ ವಾಣಿಜ್ಯ ಬಳಕೆಯ ಇಂಧನ ಶುಲ್ಕ ಪ್ರತಿ ಯೂನಿಟ್ ಗೆ 125ಪೈಸೆ ನಿಗದಿ ಮಾಡಿದ್ದರೇ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ ಎಂದಿದೆ.
ಇನ್ನೂ ಹೆಚ್.ಟಿ ಕೈಗಾರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಮಾಡಿದ್ದರೇ, ಡಿಮಾಂಡ್ ಶುಲ್ಕ ಪರ್ತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ. ಹೆಚ್ ಟಿ ಖಾಸಗಿ ಏತ ನೀರಾವರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 2 ರೂ ಇಳಿಕೆ ಮಾಡಲಾಗಿದೆ. ಹೆಚ್ ಟಿ ನಿವಾಸ ಅಪಾರ್ಮೆಂಟುಗಳ ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ.10ರಷ್ಟು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಎಲ್ ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಎಲ್ ಟಿ ಕೈಗಾರಿಕಾ ಸ್ಥಾವರಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 1 ರೂ ಇಳಿಕೆ ಮಾಡಲಾಗಿದೆ ಎಂದಿದೆ.
ಎಲ್ ಟಿ ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಈಗ ಚಾಲ್ತಿಯಲ್ಲಿರುವ ಸಂಜೆ 6.00 ರಿಂದ 10.00 ರವರೆಗಿನ ಗರಿಷ್ಠ ಬೇಡಿಕೆಗೆ ಸಮಯಾಧಿರಿತ ದರ (ಟಿ.ಒ.ಡಿ)ವನ್ನು ಬೆಳಿಗ್ಗೆ 6 ರಿಂದ 9 ಗಂಟೆಯವರೆಗಿನ ಗರಿಷ್ಠ ಬೇಡಿಕೆಗೆ ಸಹ ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.
ಪ್ರೋತ್ಸಾಹಕ ದರವನ್ನು ಪ್ರತಿ ಯೂನಿಟ್ಗೆ ರೂ.2ರಿಂದ,ಪ್ರತಿ ಯೂನಿಟ್ಗೆ ರೂ.1ಕ್ಕೆ ಇಳಿಸಿ ವಿಶೇಷ ಪ್ರೋತ್ಸಾಹ ಯೋಜನೆ (ಎಸ್.ಐ.ಎಸ್)ಅನ್ನು ಆರ್ಥಿಕ ವರ್ಷ 25ಕ್ಕೆ ಮುಂದುವರೆಸಿದೆ. ಆರ್ಥಿಕ ವರ್ಷ 26ರಿಂದ ಸದರಿ ಯೋಜನೆಯು ಮುಂದುವರೆಯುವುದಿಲ್ಲ ಎಂದಿದೆ.
ಕ್ರಾಸ್ ಸಬ್ಸಿಡಿ ಶುಲ್ಕಗಳನ್ನು ಕಡಿಮೆಮಾಡಲಾಗಿದೆ. ಮಾಪಕವನ್ನು ಸ್ವಯಂ ಓದುವುದನ್ನು ಎಲ್ಲಾ ಎಲ್.ಟಿ. ಸ್ಥಾವರಗಳಿಗೆ ಐಚ್ಛಿಕವಾಗಿ ಪರಿಚಯಿಸಲಾಗಿದೆ. ಇಂಧನ ಬಳಕೆ ಶುಲ್ಕಗಳಿಗೆ ಒಂದೇ ಸ್ಲಾಬ್ (ಹಂತ) ಪರಿಚಯಿಸಿರುವುದರಿಂದ, ಎಲ್.ಟಿ. ಗ್ರಾಹಕರು ತಮ್ಮ ಆವರಣದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ಥಾವರಗಳಿಗೆ ವಿದ್ಯುಚ್ಛಕ್ತಿ
ಪಡೆಯಬಹುದು ಎಂದು ಮಾಹಿತಿ ನೀಡಿದೆ.
‘ತೆರಿಗೆ ನಿಯಮ’ದಲ್ಲಿ ಯಾವುದೇ ಹೊಸ ಬದಲಾವಣೆಯಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ | New Tax Rules
ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿರುವ ಈ ‘ನಿಯಮ’ಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ!