ಬೆಂಗಳೂರು: ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಅಪರಿಚಿತ ಪುರಷನ ಗುರುತು ಪತ್ತೆಯಾದ್ರೇ, ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪಿರ್ಯಾದುದಾರರಾದ ನಾರಾಯಣಪ್ಪ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಎಂದಿನಂತೆ ಈ ದಿನ ದಿನಾಂಕ:-14/03/2024 ರಂದು ಬೆಳಿಗ್ಗೆ ಸುಮಾರು 7-00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದು, ಬೆಳಿಗ್ಗೆ ಸುಮಾರು 10-20 ಗಂಟೆಯ ಸಮಯದಲ್ಲಿ ಕರ್ತವ್ಯದಲ್ಲಿರುವಾಗ್ಗೆ ನೈಸ್ ಕಂಪನಿಯ ಕಂಟ್ರೋಲ್ ರೂಂನಿಂದ, ಹೊಸುರು ನೈಸ್ ರಸ್ತೆಯಿಂದ ಕನಕಪುರ ನೈಸ್ ರಸ್ತೆ ಮಾರ್ಗ ಮಧ್ಯೆ ಇರುವ ಅಂಜನಾಪುರ ಬ್ರಿಡ್ಜ್ ಹತ್ತಿರ ಮೋರಿಯಲ್ಲಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾರೆಂದು ಸಾರ್ವಜನಿಕರು ತಿಳಿಸಿರುವುದಾಗಿ ಪೋನ್ ಮೂಲಕ ತಿಳಿಸಿರುತ್ತಾರೆ ಎಂದಿದೆ.
ನಾನು ಬೆಳಿಗ್ಗೆ 10-30 ಗಂಟೆಯ ಸಮಯಕ್ಕೆ ಹೋಗಿ ನೋಡಲಾಗಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿರುವುದು, ಕಂಡುಬಂದಿರುತ್ತದೆ. ಈತನ ಮೈಮೇಲೆ ಬಲಗಾಲಿನ ಮಂಡಿಯ ಕೆಳಗೆ ತರಚಿದ ಗಾಯ, ಎಡಭಾಗದ ಎದೆಯ ಮೇಲೆ ಮತ್ತು ಕೆಳಗೆ ತರಚಿದ ಗಾಯ, ಎಡಗೈ ಮತ್ತು ಬೆರಳುಗಳ ಹತ್ತಿರ ರಕ್ತ ಗಾಯ ಕಂಡುಬಂದಿರುತ್ತದೆ. ಹಾಗೂ ಮೃತನ ಸೊಂಟದಲ್ಲಿ ಒಂದು ಬಿಳಿ ದಾರವಿದ್ದು, ಅದರಲ್ಲಿ ಎರಡು ಬೀಗದ ಕೈಗಳಿರುತ್ತವೆ. ಮೃತನ ವಾರಸುದಾರರ ಬಗ್ಗೆ ವಿಚಾರಣೆ ಮಾಡಲಾಗಿ ಇಲ್ಲಿಯವರೆಗೂ ಸಹ ಯಾರೂ ಸಹ ಪತ್ತೆಯಾಗಿರುವುದಿಲ್ಲ ಎಂದು ಹೇಳಿದೆ.
ಆದ್ದರಿಂದ ಈತನ ಸಾವು ಅನುಮಾನಾಸ್ಪದವಾಗಿದ್ದು, ಈತನ ವಾರಸುದಾರರನ್ನು ಪತ್ತೆಮಾಡಿ ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಯು.ಡಿ.ಆರ್ ನಂ 19/2024 ಕಲಂ 174 “ಸಿ” ಸಿ.ಆರ್.ಪಿ.ಸಿ ರಿತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಮೃತರ ಬಗ್ಗೆ ಮಾಹಿತಿ ದೊರೆತಲ್ಲಿ ತಲಘಟ್ಟಪುರ ಪೊಲೀಸ್ ದೂರವಾಣಿ ಸಂಖ್ಯೆ:-080-22942359 ಪೊಲೀಸ್ ಇನ್ಸಪೇಕ್ಟರ್-9480801075. ಗೆ ಅಥವಾ ದಕ್ಷಿಣ ಕಂಟ್ರೋಲ್ ರೂಂ 080-2294311 ಗೆ ಸಂಪರ್ಕಿಸಲು ಕೋರಿದೆ.
‘ತೆರಿಗೆ ನಿಯಮ’ದಲ್ಲಿ ಯಾವುದೇ ಹೊಸ ಬದಲಾವಣೆಯಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ | New Tax Rules
BIG NEWS : 2,000 ರೂಪಾಯಿ ನೋಟು ವಿನಿಮಯ / ಠೇವಣಿ ತಾತ್ಕಾಲಿಕ ಸ್ಥಗಿತ