ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀ ಸಿಡಿದೆದ್ದಿದ್ದಾರೆ. ಬಿಜೆಪಿಯ ಭದ್ರಕೋಟೆಯಾದಂತ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂಬುದಾಗಿ ಗುಡುಗಿದ್ದಾರೆ. ಈ ಮೂಲಕ 5ನೇ ಬಾರಿ ಸಂಸದರಾಗೋ ಕೇಂದ್ರ ಸಚಿವ ಜೋಶಿ ಕನಸಿಗೆ ವಿಘ್ನ ಎದುರಾದಂತೆ ಆಗಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಮ್ಮ ಮುಂದಿನ ಗುರಿ ಬೇರೇನೂ ಇಲ್ಲ. ಧಮನಕಾರಿ ಆಡಳಿತ ನಡೆಸುತ್ತಿರುವಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುವುದೇ ಆಗಿದೆ ಎಂದು ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲು ಲಿಂಗಾಯತ ಸಮುದಾಯವನ್ನು ಒಟ್ಟು ಮಾಡಲಾಗುತ್ತಿದೆ. ಜೋಶಿ ಬಿಜೆಪಿಗೆ ಅನಿವಾರ್ಯವಾದ್ರೇ, ನನಗೆ ಹೋರಾಟ ಅನಿವಾರ್ಯವಾಗಿದೆ ಎಂಬುದಾಗಿ ಗುಡುಗಿದರು.
‘ತೆರಿಗೆ ನಿಯಮ’ದಲ್ಲಿ ಯಾವುದೇ ಹೊಸ ಬದಲಾವಣೆಯಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ | New Tax Rules
ಏ.4ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ – ಡಾ.ಸಿಎನ್ ಮಂಜುನಾಥ್